ಸುದ್ದಿ

ಅಪ್ಪಿತಪ್ಪಿಯೂ ʼಆಪಲ್ʼ ಬೀಜಗಳನ್ನು ತಿನ್ನಬೇಡಿ..!ಅದರ ಪರಿಣಾಮವೇನು ಗೊತ್ತ?

By admin

October 05, 2019

ಹಣ್ಣುಗಳ ಬೀಜಗಳಲ್ಲಿ ಪೋಷಕಗಳಿರುತ್ತವೆ ಎಂದು ಎಲ್ಲಾ ಹಣ್ಣಿನ ಬೀಜಗಳನ್ನು ತಿನ್ನುವುದು ಸರಿಯಲ್ಲ. ಏಕೆಂದರೆ ಕೆಲ ಹಣ್ಣಿನ ಬೀಜಗಳು ಪ್ರಯೋಜನಕ್ಕೆ ಬರುವುದಿಲ್ಲ.

ಅದರಲ್ಲೂ ಸೇಬು ಹಣ್ಣಿನ ಬೀಜಗಳನ್ನು ಮರೆತೂ ತಿನ್ನಬಾರದು. ಒಂದು ವೇಳೆ ಹಲ್ಲಿಗೆ ಸಿಕ್ಕಿಹಾಕಿಕೊಂಡರೆ ಗಾಬರಿ ಪಡದೆ ತಕ್ಷಣವೇ ಬಿಸಾಡಬೇಕು.

ಏಕೆಂದರೆ ಈ ಬೀಜಗಳಲ್ಲಿ ಅಮೈಡಾಲಿನ್ ಎಂಬ ಪದಾರ್ಥ ಇರುತ್ತದೆ. ಇದು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಬೀಜಗಳನ್ನು ತಿಂದರೆ ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ.

ಅಷ್ಟೇ ಅಲ್ಲ ತಲೆನೋವು, ವಾಂತಿ, ಬಲಹೀನತೆ, ತಲೆಸುತ್ತು ಇತ್ಯಾದಿ ಲಕ್ಷಣಗಳು ಉಂಟಾಗಬಹುದು. ಮಕ್ಕಳು ಇದನ್ನು ಸೇವಿಸಲೇಬಾರದು. ಒಂದೆರಡು ಬೀಜಗಳಿಂದ ಅಷ್ಟು ಪರಿಣಾಮ ಇಲ್ಲದಿದ್ದರೂ ಬಾಯಿಗೆ ಸಿಕ್ಕ ತಕ್ಷಣ ಆಪಲ್ ಬೀಜಗಳನ್ನು ಉಗಿದರೆ ಒಳ್ಳೆಯದು.