ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಹಾಗೆಯೇ ಕೊಬ್ಬನ್ನು ಕರಗಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ, ಒಂದೊಂದು ಹಣ್ಣಿನಲ್ಲಿ ಒಂದೊಂದು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ನಮಗೆ ಸಿಗುತ್ತದೆ . ಹೀಗಾಗಿ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅದರ ಲಾಭಗಳು ನಮಗೆ ಸಿಗುತ್ತದೆ. ಕೆಲವು ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಲ್ಲದೆ ಇದ್ದರೂ ಅದರಲ್ಲಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇರುತ್ತದೆ. ಹಾಗೆಯೆ ಅದರಲ್ಲಿ ಅವಕಾಡೊ(ಬೆಣ್ಣೆ ಹಣ್ಣು) ಹಣ್ಣು ಕೂಡ ಒಂದಾಗಿದೆ. ಅವಕಾಡೊ ಹಣ್ಣು ಬಾಯಿಗೆ ರುಚಿಸದೆ ಇದ್ದರೂ ಇದರಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವಕಾಡೊ ಹಣ್ಣನ್ನು ಹೆಚ್ಚಿನವರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಹಿಂಜರಿಯುವರು. ಬೆಳಗ್ಗೆ ಉಪಾಹಾರಕ್ಕೆ ಅಥವಾ ರಾತ್ರಿ ಊಟದ ವೇಳೆ ಅವಕಾಡೊ ಸೇವನೆ ಮಾಡುವಂತಹ ಜನರ ಸಂಖ್ಯೆಯು ಕಡಿಮೆ. ಇದರ ರುಚಿಯ ಹೊರತಾಗಿಯೂ ಇದರಲ್ಲಿ ಯಾವ ಲಾಭಗಳು ಇವೆ ಎಂದು ನಾವು ಇಲ್ಲಿ ತಿಳಿಯೋಣ.
ಅವಕಾಡೊದ ಆಂಟಿಆಕ್ಸಿಡೆಂಟ್ ಯಾವುದಕ್ಕೆ ನೆರವಾಗುವುದು : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಆಗ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಮಾಡುವ ಅಂಶಗಳು ಅವಕಾಡೊದಲ್ಲಿ ಇದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಜನರಿಗೆ ಹೆಚ್ಚಾಗಿ ತಿಳಿದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಎಂದರೆ ಆಕ್ಸಿಡೀಕೃತ ಕಡಿಮೆ ಸಾಂದ್ರತೆಯಲಿಪೊಪ್ರೋಟೀನ್(ಎಲ್ ಡಿಎಲ್) ಮತ್ತು ಸಣ್ಣ ಸಾಂದ್ರತೆಯ ಎಲ್ ಡಿಎಲ್ ಕಣಗಳು. ಅದೇ ಒಳ್ಳೆಯಕೊಲೆಸ್ಟ್ರಾಲ್ ಎಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್(ಎಚ್ ಡಿಎಲ್).
ಸಂಶೋಧನೆ : ಸುಮಾರು21ರ ಹರೆಯದಿಂದ 70ರ ಹರೆಯದ 45 ಪುರುಷರು ಹಾಗೂ ಮಹಿಳೆಯರನ್ನು ಐದು ವಾರಗಳ ಕಾಲ ಅವಕಾಡೊ ನೀಡಿ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಗೆ ಒಳಪಟ್ಟವರು ಎಲ್ಲವರು ಅಧಿಕ ತೂಕ ಅಥವಾ ಬೊಜ್ಜು ಮತ್ತು ಎಲ್ಡಿಎಲ್ ಮಟ್ಟವನ್ನು ಹೆಚ್ಚು ಹೊಂದಿದ್ದರು. ಇವರೆಲ್ಲರಿಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಎರಡು ಬಗೆಯ ಆಹಾರ ನೀಡಲಾಯಿತು. ಇದರಲ್ಲಿ ಒಂದು ಶೇ.24ರಷ್ಟು ಕೊಬ್ಬಿನಿಂದ ಪಡೆದ ಕ್ಯಾಲರಿಯ ಹೊಂದಿರುವ ಕಡಿಮೆ ಕೊಬ್ಬಿನ ಆಹಾರ ಮತ್ತು ಎರಡನೇಯದು ಮಧ್ಯಮ ಕೊಬ್ಬು ಹೊಂದಿರುವ ಕೊಬ್ಬಿನಿಂದ ಶೇ.36ರಷ್ಟುಕ್ಯಾಲರಿ ಪಡೆಯುವ ಆಹಾರ ನೀಡಲಾಯಿತು. ಮಧ್ಯಮ ಕೊಬ್ಬು ಹೊಂದಿರುವ ಆಹಾರ ಕ್ರಮದಲ್ಲಿ ಒಂದು ಮಧ್ಯಮಗಾತ್ರದ ಅವಕಾಡೊ(136 ಗ್ರಾಂ) ನೀಡಲಾಯಿತು. ಇದರಿಂದ ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ದಿನಕ್ಕೊಂದು ಅವಕಾಡೊ ಸೇವಿಸಿದರೆ ದೇಹದಲ್ಲಿರುವ ಎಲ್ ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ .
ದಿನಕ್ಕೊಂದು ಬೆಣ್ಣೆಹಣ್ಣು : ರಕ್ತನಾಳಗಳಲ್ಲಿ ಶೇಖರಣೆ ಆಗಿರುವ ಕೊಬ್ಬಿನ ಪದರಗಳಿಂದಾಗಿ ಅಧಿಕ ಸಂಖ್ಯೆಯ ಜನರು ಹೃದಯದ ಕಾಯಿಲೆಗಳಿಂದಾಗಿ ಸಾವನ್ನಪ್ಪುವರು. ಈ ಪದರ ನಿರ್ಮಾಣವನ್ನು ಕಡಿಮೆ ಮಾಡಿದರೆ ಆಗ ಹೃದಯದ ಕಾಯಿಲೆಗಳನ್ನು ಅರ್ಧದಷ್ಟುತಡೆಗಟ್ಟಿದಂತೆ. ದಿನಕ್ಕೆ ಒಂದು ಅವಕಾಡೊ ತಿಂದರೆ ಅದರ ಲಾಭಗಳು ಸಿಗುವುದು. ಆದರೆ ಬೇಗ ಇದರ ಲಾಭಪಡೆಯಲು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅವಕಾಡೊದಲ್ಲಿ ಇರುವಂತಹ 230 ಕ್ಯಾಲರಿಯು ತೂಕಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಅದರಿಂದ ಸಿಗುವ ಲಾಭಗಳು ಸಿಗದೆ ಇರಬಹುದು. ಆದ್ದರಿಂದ ನಿಮ್ಮಆಹಾರ ಕ್ರಮದಲ್ಲಿ ಅವಕಾಡೊವನ್ನು ಸೇರಿಸಿಕೊಳ್ಳಿ ಮತ್ತು ಇದನ್ನು ಮುಂದುವರಿಸಿಕೊಂಡು ಹೋಗಿ. ಇದು ಆರೋಗ್ಯಕಾರಿ ಕೊಬ್ಬನ್ನು ನೀಡುವುದು ಮಾತ್ರವಲ್ಲದೆ, ಹೃದಯದ ಕಾಯಿಲೆ ಸಮಸ್ಯೆ ನಿವಾರಣೆಮಾಡುವುದು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನೀವು ಇದನ್ನು ತುಂಬಾ ಮಿತ ಪ್ರಮಾಣದಲ್ಲಿಸೇವನೆ ಮಾಡಬೇಕು.
ಅವಕಾಡೊಆಹಾರ ಕ್ರಮದಲ್ಲಿ ಹೇಗೆ ಸೇರಿಸಿಕೊಳ್ಳುವುದು? 136 ಗ್ರಾಂ ಅವಕಾಡೊಎಂದರೆ ಅದು ಮೂರನೇ ಎರಡುಕಪ್ ನಷ್ಟು ಗ್ವಾಕಮೋಲ್ ಗೆ ಸಮಾನವಾಗಿದೆ. ಎರಡು ತುಂಡು ಅವಕಾಡೊಟೋಸ್ಟ್ ಅಥವಾ ಅವಕಾಡೊ ಚಾಕಲೇಟ್ಟ್ರಫ್ಫೆಲ್ ಗೆ ಸಮಾನ. ನೀವುಒಂದೇ ಸಲ ಇದನ್ನು ಸೇವನೆಮಾಡಬಹುದು. ಬೆಳಗ್ಗೆ ಕೆಲವು ತುಂಡುಅವಕಾಡೊ ಜತೆಗೆ ಮೊಟ್ಟೆ, ಗ್ವಾಕಮೋಲ್ಅನ್ನು ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿಗೆಅವಕಾಡೊ ಚಾಕಲೇಟ್ ಬಳಸಿಕೊಳ್ಳಬಹುದು. ನೀವುಇದನ್ನು ಪಾಲಿಸಿದರೆ ನಿಮ್ಮ ಹೃದಯದ ಆರೋಗ್ಯವುಚೆನ್ನಾಗಿರುವುದು.