ಸೋಮವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮನರಂಜನೆ ಸಲುವಾಗಿ ‘ಚಕ್ರವ್ಯೂಹ’ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಶೈನ್ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಚಕ್ರವನ್ನು ತಿರುಗಿಸಬೇಕಿತ್ತು. ಈ ವೇಳೆ ಮುಳ್ಳಿನ ಬಳಿ ಯಾರ ಹೆಸರು ನಿಲ್ಲುತ್ತದೋ ಅವರು ಮನೆಯ ಸದಸ್ಯರು ಹೇಳುವಂತೆ ಮಾಡಬೇಕು ಎಂದು ಹೇಳಿದ್ದರು.
ಶೈನ್ ಮೊದಲು ಚಕ್ರ ತಿರುಗಿಸಿದಾಗ ಚಂದನಾ ಅವರ ಹೆಸರು ಬಂತು. ಆಗ ಮನೆಯ ಸದಸ್ಯರು ಚಂದನಾರಿಗೆ ಕುಡಿದ ನಶೆಯಲ್ಲಿ ಇರುವಂತೆ ನಟಿಸಬೇಕು ಎಂದಿದ್ದರು. ಚಂದನಾ ಮನೆಯ ಸದಸ್ಯರು ಹೇಳಿದಂತೆ ಮಾಡಿದ್ದರು. ಇದಾದ ಬಳಿಕ ಚಕ್ರ ತಿರುಗಿಸಿದಾಗ ದೀಪಿಕಾ ಅವರ ಹೆಸರು ಬಂತು. ಈ ವೇಳೆ ಮನೆಯ ಸದಸ್ಯರು ದೀಪಿಕಾ ಅವರಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಸ್ವಿಮ್ ಮಾಡಿ ನಂತರ ನಾಟಿ ಟೀಚರ್ ಆಗಿ ಮನೆ ಮಂದಿಗೆ ಪಾಠ ಮಾಡಬೇಕು ಎಂದು ಹೇಳಿದರು.
ದೀಪಿಕಾ ಮನೆಯ ಸದಸ್ಯರ ಮಾತಿನಂತೆ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಿ ಬಳಿಕ ಎಲ್ಲರಿಗೂ ಪಾಠ ಮಾಡುತ್ತಿದ್ದರು. ಈ ವೇಳೆ ದೀಪಿಕಾ, ನಾನು ಏನು ಪಾಠ ಮಾಡುತ್ತಿದ್ದೆ ಎಂದು ಕೇಳಿದಾಗ ಕಿಶನ್ ಟೀ-ಶರ್ಟ್ ಮೇಲೆ ಎತ್ತುವುದನ್ನು ಹೇಳಿಕೊಡುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ದೀಪಿಕಾ, ಕಿಶನ್ ಅವರ ಮೈಕ್ ತೆಗೆದು ಅವರನ್ನು ಸ್ವಿಮ್ಮಿಂಗ್ ಪೂಲ್‍ನಲ್ಲಿ ಬೀಳಿಸಲು ಮುಂದಾಗಿದ್ದಾರೆ. ಈ ವೇಳೆ ಕಿಶನ್ ತಕ್ಷಣ ದೀಪಿಕಾ ಅವರನ್ನು ಅಪ್ಪಿಕೊಂಡು ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದಿದ್ದಾರೆ.
ಸ್ವಿಮ್ಮಿಂಗ್ ಪೂಲ್‍ನಲ್ಲಿ ಬೀಳುವಾಗ ದೀಪಿಕಾ ಮೈಕ್ ಧರಿಸಿದ್ದರು. ಆದರೆ ಇದನ್ನು ಅರಿಯದ ಕಿಶನ್ ತಕ್ಷಣ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಮನೆಯ ಸದಸ್ಯರು ಮೈಕ್ ಎಂದು ಕಿರುಚಿದ್ದಾರೆ. ಬಳಿಕ ಆ ಮೈಕ್ ಹಾಳಾಗಿದ್ದು, ಬಿಗ್ ಬಾಸ್ ಮನೆಯಲ್ಲಿದ್ದ ಸಕ್ಕರೆ ಡಬ್ಬವನ್ನು ತೆಗೆದುಕೊಂಡಿದ್ದಾರೆ. ಇದೆಲ್ಲಾ ಆದ ಬಳಿಕ ಕಿಶನ್ ಕ್ಯಾಮೆರಾ ಮುಂದೆ ಹೋಗಿ ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ.