ಸುದ್ದಿ

‘ಬಿಗ್ ಬಾಸ್’ ಮನೆಯಿಂದ ರಶ್ಮಿ ಔಟ್ : ಒಪನ್ ಮೈಂಡೆಡ್ ವೈಲ್ಡ್ ಕಾರ್ಡ್ ವ್ಯಕ್ತಿ ಯಾರು ಗೊತ್ತಾ?

By admin

November 04, 2019

‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ಮೂರನೇ ವಾರದ ಎಲಿಮಿನೇಶನ್ ಆಗಿದೆ. ‘ಬಿಗ್ ಬಾಸ್’ ಮನೆಯಿಂದ ಗುರುಲಿಂಗ ಸ್ವಾಮೀಜಿ, ಆಂಕರ್ ಚೈತ್ರ ವಾಸುದೇವನ್ ಹೊರ ಬಂದ ಬಳಿಕ ಇದೀಗ ಚಿತ್ರನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ. ‘ದುನಿಯಾ’ದಂತಹ ಸೂಪರ್ ಹಿಟ್ ಚಿತ್ರವನ್ನು ನೀಡಿದ ಬಳಿಕ ರಶ್ಮಿ ಅಷ್ಟಾಗಿ ಸಿನಿ ಲೋಕದಲ್ಲಿ ಕಾಣಿಸಿಕೊಂಡಿರಲಿಲ್ಲ.

‘ಬಿಗ್ ಬಾಸ್’ ಮೂಲಕ ಅದೃಷ್ಟ ಪರೀಕ್ಷೆಗೆ ದುನಿಯಾ ರಶ್ಮಿಇಳಿದಿದ್ದರು. ‘ಬಿಗ್ ಬಾಸ್’ ಶೋದಿಂದ ಸ್ಯಾಂಡಲ್ ವುಡ್ ನಲ್ಲಿ ಭಾಗ್ಯದ ಬಾಗಿಲು ತೆರೆಯ ಬಹುದು ಎಂದು ದುನಿಯಾ ರಶ್ಮಿ ಭಾವಿಸಿದ್ದರು. ಆದರೆ, ದುರಾದೃಷ್ಟವಶಾತ್ ಮೂರೇ ವಾರಕ್ಕೆ ದುನಿಯಾ ರಶ್ಮಿಯ ‘ಬಿಗ್ಬಾಸ್’ ಪಯಣ ಅಂತ್ಯವಾಗಿದೆ.

‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಲು ಈ ವಾರ ‘ಅಗ್ನಿಸಾಕ್ಷಿ’ಧಾರಾವಾಹಿಯ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ, ‘ಕಿರಿಕ್ ಪಾರ್ಟಿ’ ಖ್ಯಾತಿಯಚಂದನ್ ಆಚಾರ್, ರಾಜು ತಾಳಿಕೋಟೆ, ವಾಸುಕಿ ವೈಭವ್ ಮತ್ತು ದುನಿಯಾರಶ್ಮಿ  ನಾಮಿನೇಟ್ ಆಗಿದ್ದರು. ಐವರ ಪೈಕಿ ದುನಿಯಾ ರಶ್ಮಿಗೆ ವೀಕ್ಷಕರ ಬೆಂಬಲ ಲಭ್ಯವಾಗಿಲ್ಲ. ಹೀಗಾಗಿ ದುನಿಯಾ ರಶ್ಮಿಗೆ ಗೇಟ್ಪಾಸ್ ನೀಡಲಾಗಿದೆ.

ಒಂದ್ಕಡೆದುನಿಯಾ ರಶ್ಮಿ ಔಟ್ ಆದರೆ,ಇನ್ನೊಂದು ಕಡೆ ವೈಲ್ಡ್ ಕಾರ್ಡ್ಎಂಟ್ರಿ ರೂಪದಲ್ಲಿ ರೇಡಿಯೋ ಜಾಕಿ ಪೃಥ್ವಿ ‘ಬಿಗ್ ಬಾಸ್’ ಮನೆ ಪ್ರವೇಶಿಸಿದ್ದಾರೆ. ಪೃಥ್ವಿ ಕಾಲಿಟ್ಟ ಮೇಲೆ ‘ದೊಡ್ಮನೆ’ಯಲ್ಲಿನ ಗೇಮ್ ಪ್ಲಾನ್ಚೇಂಜ್ ಆಗುತ್ತಾ, ನೋಡಬೇಕು.