ಆರೋಗ್ಯ

ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿಂದರೆ ಏನಾಗುತ್ತೆ ಗೊತ್ತಾ..?

By admin

December 04, 2018

ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಮುಂಜಾನೆಯ ಉಪಾಹಾರ ಅತ್ಯಂತ ಪ್ರಮುಖವಾಗಿದ್ದು ಉಪಾಹಾರವನ್ನು ಯಾವುದೇ ಕಾರಣಕ್ಕೂ ಬಿಡಕೂಡದು.

ಭರಪೂರ ಪೋಷಕಾಂಶಗಳಿಂದ ಕೂಡಿರೋ ತಿನಿಸನ್ನೇ ಬೆಳಗ್ಗೆ ತಿಂದರೆ ಸೂಕ್ತ. ಹಾಗಾಗಿ ಎಲ್ಲರೂ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು ತಿನ್ನಲು ಇಷ್ಟಪಡ್ತಾರೆ.ಹೆಚ್ಚಿನವರು ಬೇನಗೇ ಉದ್ಯೋಗಸ್ಥಳಕ್ಕೆ ತಲುಪುವ ಧಾವಂತದ ಕಾರಣ ಉಪಾಹಾರವನ್ನೇ ತ್ಯಜಿಸುತ್ತಾರೆ. ಇಲ್ಲದಿದ್ದರೆ ಒಂದು ಬಾಳೆಹಣ್ಣನ್ನೋ, ಸೇಬನ್ನೋ ತಿಂದು ಹೊರಟುಬಿಡುತ್ತಾರೆ.

ಆದ್ರೆ ಹಸಿದ ಹೊಟ್ಟೆಯಲ್ಲಿ ಫೈಬರ್, ಪೊಟ್ಯಾಶಿಯಂ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.ಬಾಳೆಹಣ್ಣು ಅತ್ಯಂತ ಪೌಷ್ಟಿಕ ಆಹಾರವೇನೋ ಸರಿ, ಆದರೆ ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ಬೆಳಗ್ಗಿನ ಹೊತ್ತಿನಲ್ಲಿ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಖನಿಜಗಳ ಸಮತೋಲನವನ್ನು ಏರುಪೇರು ಗೊಳಿಸಬಹುದು.

ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಅಧಿಕವಾಗಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಅಧಿಕವಾಗಿ ಅನಿಮಿಯಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ರೆ ಹಸಿದ ಹೊಟ್ಟೆಯಲ್ಲಿ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು ತಿನ್ನಬೇಕೋ ಬೇಡವೋ ಅನ್ನೋ ಬಗ್ಗೆ ಇನ್ನೂ ಚರ್ಚೆಯಾಗುತ್ತಲೇ ಇದೆ.

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಶಿಯಂ, ಫೈಬರ್ ಅಂಶ ಹೇರಳವಾಗಿದೆ. ಹಸಿವನ್ನು ಕಡಿಮೆ ಮಾಡಿ ದೇಹದಲ್ಲಿ ಚೈತನ್ಯ ಹೆಚ್ಚಿಸುತ್ತದೆ. ಬಾಳೆಹಣ್ಣಿನಲ್ಲಿರುವ ಶೇ.25ರಷ್ಟು ಸಕ್ಕರೆಯ ಅಂಶ ನಿಮಗೆ ದಿನವಿಡೀ ಬೇಕಾದಷ್ಟು ಶಕ್ತಿ ನೀಡುತ್ತದೆ. ಇದಲ್ಲದೆ ವಿಟಮಿನ್ ಬಿ ಮತ್ತು ವಿಟಮಿನ್ ಬಿ6 ಕೂಡ ಬಾಳೆಹಣ್ಣಿನಲ್ಲಿದೆ.

ಆದ್ರೆ ಹಸಿದ ಹೊಟ್ಟೆಯಲ್ಲಿ ಫೈಬರ್, ಪೊಟ್ಯಾಶಿಯಂ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಬೆಳಗ್ಗೆ ತಿಂಡಿಗೆ ಬಾಳೆಹಣ್ಣು ತಿಂದರೆ ನಿಮ್ಮಲ್ಲಿ ಚೈತನ್ಯ ಮೂಡುತ್ತದೆ. ಆದ್ರೆ ಕೆಲವು ಗಂಟೆಗಳ ಬಳಿಕ ಹೊಟ್ಟೆ ಸಂಪೂರ್ಣ ಬರಿದಾಗಿ ಬಿಡುತ್ತದೆ. ದಿಢೀರನೆ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಆಲಸ್ಯತನ ಮತ್ತು ನಿದ್ದೆಯ ಮಂಪರು ಕಾಣಿಸಿಕೊಳ್ಳಬಹುದು.

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಕರುಳಿನ ಸಮಸ್ಯೆ ಕೂಡ ಉಂಟಾಗಬಹುದು. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವ ಬದಲು ಡ್ರೈಫ್ರೂಟ್ಸ್, ಸೇಬು ಹಾಗೂ ಇತರ ಹಣ್ಣುಗಳ ಜೊತೆ ಅದನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು. ಆದ್ರೆ ಆಯುರ್ವೇದದ ಪ್ರಕಾರ ಬೆಳಗ್ಗೆ ಹಣ್ಣುಗಳ ಸೇವನೆ ಒಳ್ಳೆಯದಲ್ಲ. ಕೃತಕವಾಗಿ ಇವುಗಳನ್ನು ಹಣ್ಣುಮಾಡುವುದರಿಂದ ಅದಕ್ಕಾಗಿ ಬಳಸಿರುವ ರಾಸಾಯನಿಕ ದುಷ್ಪರಿಣಾಮ ಉಂಟುಮಾಡುತ್ತದೆ.