ಉಪಯುಕ್ತ ಮಾಹಿತಿ

ವಾರಕ್ಕೆ ಒಂದು ಬಾರಿ ಈ ನೀರನ್ನು ಕುಡಿಯುವುದರಿಂದ ಹೊಟ್ಟೆ ಸುತ್ತಲಿರುವ ಕೊಬ್ಬು ಕರಗಿ ಸುಂದರವಾಗಿ ಕಾಣುತ್ತಿರಾ..!

By admin

March 27, 2019

ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ.

* ಬಾರ್ಲಿಯಲ್ಲಿರುವ ಬೀಟಾ ಗ್ಲೂಕೋನ್ ಅಂಶ ದೇಹದೊಳಗಿನ ವಿಷಾಂಶ ಹೊರಹಾಕಲು ನೆರವಾಗುತ್ತದೆ.

* ಮೂತ್ರದ ಸೋಂಕು ಹೋಗುವವರೆಗೂ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿಯುವುದು ಒಳ್ಳೆಯದು.

* ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಉಷ್ಣದಿಂದ ಆಗುವ ಸಮಸ್ಯೆಗಳಿಗೆ ಬಾರ್ಲಿ ನೀರು ಒಳ್ಳೆಯದು.

* ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆ ಇದ್ದರೂ ಬಾರ್ಲಿ ನೀರು ಸೇವಿಸಬಹುದು.

* ದೇಹದಲ್ಲಿರುವ ಬೇಡದ ಕೊಬ್ಬಿನಂಶ ಕರಗಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೂ ಉತ್ತಮ.

* ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿಧಾನವಾಗಿ ಕರಗುತ್ತದೆ. ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

* ಅತಿಸಾರದಿಂದ ಬಳಲುತ್ತಿರುವವರಿಗೆ ತಕ್ಷಣವೇ ಒಂದು ಲೋಟ ಬಾರ್ಲಿ ನೀರನ್ನು ಕುಡಿಸುವ ಮೂಲಕ ನಿಲ್ಲಿಸಬಹುದು.

* ಬಾರ್ಲಿಯ ನೀರನ್ನು ಸೋಸಿ ಮುಖ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.