ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ.
ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು ಬೇಡಿಕೊಳ್ತಿದ್ದಳಂತೆ.
ಕೊನೆಗೂ ಗರ್ಭದಲ್ಲಿರುವುದು ಗಂಡು ಎಂಬುದು ಗೊತ್ತಾದ ಮೇಲೆ ಗರ್ಭಪಾತ ನಿಂತಿತ್ತಂತೆ. ಪುಣ್ಯ ನನಗೆ ಹೆಣ್ಣು ಮಕ್ಕಳಾಗಲಿಲ್ಲ. ಅವ್ರೂ ಇದೇ ಕಷ್ಟ ಅನುಭವಿಸಬೇಕಿತ್ತು ಎಂದು ಸುಮತಿ ಕಣ್ಣೀರು ಹಾಕ್ತಾಳೆ. ಒಂದಾದ ಮೇಲೆ ಒಂದು ಆಘಾತವಾದ ಕಾರಣ ಮಾನಸಿಕ ಹಾಗೂ ದೈಹಿಕ ಬಲ ಕುಗ್ಗಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಸುಮತಿ, ರಾತ್ರಿ ಬೆಚ್ಚಿ ಬೀಳ್ತಾಳೆ. ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಆಕೆಗೆ ಚಿಕಿತ್ಸೆ ನಡೆಯುತ್ತಿದೆ.