ಹಿಂದೂ ದೇವರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಇತ್ತೀಚೆಗೆ ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್‌ನಲ್ಲಿ ಶೂ, ರಗ್‌ಗಳು ಹಾಗೂ ಟಾಯ್ಲೆಟ್ ಸೀಟ್ ಕವರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆ ಅಮೆಜಾನ್ ವಿರುದ್ಧ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್ ಮತ್ತೆ ಟೀಕೆಗೆ ಗುರಿಯಾಗಿದೆ. ಈ ಬಾರಿ ಹಿಂದೂ ದೇವರ ಭಾವಚಿತ್ರಗಳುಳ್ಳ ಟಾಯ್ಲೆಟ್ ಸೀಟ್ ಕವರ್‌ಗಳನ್ನು, ಶೂಗಳನ್ನು ಹಾಗೂ ರಗ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿಂದೂ ದೇವರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಇತ್ತೀಚೆಗೆ ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್‌ನಲ್ಲಿ ಶೂ, ರಗ್‌ಗಳು ಹಾಗೂ ಟಾಯ್ಲೆಟ್ ಸೀಟ್ ಕವರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆ ಅಮೆಜಾನ್ ವಿರುದ್ಧ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ವಿಟರ್‌ನಲ್ಲಿ #BoycottAmazon ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.
ಈ ಸಂಬಂಧ ಟ್ವೀಟ್ ಮಾಡಿದ ಸುಶೀಲ್ ದೀಕ್ಷಿತ್ ಎಂಬಾತ ”ತಪ್ಪು ಒಂದು ಬಾರಿ ಮಾಡಿದರೂ ತಪ್ಪೇ, ಎರಡು ಬಾರಿ ಮಾಡಿದರೂ ತಪ್ಪೇ. ಆದರೆ, ಅಮೆಜಾನ್ ಮಾತ್ರ ಪ್ರತಿ ಬಾರಿಯೂ ತಪ್ಪು ಮಾಡುತ್ತಿರುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರಿಂದ ಅದಕ್ಕೆ ಖುಷಿ ಎಂದು ಕಾಣುತ್ತೆ. ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೂ ಇದೇ ರೀತಿ ಮಾಡುತ್ತೀರಾ? ಹಿಂದೂಗಳು ಸಾಫ್ಟ್ ಟಾರ್ಗೆಟ್‌ಗಳಾ ? ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಅಲ್ಲದೆ, #BoycottAmazon ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದ.
ಬಳಿಕ, ಹಲವು ನೆಟ್ಟಿಗರು ಸುಶೀಲ್ ದೀಕ್ಷಿತ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಸುಶೀಲ್ ಟ್ವೀಟ್ ವೈರಲ್ ಆಗಿದೆ. ಅಲ್ಲದೆ, ಅಮೆಜಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನ್ನು ಸಾವಿರಾರು ನೆಟ್ಟಿಗರು ಟ್ಯಾಗ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು