ಸುದ್ದಿ

‘ಎಲ್ಲಾ ದೈವ ಇಚ್ಚೆ’ಅಂತ ಹೇಳಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ರೀ ಎಂಟ್ರಿಕೊಟ್ಟ ಚೈತ್ರ ಕೊಟ್ಟೂರ್…!

By admin

November 27, 2019

ಬಿಗ್ ಬಾಸ್ 7ನೇ ಸೀಸನ್ ಈಗ 7ನೇ ವಾರಕ್ಕೆ ಕಾಲಿಡುತ್ತಿದೆ .ಕಳೆದ ಎಪಿಸೋಡ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ  ನಟಿ ರಕ್ಷಾ ಸೋಮಶೇಖರ್ ಬೆನ್ನಲ್ಲೇ ಮತ್ತೊಬ್ಬ ಸದ್ಯಸ್ಯರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಎರಡನೇ ಶಾಕ್ ನೀಡಿದ್ದಾರೆ.

6 ನೇ ವಾರಂತ್ಯದಲ್ಲಿ ಮನೆಯಿಂದ ನಟಿ ಸುಜಾತ ಅವರು ಹೊರ ಹೋಗಿದ್ದೇ ತಡ ಹೊಸ ಸದ್ಯರೊಬ್ಬರನ್ನು ಬಿಗ್ ಬಾಸ್ 2ನೇ ವೈಲ್ಡ್ ಕಾರ್ಡ್ಎಂಟ್ರಿ ಮೂಲಕ ಮನೆಯೊಳಕ್ಕೆ ಕರೆಸಿಕೊಂಡಿದ್ದಾರೆ. ಬಿಗ್​​ ಬಾಸ್​ ಮನೆಗೆ ಹೊಸ ವ್ಯಕ್ತಿಯ ಆಗಮನದಿಂದ  ಸದ್ಯರಿಗೆ ಆಶ್ಚರ್ಯ ಜೊತೆಗೆ ಶಾಕ್ ಕೂಡ ಆಗಿದೆ. 2ನೇ ವೈಲ್ಡ್ ಕಾರ್ಡ್ಎಂಟ್ರಿ ಆದ  ಅವರು ನಮ್ಮ  ಕನ್ನಡ ಚಿತ್ರರಂಗದ ಅದ್ಬುತ ನಟಿ ರಕ್ಷಾ ಸೋಮಶೇಖರ್.

ವೈಲ್ಡ್ಕಾರ್ಡ್ ಎಂಟ್ರಿ ನೀಡಿದ ಬೆನ್ನಲ್ಲೇಮತ್ತೊಬ್ಬ ಸದ್ಯಸ್ಯರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಎರಡನೇ ಬಿಗ್ ಶಾಕ್ ನೀಡಿದ್ದಾರೆ. ಕಳೆದ 4 ನೇ ವಾರ ಎಲಿಮಿನೇಟ್​ ಆಗಿದ್ದ  ಚೈತ್ರಾ ಕೊಟ್ಟೂರು ಅವರು ಮತ್ತೆ  ಬಿಗ್ ಬಾಸ್ ವೈಲ್ಡ್  ಕಾರ್ಡ್ ಎಂಟ್ರಿ ಮೂಲಕ  ಮತ್ತೊಮ್ಮೆ ಮನೆಯೊಳಕ್ಕೆ ಕರೆಸಿಕೊಂಡಿದ್ದಾರೆ. ಚೈತ್ರಾ ಕೊಟ್ಟೂರು ಅವರ ಆಗಮನದಿಂದ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.

ಮನೆಯೊಳಗೆ ಕಾಲಿಡುತ್ತಿದ್ದಂತೆ ಚೈತ್ರಾ ಅವರು ಎಲ್ಲಾ ದೈವ ಇಚ್ಚೆ ಎಂದು ಹೇಳುತ್ತಾ, ಇಲ್ಲಿ ಯಾರು ಶಾಶ್ವತ ಅಲ್ಲ, ದೇವರ ಶಕ್ತಿ ಇಲ್ಲದೆ ಭೂಮಿಯಲ್ಲಿ ಒಂದು ಹುಲ್ಲು ಕೂಡ ಅಲುಗಾಡುವುದಿಲ್ಲ ಎಂದಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ನಂತರ ಮೊದಲ ಆ್ಯಪಲ್  ತಿನ್ನುತ್ತಿದ್ದೇನೆ ಎಂದು ಕ್ಯಾಮೆರಾದ ಮುಂದೆ ಹೇಳಿಕೊಂಡಿದ್ದಾರೆ.