ಹೈದರಾಬಾದ್, ಮಕ್ಕಳು ಪಡೆಯಬೇಕೆಂಬ ಬಯಕೆ ಸಾಮಾನ್ಯವಾಗಿ ಎಲ್ಲಾ ತಾಯಿಯರಿಗೂ ಇರುತ್ತದೆ. ಆದರೆ ಒಂದು ವಯಸ್ಸಿನ ಮಿತಿಯಿರುತ್ತದೆ. ಸಾಮಾನ್ಯವಾಗಿ 50 ವಯಸ್ಸಿನ ನಂತರ ಮೆನೋಪಾಸ್ ಹಂತ ತಲುಪಿದ ಬಳಿಕ ಮಹಿಳೆಯರಿಗೆ ಗರ್ಭ ಧರಿಸುವುದು ಸಾಧ್ಯವಾಗುವುದಿಲ್ಲ. ಮೊಮ್ಮಕ್ಕಳು, ಮುಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದ್ರಾಕ್ಷಾರಾಮಮ್ ಬ್ಲಾಕ್ನ ನೆಲಪಾರ್ತಿಪಾಡು ಗ್ರಾಮದ ಈರಮಟ್ಟಿ ಮಂಗಯಮ್ಮ ಎಂಬ 74ರ ಅಜ್ಜಿ ಮದುವೆಯಾದ 54 ವರ್ಷಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಅತೀ ಹಿರಿಯ ವಯಸ್ಸಿನಲ್ಲಿ ಮಕ್ಕಳನ್ನು ಹಡೆದರೆಂಬ ಖ್ಯಾತಿಗೆ ಈ ಅಜ್ಜಿ ಪಾತ್ರರಾಗಿದ್ದಾರೆ. ಈ ಮೊದಲು ಪಂಜಾಬಿನ ಅಮೃತ್ ಸರದ 72ರ ವಯಸ್ಸಿನ ದಾಲ್ಜಿಂದರ್ ಕೌರ್ ಎಂಬುವವರು ಮಗುವಿಗೆ ಜನ್ಮ ನೀಡಿದ್ದರು. ಈರಮಟ್ಟಿ ಮಂಗಯಮ್ಮ ಆ ದಾಖಲೆಯನ್ನು ಮುರಿದಿದ್ದಾರೆ.ಇ. ರಾಜಾರಾವ್ (80) ಜತೆ 57 ವರ್ಷಗಳ ಹಿಂದೆ ಮಂಗಮ್ಮ ಮದುವೆಯಾಗಿದ್ದರು. ಅಂದಿನಿಂದ ಇವರಿಗೆ ಮಕ್ಕಳನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಹಲವು ವರ್ಷಗಳಿಂದ ಈ ದಂಪತಿ ಹರಕೆ ಹೊರದ ದೇವರಿಲ್ಲ, ಹೋಗದ ಆಸ್ಪತ್ರೆಗಳಿಲ್ಲ. ಏನೆ ಮಾಡಿದರೂ ಮಕ್ಕಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ.
74ರಲ್ಲಿ ಕನಸು ನನಸಾಯ್ತು ವಯಸ್ಸು 70 ದಾಟಿದರೂ ಮಕ್ಕಳನ್ನು ಪಡೆಯುವ ಆಸೆ ಕೈಬಿಟ್ಟಿರಲಿಲ್ಲ.ಇದೇ ಕೊರಗಿನಲ್ಲಿರುವಾಗ ತಮ್ಮ ಮನೆಯ ಬಳಿಯ ಮಹಿಳೆಯೊಬ್ಬರು ಇನ್ವರ್ಟೋ ಫರ್ಟಿಲೈಷೇಷನ್ (ಐವಿಎಫ್) ಮೂಲಕ ಮಗು ಪಡೆದ ಸುದ್ದಿ ಕೇಳಿದ ಮಂಗಯಮ್ಮ ಇದೇ ಪದ್ಧತಿಯಲ್ಲಿ ಮಗುವನ್ನು ಹೊಂದಲು ಆಸೆ ಚಿಗುರೊಡೆಸಿಕೊಂಡಿದ್ದಾರೆ.ಈಗಿನ ಆಧುನಿಕ ತಂತ್ರಜ್ಞಾನವಿರುವ ವಿಟ್ರೊ ಫಲೀಕರಣ (ಐವಿಎಫ್), ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯಾಣು ಇಂಜೆಕ್ಷನ್ (ಐಸಿಎಸ್ಐ), ಕ್ರಯೋಪ್ರೆಸರ್ವೇಶನ್ ಚಿಕಿತ್ಸೆಯ ಮೂಲಕ ಅವಧಿ ಮೀರಿದ ನಂತರವು ಮಕ್ಕಳನ್ನು ಪಡೆಯಬಹುದು ಎಂದು ಹೈದರಾಬಾದ್ನ ಕೊತ್ತಾಪೇಟ್ನ ಅಹಲ್ಯಾ ಹಾಸ್ಪಿಟಲ್ನ ನಿರ್ದೇಶಕ ಡಾ. ಸನಕಯ್ಯಾಲ ಉಮಾಶಂಕರ್ ಮಾಹಿತಿ ನೀಡಿದ್ದಾರೆ.
ವೈದ್ಯರ ಸಲಹೆ ಮೆರೆಗೆ ಮಗು ಪಡೆಯಲು ನಿರ್ಧರಿಸಿದ್ದಾರೆ. ಆದರೆ 50 ವರ್ಷದ ನಂತರ ಮಹಿಳೆಯರಲ್ಲಿ ಮುಟ್ಟಿನ ಋತುಚಕ್ರವು ಕೊನೆಗೊಳ್ಳುತ್ತದೆ.ಆಗ ಬೇರೊಬ್ಬರ ಅಂಡಾಣು ಪಡೆದು, ಪತಿ ರಾಜಾರಾವ್ ಅವರ ವೀರ್ಯದೊಂದಿಗೆ ಸಮ್ಮಿಳನಗೊಳಿಸಲಾಯಿತು. ಇದಾದ ನಂತರ ಮಂಗಮ್ಮ ಮೊದಲ ತಿಂಗಳಲ್ಲೇ ಗರ್ಭಧರಿಸಿದರು.ಗರ್ಭ ಧರಿಸಿದ ನಂತರದಲ್ಲಿ ಹೃದ್ರೋಗ, ಶ್ವಾಸಕೋಶ, ಹೆರಿಗೆ ಮತ್ತು ಸ್ತ್ರೀರೋಗ ಹಾಗೂ ಪೋಷಣ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಈರಾಮತ್ತಿ ಅವರ ಆರೋಗ್ಯವನ್ನು ಗಮನಿಸಲಾರಂಭಿಸಿತು. ಅವರಿಗೆ 74 ವರ್ಷವಾದ್ದರಿಂದ ಸಹಜ ಹೆರಿಗೆ ಸಾಧ್ಯವಿಲ್ಲದ ಕಾರಣ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು.
ಪ್ರಸವದ ನಂತರದಲ್ಲಿ ಗುರುತರವಾದ ಆರೋಗ್ಯ ಸಮಸ್ಯೆಗಳಿರುವಂತೆ ಕಾಣುತ್ತಿಲ್ಲ. ಆದರೆ ಇಳಿವಯಸ್ಸು ಆಗಿರುವುದರಿಂದ ಅವರಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾವು ಹಾಲಿನ ಬ್ಯಾಂಕ್ನಿಂದ ಮಕ್ಕಳಿಗೆ ಹಾಲನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.‘ನನಗೆ ತುಂಬ ಖುಷಿಯಾಗಿದೆ. ಪತ್ನಿ ಗರ್ಭ ಧರಿಸಿದ ನಂತರ 9 ತಿಂಗಳು ಆಸ್ಪತ್ರೆಯಲ್ಲೇ ಇದ್ದೆವು.ಹಿಂದೆಯಲ್ಲ ಮಕ್ಕಳಿಗಾಗಿ ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ದೊರಕಿದೆ. ಇಬ್ಬರು ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ಪತಿ ರಾಜಾರಾವ್ ತಿಳಿಸಿದ್ದಾರೆ.