ಸುದ್ದಿ

65 ವರ್ಷದ ವೃದ್ಧೆಯೊಬ್ಬರು ಕಳೆದ 19 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ಜೀವನವನ್ನು ನಡೆಸುತ್ತಿದ್ದಾರೆ,..ಇದಕ್ಕೆ ಕಾರಣವೇನೆಂದು ತಿಳಿಯಿರಿ..?

By admin

August 23, 2019

ಚೆನ್ನೈನ  65 ವರ್ಷದ ವೃದ್ಧೆಯೊಬ್ಬರು ಕಳೆದ 19 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿರುವ ಮನಕಲಕುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ವಾಸಿಸಲು ಮನೆ ಇಲ್ಲದ ಕಾರಣದಿಂದಾಗಿ ಕರುಪ್ಪಾಯಿ ಅವರು ಶೌಚಾಲಯದ ಕೋಣೆಯಲ್ಲೇ ವಾಸವಾಗಿದ್ದಾರೆ. ವೃದ್ಧೆ ಕರುಪ್ಪಾಯಿ ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿ ಅದರಿಂದ ಬರುವ ಹಣದಿಂದಲೇ ಜೀವನ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೃದ್ಧೆ, ಹಿರಿಯ ನಾಗರಿಕ ಪಿಂಚಣಿಗಾಗಿ ನಾನು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದೇನೆ. ಅದು ಆಗದಿದ್ದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದೇನೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜೀವನ ನಡೆಸಲು ನನಗೆ ಬೇರೆ ಆಧಾರವಿಲ್ಲ. ಹೀಗಾಗಿ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸಿದರೆ ಪ್ರತಿದಿನ 70ರಿಂದ 80 ರೂ. ಸಿಗುತ್ತದೆ. ಅದರಿಂದಲೇ ಜೀವನ ನಡೆಸುತ್ತಿದ್ದೇನೆ. ನನಗೆ ಒಬ್ಬಳು ಮಗಳಿದ್ದಾಳೆ. ಆದರೆ ಇಲ್ಲಿಯವರೆಗೂ ಆಕೆ ನನ್ನ ಭೇಟಿಯಾಗಲು ಬಂದಿಲ್ಲ ಎಂದು ವೃದ್ಧೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.