ಸಂಬಂಧ

ಈ ಅಜ್ಜಿಯನ್ನು ಬಿಕ್ಷುಕಿ ಅಂದುಕೊಂಡರು, ನಂತರ ಸತ್ಯ ಗೊತ್ತಾಗುತ್ತಿದ್ದಂತೆ ಒಂದು ಕ್ಷಣ ಶಾಕ್!

By admin

February 08, 2020

ವಯಸ್ಸಾದ ಅಜ್ಜಿಯನ್ನು ಪೊಲೀಸರು ಅರೆಸ್ಟ್ ಮಾಡಲು ಕಾರಣವೇನು ಈ ಮಹಿಳೆ ಯಾರು ಎಂಬುದನ್ನು ತಿಳಿಯೋಣ? ಈ ನ್ಯೂಸ್ ಪ್ರಚಾರವಾಗಿರುವುದು ಗ್ರೇಟರ್ ನೋಯಿಡಾದಿಂದ. ಉತ್ತರ ಪ್ರದೇಶದ ಸರ್ಕಾರ ಅಲ್ಲಿ ಬಿಕ್ಷೆ ಬೇಡುತ್ತಿದ್ದ ಪ್ರತಿಯೊಬ್ಬರನ್ನು ವಶಕ್ಕೆ ಪಡೆದು ಕೈ ಕಾಲು ಗಟ್ಟಿ ಇರುವವರಿಗೆ ಚಿಕ್ಕ ಪುಟ್ಟ ಕೆಲಸಕ್ಕೆ ನಿರ್ಧಾರ ಹಾಗೂ ವಯಸ್ಸಾದವರನ್ನು ವೃದ್ರಾಶ್ರಮಗಳಿಗೆ ಒದಗಿಸುವ ನಿರ್ಧಾರವನ್ನು ಕೈಗೊಂಡಿತ್ತು ಅದಕ್ಕಾಗಿ ಅಲ್ಲಿ ಪ್ರತಿಯೊಬ್ಬರನ್ನು ತಮ್ಮ ವಶಕ್ಕೆ ಪಡೆಯಲು ಪೊಲೀಸರು ಮುಂದಾಗುತ್ತಾರೆ.

ಅಲ್ಲಿ ಇದ್ದ ಭಿಕ್ಷುಕರ ನಡುವೆ ಒಬ್ಬ 86 ವರ್ಷದ ಅಜ್ಜಿ ಇರುತ್ತಾಳೆ ಈ ಅಜ್ಜಿಯನ್ನು ನೋಡಿ ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಆ ಅಜ್ಜಿಯ ಬಳಿ ಒಂದು ಚಿಕ್ಕ ಚೀಲವಿರುತ್ತದೆ. ಪೊಲೀಸರು ಇದನ್ನು ನೋಡಿ ಈ ಚೀಲದಲ್ಲಿ ಏನಿದೆ ತೋರಿಸು ಎಂದು ಬಲವಂತ ಮಾಡುತ್ತಾರೆ ಆದರೂ ಈ ಅಜ್ಜಿ ಚೀಲವನ್ನು ತೋರಿಸಲಿಲ್ಲ. ತದನಂತರ ಈ ಚೀಲದಲ್ಲಿದ ಎರಡು ಲಕ್ಷವನ್ನು ನೋಡಿ ಪೊಲೀಸರು ಶಾಕ್ ಆಗುತ್ತಾರೆ. ಈ ಹಣವನ್ನು ಕಳ್ಳತನ ಮಾಡಿರಬೇಕು ಎಂದು ಅನುಮಾನ ಹುಟ್ಟುತ್ತದೆ. ನಂತರ ಇದರ ನಿಜಾಂಶ ಹೊರಬರುತ್ತದ್ದೆ.

ಈ ಅಜ್ಜಿಗೆ ಎರಡು ಗಂಡು ಮಕ್ಕಳು ಇದ್ದಾರೆ, 13 ವರ್ಷಗಳ ಹಿಂದೆ ಈ ಅಜ್ಜಿಯ ಗಂಡ ತೀರಿಕೊಳ್ಳುತ್ತಾರೆ ನಂತರ ಇವರಿಗೆ ಉತ್ತರ ಪ್ರದೇಶದ ಪರಿಧಾಬಾದ್ ನಲ್ಲಿ 10 ಎಕರೆ ಜಮೀನು ಇರುತ್ತದೆ ಈ ಜಮೀನನ್ನು ಇಬ್ಬರು ಮಕ್ಕಳು ಸಮನಾಗಿ ಅಂಚಿಕೊಂಡು ಈ ಅಜ್ಜಿಯನ್ನು ಹೊರಗೆ ಹಾಕಿ ಬಿಡುತ್ತಾರೆ. ಈ ಸಮಯದಲ್ಲಿ ಈ ಅಜ್ಜಿಗೆ ಏನು ತಿಳಿಯದೆ ನೋಯಿಡಾಗೆ ಬಂದು ಭಿಕ್ಷೆ ಬೇಡಲು ಶುರುಮಾಡುತ್ತಾರೆ. 13 ವರ್ಷಗಳ ಕಾಲ ಬಿಕ್ಷೆ ಬೇಡಿ, ಊಟಕ್ಕೆ ಮಾತ್ರ ಖರ್ಚು ಮಾಡಿ ಉಳಿದ ಹಣದಲ್ಲಿ ಈ ಎರಡು ಲಕ್ಷ ಎತ್ತಿಟ್ಟಿದ್ದೇನೆ ಎಂದು ಹೇಳುತ್ತಾರೆ.

ಇದನ್ನು ತಿಳಿದ ಪೊಲೀಸರು ಅಜ್ಜಿಯ ದೊಡ್ಡ ಮಗನಿಗೆ ಈ ವಿಚಾರವನ್ನು ತಿಳಿಸಿ ಕರೆದುಕೊಂಡು ಹೋಗಲು ತಿಳಿಸುತ್ತಾರೆ. ಆಗ ಇಬ್ಬರು ಮಕ್ಕಳು ತನ್ನ ತಾಯಿಯನ್ನು ಕರೆದುಕೊಂಡು ಹೋಗಲು ಮುಂದಾಗಲಿಲ್ಲ ತನ್ನ ತಾಯಿಯನ್ನು ಆಶ್ರಮಕ್ಕೆ ಸೇರಿಸಿಬಿಡಿ ಎಂದು ಹೇಳುತ್ತಾರೆ. ಮಕ್ಕಳು ಇಷ್ಟೆಲ್ಲಾ ನೋವನ್ನು ಕೊಟ್ಟರು ಸಹ ಈ ಅಜ್ಜಿ ತಾಯಿತನವನ್ನು ಮೆರೆದಿದ್ದಾಳೆ ಹೌದು ತನ್ನಲ್ಲಿದ್ದ ಎರಡು ಲಕ್ಷವನ್ನು ಮಕ್ಕಳಿಗೆ ಅಂಚಿಬಿಡಿ ಎಂದು ಹೇಳುತ್ತಾರೆ.

ಮಕ್ಕಳನ್ನು ತಂದೆ ತಾಯಿ ಬಹಳ ಕಷ್ಟ ಪಟ್ಟು 9 ತಿಂಗಳು ಹೆತ್ತು ಹೊತ್ತು ಸಾಕಿ ದೊಡ್ಡವರನ್ನಾಗಿ ಮಾಡಿರುತ್ತಾರೆ. ಆದರೆ ಮಕ್ಕಳು ತಾಯಿಯ ಋಣವನ್ನು ಮರೆತು ಅವರಿಗೆ ಒಂದು ಹೊತ್ತು ಊಟ ಹಾಕಲು ಹಿಂಜರಿಯುತ್ತಾರೆ ಇಂತಹ ವಿಪರ್ಯಾಸ. ಕೋಟಿ ಜನ್ಮ ವೆತ್ತಿ ಬಂದರು ಸಹ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಆದ್ದರಿಂದ ನಿಮ್ಮ ತಂದೆ ತಾಯಿಯನ್ನು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಿ.