ಸಿನಿಮಾ

70 ಲಕ್ಷ ರೂಪಾಯಿ ಕಳೆದುಕೊಂಡ ಕಥೆ ಬಿಚ್ಚಿಟ್ಟ ನವರಸನಾಯಕ ಜಗ್ಗೇಶ್.

By admin

June 01, 2020

ಸಿನಿಮಾ ರಂಗದಲ್ಲಿ ‘ನವರಸನಾಯಕ’ ಜಗ್ಗೇಶ್ ಅವರಿಗೆ 40 ವರ್ಷಗಳ ಅನುಭವ ಇದೆ. ಅವರಿಗೆ ಸಿನಿಮಾ ಬಗ್ಗೆ ಸಾಕಷ್ಟು ಅನುಭವವಿದೆ. ಸೋಲು-ಗೆಲುವು ಕಂಡ ಅವರು 75 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದ್ದರು. ಈ ಸಾಲ ತೀರಿಸಲು ಮನೆ ಮಾರಿದ್ದರಂತೆ. ಇದರ ಬಗ್ಗೆ ಜಗ್ಗೇಶ್ ಹೇಳಿದ್ದೇನು?

‘ನವರಸನಾಯಕ’ ಜಗ್ಗೇಶ್ ನಟನೆ, ಮಿಮಿಕ್ರಿ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು. ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಅವರು ಸಿನಿಮಾ ಮಾಡಲು ಹೋಗಿ 70 ಲಕ್ಷ ರೂಪಾಯಿ ಕಳೆದುಕೊಂಡ ಕಥೆ ಬಿಚ್ಚಿಟ್ಟಿದ್ದಾರೆ. ಏನದು?

ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ‘ಮೇಕಪ್’ ಸಿನಿಮಾ ಬಿಡುಗಡೆಯಾಗಿದ್ದ ಸಂದರ್ಭದ ಜಾಹೀರಾತುಗಳನ್ನು ಹಂಚಿಕೊಂಡಿರುವ ಜಗ್ಗೇಶ್, ಸಿನಿಮಾ ನಿರ್ಮಿಸಿ ಅನುಭವಿಸಿದ ನಷ್ಟದ ಬಗ್ಗೆ ಹೇಳಿದ್ದಾರೆ.

ಜಗ್ಗೇಶ್ ನಿರ್ಮಾಣ ಮಾಡಿ ನಟಿಸಿದ ಚಿತ್ರ ‘ಮೇಕಪ್’. ನಿಜಕ್ಕೂ ಜಗ್ಗೇಶ್ ಈ ಸಿನಿಮಾದಲ್ಲಿ ಮೇಕಪ್ ಹಾಕಿ (ಅಜ್ಜಿ) ಪಾತ್ರದಲ್ಲಿ ಎಲ್ಲರೂ ಹುಬ್ಬೇರುವಂತೆ ನಟಿಸಿದ್ದರು. ಜಗ್ಗೇಶ್ ಈ ಸಿನಿಮಾದಲ್ಲಿ ದ್ವಿಪಾತ್ರಕ್ಕೆ ಬಣ್ಣ ಹಚ್ಚಿದ್ದರು. ದುರಾದೃಷ್ಟ ಎಂದು ಜಗ್ಗೇಶ್ ಟ್ವೀಟ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿಸಾಗ ಜಗ್ಗೇಶ್, ‘ಇದು ನನ್ನ ದುರಾದೃಷ್ಟವಲ್ಲ. ಹೊಸ ಜೀವನದ ಪಾಠವನ್ನು ದೇವರು ಕಲಿಸಿದ್ದಾನೆ.

ಅದೇ ವರ್ಷ ಮತ್ತೆ ನಾನು ಏನು ಕಳೆದುಕೊಂಡಿದ್ದೇನೋ ಅದನ್ನೇ ಮತ್ತೆ ಗಳಿಸಿದೆ. ಯಾರದೋ ದುಡ್ಡು, ಕಾಸಿದ್ದವನೆ ಬಾಸ್. ಈಗ ನಾನು ಎಲ್ಲ ರೀತಿಯ ಸಿನಿಮಾಗಳಿಗೂ ಕ್ಲಾಸ್‌ ತೆಗೆದುಕೊಳ್ಳುವ ಸಾಮರ್ಥ್ಯ ನನಗಿದೆ. ಅನುಭವ ಪಾಠ ಕಲಿಸುತ್ತದೆ. ಆಗದು ಎಂದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ’ ಎಂದು ಜಗ್ಗೇಶ್ ಹೇಳಿದ್ದಾರೆ