ಜ್ಯೋತಿಷ್ಯ

ಹಾಸನ ಮೊದಲ ಸ್ಥಾನ ಬರಲು ನಾನೇ ಕಾರಣ ಎಂದ ಭವಾನಿ ರೇವಣ್ಣ!ರೋಹಿಣಿ ಸಿಂಧೂರಿ ಸಾಧನೆ ಏನೂ ಇಲ್ಲ ಎಂದು ಭವಾನಿ ರೇವಣ್ಣ ಹೇಳಿದ್ದೇನು ಗೊತ್ತಾ?

By admin

May 04, 2019

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಾಸನಕ್ಕೆ ಮೊದಲ ಸ್ಥಾನ ಬಂದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣ ಯಾರೆಂಬುವುದಕ್ಕೆ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

ಇತ್ತಿಚೆಗಷ್ಟೇ ಬಂದ sslc ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಇದಕ್ಕೆ ಸರ್ಕಾರದ ನೀತಿಗಳೇ ಕಾರಣವಾಗಿದ್ದು, ನನ್ನ ಪತ್ನಿ ಜಿಲ್ಲಾ ಪಂಚಾಯಿತಿ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ. ಇದರಲ್ಲಿ ಜಿಲಾಧಿಕಾರಿಯಾಗಿದ್ದ ರೋಹಿಣಿ ಸಿಂಧುರಿಯವರ ಪಾತ್ರ ಏನಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಇತ್ತೀಚೆಗೆ ಹೇಳಿದ್ದರು.

ಹಾಸನ ಮೊದಲ ಸ್ಥಾನ ಬರಲು ನಾನೇ ಕಾರಣ ಎಂದು ಸ್ವತಃ ಭವಾನಿ ರೇವಣ್ಣ ಅವರೇ ಹೇಳಿಕೊಂಡಿದ್ದು, ಈ ಮೂಲಕ ಪತಿ ಮಾತು ನಿಜ ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಧನೆಗೆ ಪತಿಯೇ ಸ್ಫೂರ್ತಿ, ರೋಹಿಣಿ ಸಿಂಧೂರಿ ಸಾಧನೆ ಏನೂ ಇಲ್ಲ. ರೇವಣ್ಣ ಹೇಳಿದ್ದರಲ್ಲಿ ಸತ್ಯ ಇದೆ.

ನಾನು ಜಿಲ್ಲಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಗಿದ್ದಾಗ ಹಾಸನ 31ನೇ ಸ್ಥಾನದಲ್ಲಿತ್ತು. ಪ್ರತಿ ತಿಂಗಳು ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕಾರ್ಯಕ್ರಮ ರೂಪಿಸಿದ್ದೆನು. ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದ ರೇವಣ್ಣ ಅವರೇ ಸಾಧನೆಗೆ ಸ್ಫೂರ್ತಿ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. 

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಾಧನೆ ಏನೂ ಇಲ್ಲ. ಒಂದೂವರೆ ವರ್ಷದಲ್ಲಿ ಡಿಸಿ ಮೇಡಂ ಯಾವುದೇ ಮೀಟಿಂಗ್ ಮಾಡಿಲ್ಲ. ಸುಮ್ಮನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂಬ ಪತಿ ರೇವಣ್ಣ ವಾದವನ್ನ ಭವಾನಿ ರೇವಣ್ಣ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.