ಶಿವಸೇನೆ ಮುಖ್ಯಸ್ಥ ಉದ್ಧವ್ಠಾಕ್ರೆ ಮಗ ಆದಿತ್ಯ ಠಾಕ್ರೆ ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಗೆಲುವನ್ನು ದಾಖಲಿಸಿದ ಮತ್ತು ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಬೆಂಬಲಿಗರಿಂದ ಜೋರಾಗಿ ಕೇಳಿ ಬಂದಿದೆ.
ಇನ್ನು ಇದನ್ನು ಕುರಿತು ಮುಂಬೈನ ಅನೇಕ ಕಡೆ ಶಿವಸೇನಾ ಕಾರ್ಯಕರ್ತರು ಬ್ಯಾನರ್ ಹಾಕಿದ್ದು, ಅದರಲ್ಲಿ ಶಿವಸೇನೆಯ ಯುವನಾಯಕ, ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಘೋಷಣೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಮುಖ್ಯಮಂತ್ರಿ ಸ್ಥಾನವನ್ನು ಉದ್ಧವ್ ಠಾಕ್ರೆ ಮುನ್ನಡೆಸುತ್ತಿದ್ದು, ಅವರು ಇರುವಾಗಲೇ ಅವರ ಮಗನಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ. ಶಿವಸೇನೆಯ ಎದುರಾಳಿ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸುರೇಶ್ ಮನೆ ವಿರುದ್ಧ ಆದಿತ್ಯ ಠಾಕ್ರೆ 67 ಸಾವಿರ ಮತಗಳಿಂದ ಜಯಗಳಿಸಿದ್ದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಮೈತ್ರಿ ಮೂಲಕ ಶಿವಸೇನೆ-ಬಿಜೆಪಿ 160 ಸ್ಥಾನಗಳನ್ನು ಗೆದ್ದಿದ್ದು, ಉದ್ಧವ್ ಠಾಕ್ರೆ ಮೈತ್ರಿ ಪಕ್ಷದ ಎದುರು 50-50 ಡೀಲ್ ಮುಂದಿಟ್ಟಿದ್ದಾರೆ. ಈ ಮೂಲಕ ಅರ್ಧ ಅವಧಿಗೆ ಶಿವಸೇನೆ, ಮುಂದಿನ ಅರ್ಧ ಅವಧಿಗೆ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಡೀಲ್ಗೆ ಒಪ್ಪಿಗೆ ಸೂಚಿಸಿಲ್ಲ. ಇನ್ನು ಆದಿತ್ಯ ಠಾಕ್ರೆಗೆ ಈ ಸರ್ಕಾರದಲ್ಲಿ ಪ್ರಮುಖ ಸ್ಥಾನ ಸಿಗಲಿದ್ದು, ಡಿಸಿಎಂ ಆಗುವ ಸಾಧ್ಯತೆ ಇದೆ ಎಂಬ ಊಹಾಪೋಹಾಗಳು ಹರಿದಾಡುತ್ತಿವೆ .