ಸುದ್ದಿ

7 ತಲೆಯ ಹಾವಿನ ಪೊರೆ ಪತ್ತೆ..!ನೋಡಿದರೆ ಅದೃಷ್ಟ ಎಂದು ಇಲ್ಲಿನ ಜನ ಮಾಡುತ್ತಿರುವುದೇನು ಗೊತ್ತಾ..?

By admin

May 06, 2019

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ.

ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ.

ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ ದೊಡ್ಡಕೆಂಪೇಗೌಡ ಅವರಿಗೆ ಹಾವು ಕಾಣಿಸಿಕೊಂಡಿದ್ದು, 7 ಹೆಡೆಯ ಸರ್ಪ ಹೋಗುತ್ತಿದೆ ನೋಡಬನ್ನಿ ಎಂದು ಕೆಲಸಗಾರರನ್ನು ಅವರು ಕರೆದಿದ್ದಾರೆ.

ಆದರೆ, ಹಾವು ಕಾಣಿಸದ ಕಾರಣ, ಅವರ ಮಾತನ್ನು ಕೇಳಿ ಕೆಲಸಗಾರರು ನಕ್ಕಿದ್ದಾರೆ. ಈಗ 7 ಹೆಡೆ ಸರ್ಪದ ಪೊರೆ ಕಂಡುಬಂದಿರುವುದು ಕುತೂಹಲ ಮೂಡಿಸಿದೆ.

ಸುತ್ತಮುತ್ತಲಿನ ಪ್ರದೇಶದಲ್ಲಿ 7 ಹೆಡೆಯ ಸರ್ಪ ಇರಬಹುದೆಂದು ಜನ ಮಾತಾಡಿಕೊಂಡಿದ್ದು, 7 ಹೆಡೆಯ ಹಾವಿನ ಪೊರೆ ನೋಡಲು ಮುಗಿಬಿದ್ದಿದ್ದಾರೆ. ವಿಷಯ ತಿಳಿದ ಅಕ್ಕ ಪಕ್ಕದ ಗ್ರಾಮಸ್ಥರು ಕೂಡ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.