ತೆರೆಯ ಮೇಲೆ ತಮ್ಮ ನಟನೆಯಿಂದ ಸಿನಿ ಪ್ರೇಕ್ಷಕರನ್ನು ನಗೆಗಡಲಿಗೆ ತೇಲಿಸಿದ ಜೀವವದು. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಲನಚಿತ್ರೋದ್ಯಮಕ್ಕೆ ಹೆಮ್ಮೆ ತಂದು ಕೊಟ್ಟ ಹಾಸ್ಯದಿಗ್ಗಜ ಇವರು. ತೆರೆಯ ಮೇಲೆ ಬಣ್ಣ ಹಚ್ಚಿದ್ದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲಿಲ್ಲದ ನಗು ಖುಷಿ ತಂದುಕೊಟ್ಟವರು. ಅವರ ನಟನೆಗೆ ಅವರೇ ಸರಿಸಾಟಿ. ಅವರು ಬೇರೆಯಾರು ಅಲ್ಲ. ನಮ್ಮ ನಿಮ್ಮೆಲ್ಲ ನೆಚ್ಚಿನ ಹಾಸ್ಯ ದಿಗ್ಗಜ ಬಿರಾದರ್ ಅವೆು. ಬಿರಾದಾರ್ ಅವರು ಸಿನಿಮಾಗಳಲಿ ಕೇವಲ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು, ಅವರ ನಟನೆ ಬಗ್ಗೆ ಬೆರಳ್ ತೋರಿಸಿ ಮಾತಾಡುವಂತಿಲ್ಲ. ತಮ ಸಿನಿ ಜಿವನದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರನ್ನು , ಚಿತ್ರರಂಗದ ಎಲ್ಲಾ ಹಿರಿಯರಿಯ ನಟರು ಮೆಚ್ಚುತಿದ್ದರು . ಆದರೆ ಬಿರಾದರ್ ಅವರ ಇಂದಿನ ಜೀವನ ಬಹಳ ಕಷ್ಟದ ಪರಿಸ್ಥಿತಿ ಇಂದ ಕೂಡಿದೆ. ಅವರು ನೆಲೆಸಿರುವ ಮನೆ ಎಷ್ಟು ಚಿಕ್ಕದು ಎಂದರೆ,10 ಜನ ಬಂದರೆ ನಿಲ್ಲಲು ಕೂಡ ಸಾಧ್ಯವಾಗುವುದಿಲ್ಲ ಅಷ್ಟು ಚಿಕ್ಕದು.
ಇವರೊಬ್ಬರೇ ಮಾತ್ರವಲ್ಲ, ಹೀಗೆ ಅದೆಷ್ಟೋ ಹಿರಿಯ ಹಾಸ್ಯ ಕಲಾವಿದರುಗಳು ಈ ರೀತಿಯಾದ ಸಮಸ್ಯೆಯನ್ನು ಎದುರುಸುತ್ತಿದ್ದಾರೆ. ಇಂತಹ ಕಲಾವಿದರನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗುರುತಿಸಿ ಅವರಿಗೆ ಬೇಕಾದ ಸವಲತ್ತುಗಳನ್ನು ಮಾಡಿಕೊಟ್ಟರೆ ಅವರು ದಶಕಗಳ ಸಲ್ಲಿಸಿದ ಸೇವೆಗೆ ಒಂದು ಅರ್ಥ ಸಿಗುತ್ತದೆ. ಜೊತೆಗೆ ಇನ್ನು ನೂರಾರು ಪಾತ್ರಗಳಲ್ಲಿ ಅಭಿನಯಿಸುವ ಚಿಲುಮೆ ಅವರಲ್ಲಿ ತುಂಬುತ್ತದೆ. ಇನ್ನು ಬಿರಾದರ್ ಅವರು ಕನ್ನಡ ಸಿನಿಮಾಗಳಾದ ‘ಓ ಮಲ್ಲಿಗೆ’, ‘ಅಕ್ಕ’, ‘ಹುಲಿಯಾ’, ‘ಮಠ’, ‘ಲವ್ ಟ್ರೈನಿಂಗ್ ಸ್ಕೂಲ್’ ಸೇರಿದಂತೆ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿದ್ದಾರೆ. ಜೊತೆಗಸ ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ ‘ಹ್ಯಾಂಗ್ ಟು ಡೆತ್’ ಸಿನಿಮಾದಲ್ಲೂ ಕೂಡ ನಟಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಬೋಳು ಮುಂದಲೆ, ಹಿಂಬದಿಯಲ್ಲಿ ಕೆದರಿದ ಕೂದಲು, ಬಡಕಲು ದೇಹ, ಕೀರಲು ದನಿ , ಇದು ಬಿರಾದಾರರ ಮೇಲ್ನೋಟದ ಚಹರೆ. ಇನ್ನು ಬಿರಾದರ್ ಅವರು ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ತೇಂಪುರು ಎಂಬ ಗ್ರಾಮದಲ್ಲಿ ಬಸಪ್ಪ ಮತ್ತು ನಾಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸುತ್ತಾರೆ…ಬಿರಾದರ್ ಅವರು ನಾಲ್ಕನೇ ತರಗತಿಯಲಿ ವ್ಯಾಸಾಂಗ ಮಾಡುತ್ತಿದ್ದಾಗ ತಂದೆ ವಿಧಿವಶರಾಗುತ್ತಾರೆ ಆದ ಕಾರಣ ಅವರು ಓದನ್ನು ನಿಲ್ಲಿಸಬೇಕಾದಂತಹ ಪರಿಸ್ಥಿತಿ ಬಂದೊದಗುತ್ತದೆ. ನಂತರ ಕಲಾ ಜಗ್ಗತ್ತಿಗೆ ದುಮುಕಿದ ಅವರು ನಾಟಕದ ಗೀಳು ಹಚ್ಚಿಕೊಳ್ಳುತ್ತಾರೆ. ನಂತರ ಬೆಳಗಾವಿ ಜಿಲ್ಲೆಯ ಗೋಕಾಕದ ಅಪ್ಪಾಸಾಬ್ ಅವರ ನಾಟಕ ತಂಡದಲ್ಲಿ ಬಿರಾದರ್ ಕೆಲಸ ಮಾಡುತ್ತಾರೆ.
ತದ ನಂತರ ಎಂ.ಎಸ್. ಸತ್ಯು ನಿರ್ದೇಶನದ ‘ಬರ’ ಚಿತ್ರದಲ್ಲಿ ಅನಂತನಾಗ್ ಅವರ ಸಹಾಯದಿಂದ ಸಣ್ಣ ಪಾತ್ರವೊಂದನ್ನು ಗಿಟ್ಟಿಸಿಕೊಂಡು ಬೆಳ್ಳಿ ಪರೆದಗೆ ದುಮುಕುತ್ತಾರೆ. ಅನಂತನಾಗ್ ಅವರ ಸಲಹೆಯಂತೆ ಬೆಂಗಳೂರಿಗೆ ಬಂದ ಬಿರಾದರ್ ಅವರು ತಮ್ಮ ನಟನೆಯಿಂದ ಎಲ್ಲರ ಗಮನ ಸೆಳೆದು ಬರೋಬ್ಬರಿ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.