ಹೌದು ಇವತ್ತಿನ ದಿನಗಳಲ್ಲಿ ನಾನು ಸುಂದರವಾಗಿ ಕಾಣಬೇಕು ಅಂತ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಇರೋ ಬಾರೋ ಮೇಕಪ್ ಕ್ರೀಮ್ ಬಳಸುತ್ತಾರೆ ಆದ್ರೂ ಅವರು ಮೊದಲಿನ ಹಾಗೆ ಇರುತ್ತಾರೆ. ಆದ್ರೆ ಈ ಪರಂಗಿ ಹಣ್ಣಿನಲ್ಲಿರುವ ಗುಣಗಳು ನಿಮ್ಮನ್ನು ಯಾವ ರೀತಿ ಕಾಣುವಂತೆ ಮಾಡುತ್ತೆ ಅನ್ನೋದು ಇಲ್ಲಿದೆ ನೋಡಿ.
ಪರಂಗಿ ಹಣ್ಣನ್ನು ರುಬ್ಬಿ. ಅದರ ಮಿಶ್ರಣವನ್ನು ಪ್ರತಿನಿತ್ಯಾ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ.
ಪರಂಗಿ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಇದನ್ನು ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ನಂತರ ಮುಖ ತೊಳೆಯುವುದರಿಂದ ಮುಖದ ಚರ್ಮ ಮೃದುವಾಗುತ್ತದೆ.
ಮೊಸರು ಹಾಗೂ ಪರಂಗಿ ಹಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆ ಕೂದಲಿನ ಬುಡಕ್ಕೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಅಲ್ಲದೆ, ಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ.
ಕಪ್ಪು ಚಹಾವನ್ನು ನೀರು ಹಾಕಿ ಕುದಿಸಿ ನಂತರ ಅದನ್ನು ಸೋಸಿ, ಅದರಲ್ಲಿ ಬರುವ ತೊಗಡನ್ನು ತೆಗೆದುಕೊಂಡು ಪರಂಗಿ ಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖದಲ್ಲಿನ ಜಿಡ್ಡು ನಿವಾರಣೆಯಾಗುತ್ತದೆ.
ಪರಂಗಿ ಹಣ್ಣಿನ ಬೀಜ ಹಾಗೂ ಸ್ವಲ್ಪ ಪರಂಗಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ.