ಸುದ್ದಿ

ಯಾವುದೇ ರಸಗೊಬ್ಬರ ಬಳಕೆ ಮಾಡದೇ. ಅತೀ ಕಡಿಮೆ ಬೆಲೆಯಲ್ಲಿ, ಬೆಳೆಯನ್ನ ತೆಗೆದ ನಟ ಉಪೇಂದ್ರ.

By admin

June 15, 2020

ಹಲವಾರು ನಟ ನಟಿಯರು ಲಾಕ್ ಡೌನ್ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಟ ಉಪೇಂದ್ರ ಅವರು ರೈತನಂತೆ ಭೂಮಿಗಿಳಿದು ಕೃಷಿ ಮಾಡುವುದರಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ಉಪೇಂದ್ರ ಅವರು ತಮ್ಮ ಹೊಲದಲ್ಲಿ ಹೂವು, ತರಕಾರಿ ಬೆಳೆದಿದ್ದಾರೆ. ಈ ಖುಷಿಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅತೀ ಕಡಿಮೆ ಬೆಲೆಯಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಸಾಲುಗಳನ್ನು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಉಪ್ಪಿ ಬಾಸ್ ಹೇಳಿದ್ದನು ಪ್ರ್ಯಾಕ್ಟಿಕಲಿ ತೋರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೂಬ್ಬರು ಕೇವಲ ನಟನೆ ನಿರ್ದೇಶನ ಮಾತ್ರವಲ್ಲ ಎಲ್ಲದರಲ್ಲೂ ಕೂಡ ಕ್ರಿಯೇಟಿವಿಟಿ ಹೊಂದಿದ್ದಾರೆ ಎಂದೆಲ್ಲ ಹೇಳಿದ್ದಾರೆ.

ಉಪ್ಪಿ ತಾವು ಮಾಡಿದ ಕೆಲಸದ ಬಗ್ಗೆ ವಿಡಿಯೋದಲ್ಲಿ ಹೇಳಿದ್ದು ಎರಡೂವರೆ ತಿಂಗಳ ಹಿಂದೆ ನಾವು ಇಲ್ಲಿ ಸಸಿಗಳನ್ನು ನೆಟ್ಟಿದನ್ನು ನೀವು ನೋಡಿರುತ್ತೀರಾ. ಈಗ ಅದರ ಫಲ ಸಿಕ್ಕಿದೆ. ಚೆಂಡು ಹೂ, ಸೌತೆಕಾಯಿ, ಬಿಳಿ ಎರಡು ರೀತಿಯ ಬದನೇಕಾಯಿ, ಎಷ್ಟು ಅದ್ಭುತವಾಗಿದೆ ನೋಡಿ ನಾವು ಯಾವುದೇ ಕ್ರಿಮಿನಾಶಕ, ರಸಗೊಬ್ಬರ ಬಳಕೆ ಮಾಡದೇ. ಕೇವಲ ದನದ ಗೊಬ್ಬರ, ನೀರು ಹಾಕಿ ಬೆಳೆದಿದ್ದೇವೆ. ಹುಳು ಬೀಳುವುದು ಅಂತಲ್ಲ ಶೇಕಡ.5 ರಷ್ಟು ಬೀಳುತ್ತವೆ.

ಹುಳುಬಿಳುವುದು ಸಾಮಾನ್ಯ ನಮ್ಮ ಜೊತೆ ಅವೂ ಬದುಕಬೇಕಲ್ಲವೇ, ನಮ್ಮೊಂದಿಗೆ ಹುಳು ಚಿಟ್ಟೆಗಳು ಸಹ ಇರಬೇಕು. ಕ್ರಿಮಿ ನಾಶಕಗಳನ್ನು ಹೊಡೆದು ಭೂಮಿ ಹಾಳಾಗುವುದರ ಜೊತೆಗೆ, ಕೇವಲ ಶೇ.10ರಷ್ಟು ಇಳುವರಿ ಹೆಚ್ಚು ಬರುತ್ತದೆಂದು ತಪ್ಪು ಕೆಲಸ ಮಾಡುತ್ತೇವೆ. ಇದಾವುದನ್ನು ಬಳಸದೆ ಬೆಳೆದು ತೋರಿಸಬೇಕೆಂದೇ ಈ ಕೃಷಿ ಮಾಡಿದೆ. ಇಗೆ ಮಾಡಿದರೆ ಬೆಳೆದ ತರಕಾರಿಗಳು ನಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.