ಆರೋಗ್ಯ, ಉಪಯುಕ್ತ ಮಾಹಿತಿ

ಬಾಳೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ.! ಹಲವು ಜನರಿಗೆ ತಿಳಿದಿಲ್ಲ. ಈ ಮಾಹಿತಿ ನೋಡಿ.

129

ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ನಮ್ಮ ಪೂರ್ವಜರು ಏನೇ ಮಾಡಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಸತ್ಯ ಇದೆ ಎನ್ನುವ ವಿಷಯವನ್ನು ಹಲವು ಸಂಶೋಧನೆಗಳು ಕೂಡ ಒಪ್ಪಿಕೊಂಡಿವೆ. ಪ್ರಕೃತಿಯನ್ನು ದೇವರ ರೀತಿಯಲ್ಲಿ ಪೂಜಿಸುವ ನಮ್ಮ ಸಂಸ್ಕ್ರತಿ ಸಂಪ್ರದಾಯಗಳಲ್ಲಿರುವ ಪತಿ ಆಚರಣೆಯ ಹಿಂದೆ ಒಂದೊಂದು ಸೊಗಸಾದ ಆರೋಗ್ಯದ ಗುಟ್ಟುಗಳಿವೆ. ಹೌದು ಇಂದು ಇದೆ ವಿಷಯದ ಕುರಿತು ನಾವು ನಿಮಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ. ನಮ್ಮ ದೇಶದಲ್ಲಿ ಹಸಿರು ಹಸಿರಾದ ಬಾಳೆ ಎಲೆಯ ಊಟ ಇಂದು ನಿನ್ನೆಯದಲ್ಲ, ನಮ್ಮ ಪೂರ್ವಿಕರು ಇದರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಗುರುತಿಸಿ ಅದರಿಂದ ಔಷಧ ತಯಾರಿಸುವುದರ ಜತೆಗೆ ಆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಪ್ರಯೋಜನವನ್ನೂ ಹೇಳಿದ್ದಾರೆ.

ಕ್ರಮೇಣ ಈ ಧಾವಂತದ ಬದುಕಿನಲ್ಲಿ ಬಹುತೇಕ ಮರೆಯಾಗಿದ್ದ ಬಾಳೆ ಎಲೆಯ ಊಟ ಈಗ ಮತ್ತೆ ಮಹತ್ವ ಪಡೆದುಕೊಂಡಿದೆ, ಬಾಳೆ ಎಲೆಯ ಊಟದ ಮಹತ್ವ ಅದೆಷ್ಟೋ ಜನರಿಗೆ ಇಂದಿಗೂ ಕೂಡ ತಿಳಿದಿಲ್ಲ ಹೀಗಾಗಿ ಈ ಊಟದ ಕೆಲ ಸೊಗಸಾದ ಅರೋಗ್ಯ ಪ್ರಯೋಜನವೇನು ತಿಳಿಸುತ್ತೇವೆ ಕೇಳಿ. ಬಾಳೆ ಎಲೆಗಳಲ್ಲಿ ಬಡಿಸುವ ಆಹಾರವನ್ನು ತಿನ್ನುವುದು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿದೆ, ಬಾಳೆ ಎಲೆಗಳಲ್ಲಿ ನೀಡಲಾಗುವ ಆಹಾರವು ರುಚಿಯನ್ನು ಮಾತ್ರವಲ್ಲದೆ ಆರೋಗ್ಯಕರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಅನೇಕ ರೆಸ್ಟೋರೆಂಟ್‌ಗಳು ಬಾಳೆ ಎಲೆಗಳಲ್ಲಿ ಆಹಾರವನ್ನು ನೀಡಲು ಪ್ರಾರಂಭಿಸಿವೆ ಬಾಳೆ ಎಲೆಯಲ್ಲಿ ಸತತವಾಗಿ ಊಟ ಮಾಡುವದರಿಂದ ಬಿಳಿ ಕೂದಲು, ಸಂತಾನಹೀನತೆ ಮತ್ತು ಚರ್ಮ ಸಮಸ್ಯೆಗಳು ದೂರವಾಗುತ್ತವೆ. ಬಾಳೆದೆಲೆಯ ಸುತ್ತ ರಂಗೋಲಿ ಹಾಕುವ ಕ್ರಮವಿದೆ, ಸಣ್ಣ ಸಣ್ಣ ಕ್ರಿಮಿಗಳು, ಇರುವೆ ಇತ್ಯಾದಿಗಳು ಆಹಾರ ಅರಸುತ್ತ ಎಲೆಗೆ ಬರಬಾರದು ಎಂಬ ಉದ್ದೇಶದಿಂದ ಇದನ್ನು ಮಾಡಲಾಗತ್ತದೆ.

ಇನ್ನು ಈ ಕಾಲದಲ್ಲಿ ಊಟಕ್ಕೆ ಬಳಸುವ ಅದೆಷ್ಟೋ ಪ್ಲಾಸ್ಟಿಕ್ ತಟ್ಟೆಗಳು ನಮ್ಮ ದೇಹಕ್ಕೂ ಹಾಗು ಪರಿಸರಕ್ಕೂ ಕೂಡ ಹಾನಿಕಾರಕ ಎಂದು ಹಲವು ಸಂಶೋಧನೆ ಈಗಾಗಲೇ ತಿಳಿಸಿವೆ ಆದ್ದರಿಂದ ಬಾಳೆ ಎಲೆಗೆ ಬೇಡಿಕೆ ಹೆಚ್ಚು ಕಂಡುಬರುತ್ತಿದೆ. ಈ ಎಲೆಗಳು ಪರಿಸರ ಸ್ನೇಹಿ, ವಿಲೇವಾರಿ ಮಾಡುವಾಗಲೂ ಕೂಡ ಯಾವುದೇ ಸಮಸ್ಯೆ ಇರುವುದಿಲ್ಲ ಹೀಗಾಗಿ ಪರಿಸರ ಸ್ನೇಹಿ ಎಲೆಯಾಗಿ ಜನರಿಗೆ ಬಹುಪಯೋಗಿ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಈಗ ಈ ಪದ್ಧತಿ ಅನುಸರಿಸಲಾಗುತ್ತಿದೆ. ಜನಪ್ರಿಯ ಆಹಾರ ಡೆಲಿವರಿ ಕಂಪನಿಗಳು ಕೂಡ ಆಹಾರದ ಪ್ಯಾಕೇಜಿಂಗ್ ಮಾಡಲು ಈ ಎಲೆಯನ್ನೇ ಬಳಸಿಕೊಳ್ಳುತ್ತಿವೆ, ಈ ಉತ್ತಮ ಮಾಹಿತಿಯನ್ನು ಆದಷ್ಟು ಎಲ್ಲ ಜನರಿಗೆ ತಲುಪಿಸುವ ಪ್ರಯತ್ನ ಮಾಡಿ.

ನೆಲದ ಮೇಲೆ ಕುಳಿತು ಊಟ ಮಾಡುವದರಿಂದ ನಾವು ಬಾಗಿ ಊಟ ಮಾಡಬೇಕಾಗುತ್ತದೆ ಮತ್ತು ಇದರಿಂದ ಹೊಟ್ಟೆಗೆ ವ್ಯಾಯಾಮ ಬೀಳುವುದರಿಂದ ಪಚನಕ್ರಿಯೆ ಸಾರಾಗವಾಗಿ ಆಗುತ್ತದೆ. ಬಾಳೆ ಎಲೆಗಳು ಸಾಮಾನ್ಯವಾಗಿನ ಸಸ್ಯ ಆಧಾರಿತ ಸಂಯುಕ್ತಗಳಾದ ಪಾಲಿಫಿನಾಲ್‌ಗಳಾದ ಇಜಿಸಿಜಿ ಗಳಿಂದ ಮಾಡಲ್ಪಟ್ಟಿದೆ, ಬಲೇ ಎಳೆಯಲ್ಲಿ ಪಾಲಿಫಿನಾಲ್‌ಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾಗಿವೆ, ಇದು ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಬಾಳೆ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ, ಬಾಳೆ ಎಲೆಗಳು ಸೂಕ್ಷ್ಮಜೀವಿಗಳು ಮತ್ತು ಧೂಳನ್ನು ಹಿಮ್ಮೆಟ್ಟಿಸುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿವೆ ಆದ್ದರಿಂದ ಅದನ್ನು ಹೆಚ್ಚು ಶುಚಿಗೊಳಿಸುವ ಅಗತ್ಯವಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ರೈತರ ಗಮನಕ್ಕೆ: ‘ಕಿಸಾನ್ ಸಮ್ಮಾನ್’ ಗೆ ಅರ್ಜಿ ಸಲ್ಲಿಸಲು ಇನ್ನೆರಡೇ ದಿನ ಬಾಕಿ

    ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಕಿಸಾನ್ ಸಮ್ಮಾನ್’ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಅಂತಿಮ ದಿನವಾಗಿದೆ. ಇದುವರೆಗೂ ಅರ್ಜಿ ಸಲ್ಲಿಸದ ರೈತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಈ ಯೋಜನೆಯನ್ವಯ ರೈತರಿಗೆ ಒಟ್ಟು ಮೂರು ಕಂತುಗಳಲ್ಲಿ 6000 ರೂ. ಸಹಾಯ ಧನ ನೀಡಲಾಗುತ್ತಿದ್ದು, ಫಲಾನುಭವಿಗಳು ನಾಡಕಚೇರಿ, ಅಟಲ್ ಜನ ಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ ಲಭ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ರೈತರ ಖಾತೆಗೆ ನೇರವಾಗಿ ಹಣ ಬರಲಿದ್ದು,…

  • ಸುದ್ದಿ

    ಮನೆ ಬಾಗಿಲಿಗೆ ʼಈರುಳ್ಳಿʼಯನ್ನು ಅತಿ ಕಡಿಮೆ ದರದಲ್ಲಿ ತಲುಪಿಸಲು ಮುಂದಾದ ಸರ್ಕಾರ….!

    ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ. ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ…

  • ಸುದ್ದಿ

    ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿ, ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತ ಶ್ವಾನ.

    ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ,…

  • inspirational

    ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

    ಚಳಿಗೂ ಹಾರ್ಟ್ ಅಟ್ಯಾಕ್‌ಗೂ ಅದೇನೋ ಸಖ್ಯ! ಚಳಿಗಾಲದಲ್ಲಿ, ಅದೂ ನಸುಕಿನಲ್ಲೇ ಹೃದಯಾಘಾತ ಘಟಿಸುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆಆಗುವುದರಿಂದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚು ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದ್ರೋಗಗಳು ಉಲ್ಬಣಿಸುವ ಸಾಧ್ಯತೆ ಅಧಿಕ. ಇವೆಲ್ಲ ಕಾರಣಗಳಿಂದ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಲಭಿಸದೆ ಹೃದಯಾಘಾತ ಆಗುತ್ತದೆ. ಚಳಿಗಾಲದಲ್ಲಿ…

  • ಆರೋಗ್ಯ

    ಈ 5 ಕ್ರಮಗಳಿಂದ ನಿಮ್ಮ ಕೂದಲು ಉದ್ದ ಮತ್ತು ಗಟ್ಟಿಯಾಗಿ ಬೇಗ ಬೆಳೆಯುತ್ತೆ !!!

    ಬೇಗ ಕೂದಲು ಬೆಳೆದರೆ ಯಾರು ತಾನೇ ಇಷ್ಟಪಡುವುದಿಲ್ಲ? ಹೊಳೆಯುವ, ದಪ್ಪವಾದ, ಬಲವಾದ ಮತ್ತು ಉದ್ದವಾದ ಕೂದಲನ್ನು ಹೊಂದವುದು ಪ್ರತಿ ಮಹಿಳೆಯ ಕನಸಾಗಿರುತ್ತೆ.ಆದರೆ ಎಷ್ಟು ಮಂದಿ ನಿಜವಾಗಿಯೂ ಆ ಉದ್ದವಾದ ಮತ್ತು ಗಟ್ಟಿಯಾದ ಕೂದಲನ್ನು ಹೊಂದಿದ್ದಾರೆ?