ಉಪಯುಕ್ತ ಮಾಹಿತಿ

ನೆಲ್ಲಿ ಕಾಯಿ ಜ್ಯೂಸು ಕುಡಿಯೋದ್ರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ಗೊತ್ತಾದ್ರೆ ನೀವು ಕುಡಿಯದೇ ಸುಮ್ನೆ ಇರೋಲ್ಲ..!

By admin

November 16, 2018

ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ.ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ.ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. ಫೈಬರ್, ಪ್ರೋಟೀನ್ ಮತ್ತು ಜೀವಸತ್ವಗಳಿರುವ ನೆಲ್ಲಿಕಾಯಿ, ರಕ್ತವನ್ನು ಶುದ್ಧಗೊಳಿಸಲು ಸಹಕಾರಿ.

*ಆಯುರ್ವೇದದ ಪ್ರಕಾರ ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ.ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ.ಜ್ಯೂಸ್ ಗೆ ಜೇನು ತುಪ್ಪ ಸೇರಿಸಿಕೊಂಡು ಕುಡಿಯುವುದರಿಂದ ಅಸ್ತಮಾ ದೂರವಾಗುತ್ತದೆ.

*ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

*ನೆಲ್ಲಿಕಾಯಿ ಜ್ಯೂಸ್ ನಮ್ಮ ಹೃದಯ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಬಿಪಿ ಕೂಡ ನಿಯಂತ್ರಣದಲ್ಲಿರುತ್ತದೆ.

*ಕಣ್ಣಿನ ಸಮಸ್ಯೆ ಇರುವವರಿಗೂ ನೆಲ್ಲಿಕಾಯಿ ಜ್ಯೂಸ್ ಒಳ್ಳೆಯದು.

*ಚಯಾಪಚಯಕ್ಕೆ ನೆಲ್ಲಿಕಾಯಿ ಜ್ಯೂಸ್ ಒಳ್ಳೆಯದು. ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ.

*ದಿನನಿತ್ಯ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

*ಮೊಡವೆ ದೂರ ಮಾಡಲು ನೆಲ್ಲಿಕಾಯಿ ಜ್ಯೂಸ್ ಬೆಸ್ಟ್.

* ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

*ದಿನದಲ್ಲಿ ಎರಡು ಬಾರಿ ನೆಲ್ಲಿಕಾಯಿ ಜ್ಯೂಸನ್ನು ಬಾಳೆಹಣ್ಣಿನ ಜೊತೆ ಸೇವನೆ ಮಾಡುವುದರಿಂದ ಮಹಿಳೆಯರ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

*ನೆಲ್ಲಿಕಾಯಿ ಜ್ಯೂಸ್ ಗೆ ಅರಿಶಿನ ಪುಡಿ ಹಾಗೂ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.