ಸಾಧನೆ

ಆಟೋ ಓಡಿಸುತ್ತಿರುವ ಈ ಮಹಿಳೆ ನಿಜಾಂಶ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್. ಅಸಲಿಗೆ ಈ ಮಹಿಳೆ ಯಾರು?

By admin

February 07, 2020

ಈ ಮಹಿಳೆ ಈ ಕೆಲಸ ಮಾಡಲು ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಶಾಕ್ ಆದರು. ಇಷ್ಟೊಂದು ಈಕೆ ಫೇಮಸ್ ಆಗಲು ಕಾರಣವಾದರೂ ಏನು? ಈ ಸುದ್ದಿ ಬಂದಿದ್ದು ಅಹಮದಾಬಾದ್ನಿಂದ. 35 ವರ್ಷದ ಅಂಕಿತ ಆಟೋ ಓಡಿಸುತ್ತಾ ಇದ್ದಾಳೆ. ಈಕೆ ಆಟೋ ಓಡಿಸಲು ಕಾರಣ ಅವರ ತಂದೆ. ಅವರ ತಂದೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆ ಬಂದ ಕಾರಣ ಅಂಕಿತಾಳೇ ಮನೆಯ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಳು. ಅಂಕಿತಾಳಿಗೆ ಇಬ್ಬರು ತಂಗಿಯರು ಕೂಡ ಇದ್ದಾರೆ.ಅವರ ಓದು, ಮದುವೆಯ ಜವಾಬ್ದಾರಿ ಎಲ್ಲವನ್ನೂ ಕೂಡ ಅಂಕಿತಾಳೆ ಹೆಗಲಮೇಲೆ ಹಾಕಿಕೊಂಡಿದ್ದಾಳೆ.

ನೀವು ಅಂದುಕೊಳ್ಳಬಹುದು ಇದೇನಿದು ದೊಡ್ಡ ವಿಷಯಾನ ಈ ರೀತಿಯ ನೂರಾರು ಘಟನೆಗಳನ್ನು ಟಿ.ವಿ.ಗಳಲ್ಲಿ ನಾವು ಪೇಪರ್ ಗಳಲ್ಲಿ ಓದಿರುತ್ತೀವಿ, ನೋಡಿರುತ್ತೀವಿ ಅಂತ. ಆದರೆ ನಿಮಗೆ ಗೊತ್ತಿಲ್ಲದೇ ಇರುವ ವಿಷಯವೇನೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೋ ಕಾರಣದಿಂದಾಗಿ ಅಂಕಿತಾಳ ಬಲಗಾಲನ್ನು ತೆಗೆಯಬೇಕಾಗಿತ್ತು. ಕೇವಲ ಒಂದು ಕಾಲಿನಿಂದಲೇ ತನ್ನ ಕುಟುಂಬದ ಭಾರವನ್ನು ಹೊರುತ್ತಿದ್ದಾಳೆ ಈ ಅಂಕಿತ.ಈ ‌ಹಿಂದೆ ಅಂಕಿತ ಕಾಲ್ ಸೆಂಟರ್ ನಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಳು. ಆದರೆ ತಿಂಗಳಿಗೆ ಕೇವಲ 8 ಸಾವಿರ ರೂಪಾಯಿ ಮಾತ್ರ ಸಂಬಳ ಸಿಗುತ್ತಿತ್ತು. ಬರುವ ಸಂಬಳದಲ್ಲಿ ಮನೆಯ ಬಾಡಿಗೆ,ತಂದೆಯ ಔಷಧಿಗಳಿಗೆ,ತಂಗಿಯರ ವಿದ್ಯಾಭ್ಯಾಸಕ್ಕೆ, ಮನೆಯ ದಿನಸಿಗೆ ಸಾಲುತ್ತಿರಲಿಲ್ಲ. ಅದಕ್ಕೆ ಆ ಕೆಲಸವನ್ನು ಬಿಟ್ಟು ಲೋನ್ ಪಡೆದುಕೊಂಡು ಒಂದು ಆಟವನ್ನು ತೆಗೆದುಕೊಂಡಳು.

ಇದರಲ್ಲಿ ಕೇವಲ ಎಂಟು ಗಂಟೆಗಳ ಕಾಲ ಕೆಲಸ ಮಾಡಿದರು ಸಹ ತಿಂಗಳಿಗೆ 20 ರಿಂದ 24 ಸಾವಿರ ರೂಪಾಯಿ ದುಡಿಯುತ್ತಿದ್ದಾಳೆ ಮತ್ತು ತನ್ನ ಕುಟುಂಬವನ್ನು ಸಂತೋಷವಾಗಿ ನೋಡಿಕೊಳ್ಳುತ್ತಿದ್ದಾಳೆ ಈ ಅಂಕಿತ. ಕೈಕಾಲು ಗಟ್ಟಿಮುಟ್ಟಾಗಿದ್ದರು ಸಹ ಕೆಲಸ ಮಾಡಲು ಹಲವರು ಸೋಂಬೇರಿಗಳಾಗಿ ಬಿಡುತ್ತಾರೆ.ಆದರೆ ಇಂತಹವರನ್ನು ನೋಡಿದಾಗ ನಮಗೂ ಕೂಡ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲೇಬೇಕೆಂಬ ಛಲ ಹುಟ್ಟಿಬರುತ್ತದೆ ಮತ್ತು ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿಯೇ ತೀರಬೇಕು ಇಲ್ಲವಾದರೆ ನಾವು ಹುಟ್ಟಿದಕ್ಕೆ ಯಾವುದೇ ಪ್ರಯೋಜನವೂ ಇರುವುದಿಲ್ಲ.