ಸುದ್ದಿ

ವಿಜ್ಞಾನದ ಪ್ರಕಾರ ಈಕೆ ಜಗತ್ತಿನ ಅತ್ಯಂತ ಸುಂದರವಾದ ಮಹಿಳೆ,! ಯಾಕೆ ಗೊತ್ತಾ,.??

By admin

October 23, 2019

ಸೌಂದರ್ಯ ಮತ್ತು ಸುಂದರವಾಗಿ  ಕಾಣಲು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಹಾಗೆಯೇ ವಾಷಿಂಗ್ಟನ್‌ ಅಮೆರಿಕದ ಸೂಪರ್‌ ಮಾಡೆಲ್‌  ಆದ ಬೆಲ್ಲಾ ಹದೀದ್‌ರನ್ನು ವಿಶ್ವದ ಅತೀ ಸುಂದರ ಮಹಿಳೆ ಎಂದು ಘೋಷಣೆ ಮಾಡಲಾಗಿದೆ.ಯಾಕೆಂದರೆ  ವೈಜ್ಞಾನಿಕವಾಗಿ ಪರೀಕ್ಷಿಸಿ ಆಕೆಗೆ ಈ ಬಿರುದು ನೀಡಲಾಗಿದೆ ಎಂದು ತಿಳಿಸಲಾಗಿದೆ.

ಸೌಂದರ್ಯ ಅಳೆಯುವ ಗ್ರೀಕ್‌ ಪದ್ಧತಿಯಾದ ‘ಗೋಲ್ಡನ್‌ ರೇಶ್ಯೋ ಆಫ್‌ ಬ್ಯೂಟಿ ಫಿ ಮಾನದಂಡದ ಪ್ರಕಾರ ಈ ಸೌಂದರ್ಯ ಪರೀಕ್ಷೆ ನಡೆಸಲಾಗಿದ್ದು, ಬೆಲ್ಲಾ ಹದೀದ್‌ ಮುಖ ಶೇ.94.35 ರಷ್ಟುಹೋಲಿಕೆಯಾಗಿದೆ. ಹಾಗಾಗಿ ಆಕೆಯನ್ನು ಜಗತ್ತಿನ ಅತೀ ಸುಂದರ ಮಹಿಳೆ ಎಂದು ಗುರುತಿಸಲಾಗಿದೆ.

ಫೇಶಿಯಲ್‌ ಕಾಸ್ಮೆಟಿಕ್‌ ಸರ್ಜನ್‌ ಡಾ. ಜೂಲಿಯನ್‌ ಡೆ ಸೆಲ್ವಾ ಈ ಪರೀಕ್ಷೆ ನಡೆಸಿದ್ದು, 23ರ ಹರೆಯದ ಹದೀದ್‌ ಮೊದಲ ಸ್ಥಾನ ಪಡೆದರೆ, ಶೇ. 92.44ರಷ್ಟು ಹೋಲಿಕೆಯಾಗುವ ಮೂಲಕ ಪಾಪ್‌ ದಿವಾ ಬಿಯಾನ್ಸ್‌ ಎರಡನೇ.

ಸ್ಥಾನ ಪಡೆದಿದ್ದಾರೆ. ಶೇ.91.85 ರಷ್ಟುಹೋಲಿಕೆಯಾಗುವ ಮೂಲಕ ನಟಿ ಅಂಬೆರ್‌ ಹರ್ಡ್‌, ಶೇ.91.81 ರಷ್ಟು ಹೋಲಿಕೆಯಾಗುವ ಮೂಲಕ ಪಾಪ್‌ ಸ್ಟಾರ್‌ ಅರಿನಾ ಗ್ರ್ಯಾಂಡ್‌ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನವನ್ನು  ಪಡೆದುಕೊಂಡಿದ್ದಾರೆ.