ಸೌಂದರ್ಯ

ತರಕಾರಿ,ಹಣ್ಣು ಸಿಪ್ಪೆ ಬಿಸಾಡಬೇಡಿ – ಇದರಿಂದಾಗುವ ಉಪಯೋಗಗಳು…..

By admin

May 16, 2019

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ : ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್‌ ಸಿ, ಬಿ6, ಕ್ಯಾಲ್ಷಿಯಂ, ಐರನ್‌ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ.

ಕಲ್ಲಂಗಡಿ ಸಿಪ್ಪೆ : ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್‌ ಎಂಬ ಅಮಿನೊ ಆ್ಯಸಿಡ್‌ ರಕ್ತದ ಪರಿಚಲನೆಯನ್ನು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ನಾಯುಗಳ ದಣಿವನ್ನು ಕಡಿಮೆಗೊಳಿಸುತ್ತದೆ. ಕಲ್ಲಂಗಡಿ ಸಿಪ್ಪೆಯಲ್ಲಿ ವಿಟಮಿನ್‌ ಸಿ ಮತ್ತು ಬಿ6 ಕೂಡಾ ಇವೆ. ಕಿವಿ ಸಿಪ್ಪೆ : ಕಂದು ಬಣ್ಣದ ಈ ಸಿಪ್ಪೆ ನಿಂಬೆ ಸಿಪ್ಪೆಯಷ್ಟು ಒಳ್ಳೆಯದು. ವಿಟಮಿನ್‌ ಸಿ, ನಾರು ಹೆಚ್ಚಿರುವ ಈ ಸಿಪ್ಪೆ ಚರ್ಮದ ಆರೋಗ್ಯಕ್ಕೆ ಉತ್ತಮ.

ಈರುಳ್ಳಿ ಸಿಪ್ಪೆ : ಕೆಂಪು, ಹಳದಿ, ಬಿಳಿ ಈರುಳ್ಳಿಯ ಸಿಪ್ಪೆಯಲ್ಲಿ ಕ್ವೆರ್ಸಿಟಿನ್‌ ಎಂಬ ಫ್ಲೆವನಾಯ್ಡ್‌ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಉರಿಯನ್ನು ಕಡಿಮೆ ಮಾಡಿ ರಕ್ತದೊತ್ತಡ ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೂ ಈರುಳ್ಳಿ ಸಿಪ್ಪೆ ಬೆಸ್ಟ್‌.

ಬಾಳೆಹಣ್ಣು ಸಿಪ್ಪೆ : ಈ ಸಿಪ್ಪೆಯಲ್ಲಿ ಟ್ರೈಪ್ಟೊಫನ್‌ ಇದ್ದು, ಇದು ಸೆರೊಟನಿನ್‌ ಎಂಬ ಹ್ಯಾಪಿನೆಸ್‌ ಹಾರ್ಮೋನ್‌ ಉತ್ಪಾದನೆ ಮಾಡುತ್ತದೆ.