ಆಧಾರ್ ನಲ್ಲಾದ ಈ ತಪ್ಪನ್ನು ತಿದ್ದಲು ನಿಮಗೆ ಇನ್ನೊಂದೇ ಅವಕಾಶ ಸಿಗಲಿದೆ. ಆಧಾರ್ ಕಾರ್ಡ್ ಸಿದ್ಧವಾಗಿದ್ದು, ಜನ್ಮ ದಿನಾಂಕ ತಪ್ಪಾಗಿದ್ದರೆ ಪದೇ ಪದೇ ಇದನ್ನು ಬದಲಿಸಲು ಸಾಧ್ಯವಿಲ್ಲ. ಒಮ್ಮೆ ಮಾತ್ರ ನೀವು ಜನ್ಮ ದಿನಾಂಕದಲ್ಲಿ ತಿದ್ದುಪಡಿ ಮಾಡಬಹುದು. ಇದನ್ನು ಯುಐಡಿಎಐ ಅಧಿಕೃತ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದೆ.
ವಿಳಾಸ ಬಿಟ್ಟು ಆಧಾರ್ ನಲ್ಲಾಗಿರುವ ಯಾವುದೇ ತಪ್ಪನ್ನು ತಿದ್ದಲು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜನ್ಮ ದಿನಾಂಕವನ್ನು ಕೂಡ ಆಧಾರ್ ಕೇಂದ್ರಕ್ಕೆ ಹೋಗಿಯೇ ತಿದ್ದಬೇಕು. ಜನ್ಮ ದಿನಾಂಕ ತಿದ್ದುಪಡಿ ಮಾಡುವಾಗ ಸೂಕ್ತ ದಾಖಲೆಯನ್ನು ತೆಗೆದುಕೊಂಡು ಹೋಗಬೇಕು.
ಹುಟ್ಟಿದ ದಿನಾಂಕ ಬದಲಾವಣೆಗೆ ಇನ್ನೊಂದು ಷರತ್ತು ವಿಧಿಸಲಾಗಿದೆ. ಆಧಾರ್ ಕಾರ್ಡ್ ಮುದ್ರಣಗೊಂಡು ಮೂರು ವರ್ಷದ ನಂತ್ರ ಜನ್ಮ ದಿನಾಂಕ ಬದಲಾವಣೆ ಕಷ್ಟ. ಮೂರು ವರ್ಷಕ್ಕಿಂತ ಮೊದಲು ಒಮ್ಮೆ ದಿನಾಂಕ ಬದಲಾವಣೆ ಮಾಡಬಹುದು. ಆಧಾರ್ ನಲ್ಲಿರುವ ವಿಳಾಸ, ಇಮೇಲ್ ಐಡಿ, ದೂರವಾಣಿ ನವೀಕರಣಕ್ಕೆ 50 ರೂಪಾಯಿ ನೀಡಬೇಕಾಗುತ್ತದೆ.