ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ೪೫ ಜನ ಸೈನಿಕರು ಹುತಾತ್ಮರಾಗಿದ್ದು, ಈ ರಕ್ಕಸರ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳಲೇಬೇಕು ಎಂದು ಪ್ರಧಾನಿ ಮೋದಿಯನ್ನು ಎಲ್ಲರೂ ಒತ್ತಾಯಿಸುತ್ತಿದ್ದಾರೆ.
ಈ ನಡುವೆ ಸಾಮಾಜಿಕ ಹೋರಾಟಗಾರ ಅಣ್ಣಾ ಅಜಾರೆ ಅವರು ಹೇಳಿರುವ ಮಾತು ಎಂತಹವರಲ್ಲೂ ರಕ್ತ ಕುದಿಯುವಂತೆ ಮಾಡಿದೆ.ನಮ್ಮ ಯೋಧರಿಗೆ ಸಹಾಯ ಮಾಡಲು ಸೇನಾ ವಾಹನದ ಡ್ರೈವರ್ ಆಗಿ ಕೆಲಸ ಮಾಡಲು ಶಕ್ತಿ ನನಗೆ ಇದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಅಣ್ಣ ಹಜಾರೆ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ವಯಸ್ಸಾಗಿದೆ, ಹೀಗಾಗಿ ಗನ್ ಹಿಡಿಯಲು ನನಗೆ ಸಾಧ್ಯವಿಲ್ಲ, ಆದರೆ ಅವಶ್ಯಕತೆ ಬಿದ್ದರೇ ನನ್ನ ದೇಶಕ್ಕಾಗಿ ಹೋರಾಡುವ ಸೈನಿಕರಿಗಾಗಿ ಸ್ಟೀರಿಂಗ್ ಹಿಡಿಯುವೆ ಎಂದು ಹೇಳಿದ್ದಾರೆ. ಕಳೆದ ಫೆಬ್ರವರಿ 5 ರಿಂದ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.