ಹುಟ್ಟುವ ಮಕ್ಕಳಲ್ಲಿ ಕಣ್ಣಿನ ಕ್ಯಾನ್ಸರ್ ಹೆಚ್ಚುತ್ತಿದೆ. ಪೋಷಕರು ಕ್ಯಾನ್ಸರ್‌ನ್ನು ಪತ್ತೆ ಹಚ್ಚಿ ತಕ್ಷಣವೇ ಮಗುವಿಗೆ ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆ. ಮಕ್ಕಳ ಕಣ್ಣಿನ ಕೆಳಭಾಗದಲ್ಲಿ ಬಿಳಿ ಮಚ್ಚೆ ಇದ್ದರೆ ಅಥವಾ ಮೆಳ್ಳಗಣ್ಣಿದ್ದರೆ ಎಲ್ಲಾ ಸಂದರ್ಭದಲ್ಲೂ ಅದು ಶುಭಶಕುನವಾಗಿರುವುದಿಲ್ಲ, ಸಮಸ್ಯೆಯೂ ಆಗಿರಬಹುದು ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ನಿರ್ಲಕ್ಷಿಸಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ ಕ್ಯಾನ್ಸರ್ ಕಣ ಮೆದುಳಿಗೆ ವ್ಯಾಪಿಸಿ ಪ್ರಾಣವನ್ನೇ ಬಲಿತೆಗೆದುಕೊಳ್ಳುವ ಸಾಧ್ಯತೆಯೂ ಕೂಡ ಇರುತ್ತದೆ.ರೆಟಿನೊ ಬ್ಲಾಸ್ಟೋಮಾ ಎಂಬುದು ಮಕ್ಕಳಲ್ಲಿ ಕಂಡುಬರುವ ಕಣ್ಣಿನ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿದೆ. ಆರಂಭದಲ್ಲ ಚಿಕಿತ್ಸೆ ದೊರೆತರೆ ಗುಣಪಡಿಸಬಹುದಾಗಿದೆ. ಮೇ 18ರಂದು ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಮೂಲಕ ಕಣ್ಣಿನ ಕ್ಯಾನ್ಸರ್ ಲಕ್ಷಣ ಹಾಗೂ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ರಾಮಚಂದ್ರ ತಿಳಿಸಿದ್ದಾರೆ.
ಮಕ್ಕಳಲ್ಲಿ ಬಿಳಿ ಆಕಾರದ ಮಚ್ಚೆ ಇರುವುದು ಅಥವಾ ಮೆಳ್ಳಗಣ್ಣು ಸಮಸ್ಯೆಯನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ. ಜೊತೆಗೆ ಮೊಬೈಲ್ ಫೋಟೊ ಅಥವಾ ಫ್ಲ್ಯಾಶ್ ಬಳಸಿ ಫೋಟೊದಲ್ಲಿ ಬೆಳ್ಳಗಿನ ಮಚ್ಚೆ ರೀತಿಯಲ್ಲಿ ಕಾಣಿಸಿದರೆ ಅದೂ ಕೂಡ ಕ್ಯಾನ್ಸರ್ ಲಕ್ಷಣವಾಗಿರಬಹುದು.ಇಂತಹ ಯಾವುದೇ ಲಕ್ಷಣಗಳಿದ್ದರೂ ನೇತ್ರಾಲಯಕ್ಕೆ ತೆರಳಿ ಪರೀಕ್ಷಿಸಬೇಕು