ಸುದ್ದಿ

ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು…ಕಾರಣ?

By sullu suddi

May 21, 2019

ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು.

ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ ಸಾಜಿತ್ ಸ್ನೇಹಿತರು ಬರ್ಗರ್ ಪರಿಶೀಲಿಸಿದಾಗ ಅದರಲ್ಲಿ ಗಾಜಿನ ಪೀಸ್ ಇತ್ತು. ತಕ್ಷಣ ಸ್ನೇಹಿತರು ಸಾಜಿತ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

ಸಾಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆಂದು ಸ್ನೇಹಿತರು 15,000 ರೂ. ನೀಡಿದ್ದರು. ಬಳಿಕ ಮರುದಿನ ಚಿಕಿತ್ಸೆಗೆಂದು ದುಪ್ಪಟ್ಟು ಹಣವನ್ನು ಖರ್ಚು ಮಾಡಿದ್ದಾರೆ. ಈ ಬಗ್ಗೆ ಬರ್ಗರ್ ಕಿಂಗ್ ಮ್ಯಾನೇಜರ್ ಸಿದ್ಧಾರ್ಥ್ ಅವರನ್ನು ಸಂಪರ್ಕಿಸಿದಾಗ, “ಈ ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಗ್ರಾಹಕರ ದೂರಿನ ಮೇರೆಗೆ ಮೇ 18ರಂದು ಬರ್ಗರ್ ಕಿಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಆಸ್ಪತ್ರೆಯಲ್ಲಿ ಮೆಡಿಕಲ್ ರಿಪೋರ್ಟ್ ಬಂದ ನಂತರ ವಿಚಾರಣೆ ಮುಂದುವರಿಸುತ್ತೇವೆ ಎಂದು ಇನ್ಸ್ ಪೆಕ್ಟರ್ ದೀಪಕ್ ಲಾಗಡ್ ಹೇಳಿದ್ದಾರೆ.