ಬ್ಯಾಂಕ್

ಶೂನ್ಯ ಬ್ಯಾಲೆನ್ಸ್ ಖಾತೆದಾರರಿಗೊಂದು ಶಾಕಿಂಗ್ ಸುದ್ದಿ ಕೊಟ್ಟ ಬ್ಯಾಂಕ್,.!!

By admin

October 16, 2019

ಐಸಿಐಸಿಐ ಬ್ಯಾಂಕ್’ಶೂನ್ಯ ಬ್ಯಾಲೆನ್ಸ್’ ಖಾತೆದಾರರು ತಮ್ಮ ಶಾಖೆಗಳಲ್ಲಿ ಮಾಡುವ ಪ್ರತಿ ನಗದು ವಿತ್ ಡ್ರಾವಲ್ ಮೇಲೆರೂ. 100 ರಿಂದ 125 ವರೆಗೆ ಶುಲ್ಕವನ್ನು ಭರಿಸಬೇಕಾಗುತ್ತದೆ. ಜಿರೋ ಬ್ಯಾಲೆನ್ಸ್ ಖಾತೆದಾರರು ಮಾಡುವ ಪ್ರತಿ ನಗದು ಹಿಂಪಡೆಯುವಿಕೆ ಮೇಲೆ ರೂ. 100-125 ಶುಲ್ಕ ವಿಧಿಸುವ ಜೊತೆಗೆ ಕರೆನ್ಸಿ ಮರುಬಳಕೆ ಮೇಲೆಮಾಡುವ ನಗದು ಠೇವಣಿ ಮೇಲೂ ಶುಲ್ಕ ವಿಧಿಸಲು ಐಸಿಐಸಿಐ ಬ್ಯಾಂಕ್ ನಿರ್ಧರಿಸಿದೆ. ಇದೇ ಸಂದರ್ಭ, ಎಲ್ಲಆನ್ಲೈನ್ ವ್ಯವಹಾರ ಸೇವೆಗಳ ಮೇಲೆ ಶುಲ್ಕ ತೆಗೆದಿರುವ ಐಸಿಐಸಿಐ ಬ್ಯಾಂಕ್, ಡಿಜಿಟಲ್ ವ್ಯವಹಾರವನ್ನುಉತ್ತೇಜಿಸಲು ಮುಂದಾಗಿರುವುದಾಗಿ ತಿಳಿಸಿದೆ.

ಮೊಬೈಲ್ ಬ್ಯಾಂಕಿಂಗ್ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ನೆಫ್ಟ್, ಆರ್ಟಿಜಿಎಸ್ ಮತ್ತು ಯುಪಿಐ ವಹಿವಾಟುಗಳ ಮೂಲಕ ಫಂಡ್ವರ್ಗಾವಣೆಯ ಎಲ್ಲಾ ಶುಲ್ಕಗಳನ್ನು ಬ್ಯಾಂಕ್ ತೆಗೆದು ಮಾಡಿದೆ. ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ10,000 ದಿಂದ 10 ಲಕ್ಷವರೆಗಿನ ನೆಫ್ಟ್ ವಹಿವಾಟು ಶುಲ್ಕವು ಪ್ರಸ್ತುತ ರೂ. 2.25 ರಿಂದ 24.75 (ಜಿಎಸ್ಟಿ)ನಡುವೆ ಇರುತ್ತದೆ. ಆರ್‌ಟಿಜಿಎಸ್ ವಹಿವಾಟಿಗೆ, ರೂ. 2 ಲಕ್ಷದಿಂದ 10 ಲಕ್ಷಗಳವರೆಗೆ ರೂ. 20 ರಿಂದ45 ರೂ. (ಜಿಎಸ್‌ಟಿ) ಇರುತ್ತದೆ.

ಹೆಚ್ಚುತ್ತಿರು ವವಂಚನೆಯ ಪ್ರಕರಣದ ದೃಷ್ಟಿಯಿಂದ,ದೇಶದ ಎರಡನೇಅತಿದೊಡ್ಡ ಖಾಸಗಿ ಬ್ಯಾಂಕ್ಐಸಿಐಸಿಐ ತನ್ನ ಗ್ರಾಹಕರನ್ನು ಎಚ್ಚರಿಸಿದೆ.ಐಸಿಐಸಿಐ ಬ್ಯಾಂಕ್ ಬ್ಯಾಂಕಿಂಗ್ ವಂಚನೆಯ ವಿರುದ್ಧ ಗ್ರಾಹಕರಿಗೆ ಅರಿವು ಮೂಡಿಸಿದ್ದು, ಹಣವನ್ನು ಸ್ವೀಕರಿಸಲು ಎಂದಿಗೂ ಪಿನ್ ಅವಶ್ಯಕತೆ ಇರುವುದಿಲ್ಲ ಎಂದು ಐಸಿಐಸಿಐ ಟ್ವೀಟ್ ಮಾಡಿದೆ. ನಿಮ್ಮಿಂದ ಹಣವನ್ನು ಸ್ವೀಕರಿಸಲು ಯಾರಾದರೂ ಪಿನ್ ಕೇಳುತ್ತಿದ್ದರೆ, ಎಚ್ಚರವಾಗಿರಬೇಕು. ಯಾವುದೇ ಅನುಮಾನಾಸ್ಪದ ಮತ್ತು ಮೋಸದ ಚಟುವಟಿಕೆಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಿ. ಇದರಿಂದ ನಿಮ್ಮ  ಹಣ ಸುರಕ್ಷಿತವಾಗಿರುತ್ತದೆ ಎಂದು ಬ್ಯಾಂಕ್  ಹೇಳಿದೆ .ಪಿನ್  ಹಾಕುವ ಮೊದಲು  ನಿಲ್ಲಿ- ಐಸಿಐಸಿಐ ಬ್ಯಾಂಕ್  ಪ್ರಕಾರ ,ಹಣವನ್ನುಸ್ವೀಕರಿಸುವ ಕೋರಿಕೆಗೆ ಪಿನ್  ಹಾಕುವ  ಮೊದಲು ಯೋಚಿಸಿ.ನೀವು ಅಂತಹ ವಿನಂತಿಯನ್ನು ಪಡೆದರೆ, ಅದು ವಂಚನೆ ವಿನಂತಿ ಎಂದು ಅರ್ಥಮಾಡಿಕೊಳ್ಳಿ.

ಹಣವನ್ನು ಸ್ವೀಕರಿಸಲು ನಿಮ್ಮ ಪಿನ್ ಅನ್ನು ಏಕೆ ನಮೂದಿಸಬೇಕು? – ಗ್ರಾಹಕರಿಂದ ಹಣವನ್ನು ಸ್ವೀಕರಿಸಲು ಬ್ಯಾಂಕ್ ಪಿನ್ ಅನ್ನು ಕೇಳುವುದಿಲ್ಲ ಎಂದು ಐಸಿಐಸಿಐ ಹೇಳುತ್ತದೆ. ಹಣವನ್ನು ಸ್ವೀಕರಿಸಲು ಪಿನ್ ಅನ್ನು ಏಕೆ ನಮೂದಿಸುವಿರಿ? ಕ್ರಮ ತೆಗೆದುಕೊಳ್ಳಿ – ಬ್ಯಾಂಕ್ ಟ್ವೀಟ್ ಪ್ರಕಾರ, ಹಣವನ್ನು ಸ್ವೀಕರಿಸಲು ವಿನಂತಿಯನ್ನು ಪಡೆದ ನಂತರ, ಚಿಂತನಶೀಲ ಕ್ರಮಗಳನ್ನು ತೆಗೆದುಕೊಳ್ಳಿ. ಇದು ವಂಚನೆ ಎಂದು ನೀವು ಅರ್ಥಮಾಡಿಕೊಳ್ಳಿ. ಪಿನ್ ಹಾಕದೆ ವಿನಂತಿಯನ್ನು ರದ್ದುಗೊಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಖಾತೆ ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ.