ಸುದ್ದಿ

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್‌ಗೆ ಸವಾಲನ್ನು ಹಾಕಿದ 16 ವರ್ಷದ ಬಾಲಕ,.!!

By admin

October 23, 2019

ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಗೆ 16ರ ಫೋರನೊಬ್ಬ ಸರಿಯಾದ ಸವಾಲನ್ನೇ ಹಾಕಿದ್ದಾನೆ. ಇದು ಈ ಎರಡು ಮಾರಾಟ ತಾಣಗಳಿಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ ಆನ್ ಲೈನ್ಎಲ್ಲ ಮಾರಾಟ ತಾಣಗಳಿಗೂ ಬಾಲಕನ ಸವಾಲು  ಅನ್ವಯವಾಗುತ್ತದೆ ಇದು ಎಲ್ಲಾ ಆನ್ಲೈನ್ ಮಾರಾಟಗಾರರು ತಿಳಿದುಕೊಳ್ಳಬೇಕಾದ ವಿಷಯ.

ಆನ್‍ಲೈನ್ ಶಾಪಿಂಗ್ ತಾಣಗಳು ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧಿಸಲು ಆಗ್ರಹಿಸಿ 16 ವರ್ಷದ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ)ಕ್ಕೆದೂರು ನೀಡಿದ್ದಾನೆ. ದೆಹಲಿಯ ಮಾಡರ್ನ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆದಿತ್ಯ ದುಬೆ ಎನ್‍ಜಿಟಿಗೆ ದೂರು ನೀಡಿದ್ದಾನೆ. ಇ-ಕಾಮರ್ಸ್ ಕಂಪನಿಗಳು ತಮ್ಮ ಸರಕು ಡೆಲಿವರಿ ಮತ್ತು ಪ್ಯಾಕ್ ಮಾಡಲು ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಅತಿಯಾಗಿ ಉಪಯೋಗಿಸುತ್ತಿವೆ. ಇದರ ಜತೆಗೆ ಗುಳ್ಳೆಗಳಿರುವ ಪ್ಲಾಸ್ಟಿಕ್ನ್ನು ಸರಕಿನ ಸುರಕ್ಷತೆಗೆ ಬಳಕೆ ಮಾಡುತ್ತಿವೆ. ಇವೆಲ್ಲವೂ ಪರಿಸರಕ್ಕೆ ಮಾರಕವಾಗಿದ್ದು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾನೆ.

ಕಂಪನಿಗಳು ತಮ್ಮ ವಸ್ತುಗಳನ್ನು ಕಳುಹಿಸಿದಾಗಲೆಲ್ಲ,ವಸ್ತುಗಳು ಹಾಳಾಗದ ಸ್ಥಿತಿಯಲ್ಲಿ ಇದ್ದರೂ ಅದಕ್ಕೆ ರಟ್ಟಿನ ಪೆಟ್ಟಿಗೆಯಿಂದ ಪ್ಯಾಕ್ಮಾಡುತ್ತಾರೆ. ಅಗತ್ಯವಿರುವ ಗಾತ್ರಕ್ಕಿಂತ ಎರಡುಪಟ್ಟು ಹೆಚ್ಚು ಕಚ್ಚಾ ವಸ್ತುಗಳನ್ನು  ಬಳಕೆ ಮಾಡುತ್ತಾರೆ . ಆನ್‍ಲೈನ್ ಶಾಪಿಂಗ್ ಗ್ರಾಹಕರಿಗೆ ತುಂಬಾ ಅನುಕೂಲವಾಗಿದೆ. ಸಮಯ ಉಳಿತಾಯ ಹಾಗೂ ಅವರಿಗೆ ಇಷ್ಟವಾದ ವಸ್ತುಗಳನ್ನು ಆನ್‍ಲೈನ್‍ನಲ್ಲಿಯೇ ಖರೀದಿಸುತ್ತಾರೆ. ಆದರೆ ಇದು ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.ಈ ಸವಾಲು ಸೃಷ್ಟಿಯಾಗಿರುವುದು ಯಾವುದೇ ಅಗತ್ಯತೆ, ಅನಿವಾರ್ಯತೆಯಿಂದಲ್ಲ ಆದರೆ ಈ ಕಂಪನಿಗಳು ಅಳವಡಿಸಿಕೊಂಡಿರುವ ಬೇಜವಾಬ್ದಾರಿಯುತ ಅಭ್ಯಾಸದಿಂದಾಗಿ ಎಂದು ದುಬೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ಅಲ್ಲದೇ ಮನವಿಯನ್ನು ಆನ್ ಲೈನ್  ತಾಣಗಳಿಗೂ ಟ್ವೀಟ್ ಮಾಡಿ ಮನವಿಯನ್ನು ಸಲ್ಲಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಾಗಿ ಇಡೀ ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧ ಮಾಡುವ ಶಪಥ ಕೈಗೊಂಡಿದ್ದರು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಪ್ಲಾಸ್ಟಿಕ್ ನ ನಿಷೇಧಕ್ಕೆ ಸಮ್ಮತಿ ಸೂಚಿಸಿ ಈಗಾಗಲೇ ಕಾರ್ಯರೂಪಕ್ಕೆ ಇಳಿಸಿವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಪ್ಲಾಸ್ಟಿಕ್ ನಿಷೇಧಕ್ಕೆ ಅಸ್ತು ಅಂತಿದೆ. ಈಗಿರುವಾಗ  ಮಾರಾಟ ಮಾಡುವವರು  ಸಹ ಇದನ್ನು ಗಮದಲ್ಲಿಟ್ಟುಕೊಳ್ಳಬೇಕೆಂದು ಹೇಳಲು ಇಷ್ಟ ಪಡುತ್ತೇನೆಂದು ಹೇಳಿದ್ದಾರೆ.