ಹಳೆಯ ಕಾಲದಲ್ಲಿ ಜನರು ಬೆಲ್ಲವನ್ನು ಮಾತ್ರ ಸಿಹಿ ವಸ್ತುವಾಗಿ ಹೆಚ್ಚು ಸೇವಿಸುತ್ತಿದ್ದರು ಆದರೆ ಕಾಲ ಕಳೆದಂತೆ ಇತ್ತೀಚಿನ ದಿನಗಳಲ್ಲಿ ಜನರು ಸಿಹಿ ಎಂದರೆ ಸಕ್ಕರೆಯ ಮೊರೆ ಹೋಗುತ್ತಾರೆ, ಸಕ್ಕರೆ ಸಿಹಿಯಾಗಿ ಹೆಚ್ಚು ಪ್ರಚಾರ ಪಡೆದಿದೆ. ನಮ್ಮ ಆಯುರ್ವೇದದಲ್ಲಿ ಉತ್ತಮ ಆಹಾರವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ ಬೆಲ್ಲವನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 12, ಆಂಟಿಆಕ್ಸಿಡೆಂಟ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಬೆಲ್ಲವನ್ನು ತಿನ್ನುವುದು ಕಣ್ಣುಗಳಲ್ಲದೆ ಕೂದಲು, ಹೊಟ್ಟೆ ಮತ್ತು ಮೂಳೆಗಳಿಗೆ ಬಹಳಷ್ಟು ಪ್ರಯೋಜನಕಾರಿ ಎಂದು ಹೌದು ಇಂದು ನಾವು ಬೆಲ್ಲದ ಕೆಲ ಪ್ರಾಮುಖ್ಯತೆಗಳ ಬಗ್ಗೆ ವಿಸ್ತಾರವಾಗಿ ನಿಮಗೆ ಹೇಳಲಿದ್ದೇವೆ.
ಇನ್ನು ಈಗ ಎಲ್ಲಿ ನೋಡಿದರು ಅಲ್ಲಿ ಮಾಲಿನ್ಯ ಭರಿತ ವಾತಾವರಣವಿದೆ, ವಾಯು ಮಾಲಿನ್ಯದಿಂದಾಗಿ ವ್ಯಕ್ತಿಯು ಆಸ್ತಮಾದಿಂದ ಬಳಲುತ್ತಿದ್ದರೆ, ಮಲಗುವ ವೇಳೆಗೆ ಸ್ವಲ್ಪ ಬೆಲ್ಲವನ್ನು ಸೇವಿಸಿ ಮತ್ತು ರಾತ್ರಿಯಲ್ಲಿ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ ಇದು ಕೆಲವೇ ದಿನಗಳಲ್ಲಿ ಆಸ್ತಮಾದ ಸಮಸ್ಯೆಯನ್ನು ಪರಿಹರಿಸುತ್ತದೆ. ಇನ್ನು ದೇಹದ ಸುಸ್ತು ಅಥವಾ ಬಾಡಿ ವಿಕ್ನೆಸ್ ಇದ್ದವರು ರಾತ್ರಿಯಲ್ಲಿ ಸ್ವಲ್ಪ ಬೆಲ್ಲ ತಿನ್ನಿರಿ ಮತ್ತು ಮೇಲಿನಿಂದ ಒಂದು ಲೋಟ ಬಿಸಿನೀರನ್ನು ಕುಡಿಯಿರಿ, ಇದು ನಿಮ್ಮ ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇನ್ನು ನೀವು ರಕ್ತ ಹೀನತೆಯಿಂದ ಬಳಲುತ್ತಿದ್ದರೆ ಮಲಗುವ ವೇಳೆಗೆ ಬೆಲ್ಲವನ್ನು ಸೇವಿಸಿ ಮತ್ತು ಬೆಚ್ಚಗಿನ ನೀರನ್ನು ಕುಡಿಯಿರಿ ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ರಕ್ತದ ಕೊರತೆಯನ್ನು ನಿವಾರಣೆ ಮಾಡಲಾಗುತ್ತದೆ ಮತ್ತು ಈ ಪರಿಹಾರದಿಂದ ನೀವು ಕೆಲವೇ ದಿನಗಳಲ್ಲಿ ರಕ್ತಹೀನತೆ ಸಮಸ್ಯೆಯಿಂದ ದೂರಾಗುವಿರಿ.
ನಿಮಗೆ ತಿಳಿದಿರಲಿ ಖನಿಜಾಂಶ ಕಬ್ಬಿಣಾಂಶವನ್ನು ಹೊಂದಿರುವ ಬೆಲ್ಲವನ್ನು ಹಿತವಾಗಿ, ಮಿತವಾಗಿ ಪ್ರತಿದಿನ ಬೆಲ್ಲ ತಿನ್ನುವುದು ನಿಜಕ್ಕೂ ಆರೋಗ್ಯದ ಮೇಲೆ ಅದ್ಭುತ ಪರಿಣಾಮ ಬೀರಬಲ್ಲದು, ಈ ಹಿನ್ನೆಲೆಯಲ್ಲಿ ಪೂರ್ವಜರು ಬೆಲ್ಲ ತಿಂದು ನೀರು ಕುಡಿಯುತ್ತಿದ್ದರು. ಇನ್ನು ಹಲವು ರೋಗಗಳನ್ನು ಬೆಲ್ಲ ಹೇಗೆ ನಿವಾರಣೆ ಮಾಡುತ್ತದೆ ಎನ್ನುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ನೋಡಬಹುದು, ಊಟವಾದ ಮೇಲೆ ಸಣ್ಣ ತುಂಡು ಬೆಲ್ಲ ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮ ಇದು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ, ಹೀಗಾಗಿ ಮಲಬದ್ಧತೆಯನ್ನು ದೂರ ಮಾಡುತ್ತದೆ.
ಮಲಗುವಾಗ ಬೆಲ್ಲ ತಿಂದು ಮಲಗಿದ್ರೆ ನಿದ್ರೆ ಸರಿಯಾಗಿ ಬರುವುದರ ಜತೆಗೆ ಗ್ಯಾಸ್ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಮತ್ತು ಕೀಲು ನೋವು ಸಮಸ್ಯೆ ಇರುವವರು ಪ್ರತಿದಿನ ಶುಂಠಿ ಜತೆ ಬೆಲ್ಲ ಸೇವಿಸಬೇಕು, ಶುಂಠಿಯನ್ನು ಬೆಲ್ಲದ ಜತೆ ಬಿಸಿ ಮಾಡಿ ಸ್ವಲ್ಪ ಬೆಚ್ಚಗಿರುವಾಗಲೇ ತಿಂದರೆ ಗಂಟಲು ನೋವು ಶಮನವಾಗುತ್ತದೆ. ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ, ಶೀತ, ಕಫ ಇದ್ದಾಗ ಬಿಸಿ ನೀರಿನಲ್ಲಿ ಬೆಲ್ಲವನ್ನು ಕರಗಿಸಿ ಕುಡಿಯಬೇಕು ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯಬಹುದು. ನಿಯಮಿತ ಪ್ರಮಾಣದಲ್ಲಿ ಬೆಲ್ಲ ತಿನ್ನುವ ಅಭ್ಯಾಸ ದೇಹಕ್ಕೆ ಬಹಳ ಒಳ್ಳೆಯದು ಅನುಮಾನ ಇದ್ದರೆ ವೈದ್ಯರ ಬಳಿ ಕೂಡ ಈ ಬಗ್ಗೆ ಸಮಾಲೋಚನೆ ನಡೆಸಿ