ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕ್ಯಾರವ್ಯಾನ್ ಖರೀದಿಸಿದ್ದು, ಅದರ ಬೆಲೆ 7 ಕೋಟಿ ರೂ. ಎಂದು ತಿಳಿದು ಬಂದಿದೆ. ಇದು ನೋಡಲು ಬಹಳ ಆಕರ್ಷಣಿಯವಾಗಿದೆ ಎಂದು ತಿಳಿದುಬಂದಿದೆ. ಮತ್ತು ತಾವೂ ಖರೀದಿಸಿರುವ ಹೊಸ ಕ್ಯಾರವ್ಯಾನ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲು ಅರ್ಜುನ್ ತಮಗೆ ಬೇಕಾದಂತೆ ಡಿಸೈನ್ ಮಾಡಿಸಿಕೊಂಡಿದ್ದಾರೆ. ಇದು ಕಪ್ಪು ಬಣ್ಣದ ಬಸ್ ಆಗಿದ್ದು, ಒಳಗೆ ಅತ್ಯಂತ ಸ್ಟೈಲಿಶ್ ಆಗಿ ವಿನ್ಯಾಸ ಮಾಡಲಾಗಿದೆ. ವಿಶೇಷವೆಂದರೆ ಈ ಕ್ಯಾರವ್ಯಾನ್ ಮೇಲೆ ಮತ್ತು ಒಳಗೆ ಅಲ್ಲು ಅರ್ಜುನ್ ತಮ್ಮ ಹೆಸರನ್ನ ಸೂಚಿಸಿರುವ AA ಎಂದು ಡಿಸೈನ್ ಮಾಡಿಸಿದ್ದಾರೆ.
ನಟ ಅಲ್ಲು ಅರ್ಜುನ್ ಅವರು ತಾವೂ ಖರೀದಿಸಿರುವ ಹೊಸ ಕ್ಯಾರವ್ಯಾನ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಲವು ಹೊಸ ಹೊಸ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಮಾಡರ್ನ್ ದುಬಾರಿ ವ್ಯಾನ್ ಇದಾಗಿದ್ದು, ಇದಕ್ಕೆ ಫಾಲ್ಕನ್(FALCON) ಎಂದು ಹೆಸರಿಡಲಾಗಿದೆ. ಈ ಕ್ಯಾರವ್ಯಾನ್‍ಗೆ ವ್ಯಾನಿಟಿ ವ್ಯಾನ್ ಎಂತಲೂ ಕರೆಯುತ್ತಾರೆ.
ಈ ಕ್ಯಾರವ್ಯಾನ್ ಒಳಗೆ ಸೋಫಾ, ಟಿವಿ, ಬೆಡ್ ಮತ್ತು ವೀವ್ ಪಾಯಿಂಟ್ ಸೇರಿದಂತೆ ಒಬ್ಬ ಸ್ಟಾರ್ ನಟ ಐಷಾರಾಮಿ ಜೀವನ ನಡೆಸಲು ಬೇಕಾಗುವಂತೆ ವಿನ್ಯಾಸ ಮಾಡಲಾಗಿದೆ. ಈ ಕ್ಯಾರವ್ಯಾನ್ ಇಂಟೀರಿಯರ್ ಡಿಸೈನ್‍ಗಾಗಿ ಸುಮಾರು 3.5 ಕೋಟಿ ಖರ್ಚು ಮಾಡಲಾಗಿದೆ.ಮುಂಬೈ ಮೂಲದ ರೆಡ್ಡಿ ಕಸ್ಟಮರ್ ಕಂಪನಿ ಈ ಕ್ಯಾರವ್ಯಾನ್ ಅನ್ನು ತಯಾರಿಸಿದೆ. ಈ ಬಗ್ಗೆ ನಟ ಅಲ್ಲು ಅರ್ಜುನ್ ಅವರೇ ಮಾಹಿತಿ ನೀಡಿದ್ದಾರೆ. ಜೊತೆಗೆ ಈ ಕ್ಯಾರವ್ಯಾನ್ ಒಳ ಭಾಗದ ಫೋಟೋಗಳನ್ನ ಶೇರ್ ಮಾಡಿದ್ದಾರೆ.