ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ಸೇಬಿಗಾಗಿ ಇಡೀ ದಿನ ಜಗಳವಾಡಿದ್ದು, ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಗಿದೆ. ಮೊನ್ನೆ ರಾತ್ರಿ ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದಾರೆ. ಆಪಲ್ ತಿನ್ನುವ ಮುನ್ನ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಗೆ ಸೇರಿದ್ದ ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ. ಚೈತ್ರ ಕೋಟೂರುಗೆ ಚಂದನ್ ಆಚಾರ್ ಅನುಮತಿ ನೀಡಿ ಸುಜಾತ ಅವರಿಗೆ ಈ ವಿಷಯವನ್ನು ತಿಳಿಸಲು ಹೇಳುತ್ತಾರೆ. ಆಪಲ್ ತಿನ್ನುವಾಗ ಅದೇ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಜೊತೆಗೂ ಹಂಚಿಕೊಂಡು ತಿಂದಿದ್ದಾರೆ.
ಮರುದಿನ ಬೆಳಗ್ಗೆ ಅಡುಗೆ ವಿಭಾಗದ ಚೀಫ್ ಆಗಿರುವ ಸುಜಾತ ಅವರು ಸೇಬು ಯಾರು ತಿಂದರು ಎಂದು ಪ್ರಶ್ನಿಸಿದ್ದಾರೆ. ಆಗ ಚೈತ್ರ ನಾನೇ ಸೇಬು ತಿಂದಿರುವುದು ಎಂದು ಹೇಳಿದ್ದಾರೆ. ಬಳಿಕ ನಾನೊಬ್ಬಳೇ ಸೇಬು ತಿನ್ನಲಿಲ್ಲ ಚಂದನ್ ಅವರಿಗೆ ಕೊಟ್ಟು, ಎಲ್ಲರಿಗೂ ಕೊಟ್ಟು ತಿಂದೆ ಎಂದು ಉತ್ತರಿಸಿದ್ದಾರೆ.
ರಾತ್ರಿ ಪರ್ಮಿಶನ್ ಕೊಟ್ಟ ಚಂದನ್ ಆಚಾರ್ ಬೆಳಗ್ಗೆ ಚೈತ್ರ ಕೋಟೂರ್ ಗೆ ಕಿರಿಕಿರಿ ಮಾಡಿದರು. ”ನನ್ನ ಜೊತೆಗೆ ಚಂದನ್ ಕೂಡ ತಿಂದರು” ಅಂತ ಚೈತ್ರ ಹೇಳಿದ್ದಕ್ಕೆ ಅದು ತಪ್ಪು ಅಂತ ಎಲ್ಲರಲ್ಲಿಯೂ ರಿಜಿಸ್ಟರ್ ಆಗಲು ಪದೇ ಪದೇ ”ಡೀಸೆನ್ಸಿ ಇಲ್ಲ” ಅಂತ ಹೇಳಿ ಹೇಳಿ ಚೈತ್ರ ಪಿತ್ತ ನೆತ್ತಿಗೇರಿಸಿದರು.ಈ ವೇಳೆ ಚೈತ್ರ, ಚಂದನ್ ಮೇಲೆ ರೇಗಾಡುತ್ತಾರೆ. ಮತ್ತೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಮುಗಿಯುವ ಲಕ್ಷಣ ಕಾಣುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಜೈ ಜಗದೀಶ್ ಜೋರಾಗಿ ಗದರುತ್ತಾರೆ.
ಬಳಿಕ ಚೈತ್ರ ಮನೆಯಲ್ಲಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.ಸುಜಾತ ಹಾಗೂ ಚಂದನ್ ವರ್ತನೆಯಿಂದ ಬೇಸತ್ತ ಚೈತ್ರ ತಿಂಡಿ ತಿನ್ನುವುದಿಲ್ಲ ಎಂದು ಹಠ ಮಾಡುತ್ತಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಎಷ್ಟೇ ಸಮಾಧಾನ ಮಾಡಿದರೂ ಚೈತ್ರ ತಿಂಡಿ ತಿನ್ನಲು ಒಪ್ಪುವುದಿಲ್ಲ. ಬಳಿಕ ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್, ಕಿಶನ್ ಸೇರಿ ಯುವತಿಯರು ಚೈತ್ರರನ್ನು ಸಮಾಧಾನ ಮಾಡುತ್ತಾರೆ.