ಸುದ್ದಿ

62 ಅಡಿ ಉದ್ದದ ಹನುಮನ ವಿಗ್ರಹ ಬಂದದ್ದು ಎಲ್ಲಿಂದ?ಶಿಲೆ ಸಿಕ್ಕಿದ್ದು ಹೇಗೆ?ಕೆತ್ತಿದ್ದು ಯಾರು?ಇಲ್ಲಿದೆ ಸಂಪೂರ್ಣ ಮಾಹಿತಿ ಓದಿ ಶೇರ್ ಮಾಡಿ…

By admin

April 05, 2018

ಭಾರತದ ಅತೀ ದೊಡ್ಡ ಹನುಮಂತನಿಗೆ ಭರ್ಜರಿ ಸ್ವಾಗತ ಮಾಡಿ, ಬೀಳ್ಕೊಟ್ಟ ಸೂಲಿಬೆಲೆ ಗ್ರಾಮಸ್ತರು. ಹೌದು, ಭಾರತದ ಅತೀ ಎತ್ತರದ, 62 ಅಡೀ ಇರುವ ಹನುಮನ ಏಕಶಿಲಾವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ.

ಹನುಮನಿಗೆ ಅಭೂತಪೂರ್ವ ಸ್ವಾಗತ

ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ.

ಮಾರ್ಗ ಮಧ್ಯ ತೊಂದರೆಯಾದರೂ, ಆ ತೊಂದರೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗಿದ ಹನುಮಂತನ ಏಕಶಿಲಾ ವಿಗ್ರಹಕ್ಕೆ, ಮಾರ್ಗ ಮಧ್ಯ ಸಿಕ್ಕ ಸೂಲಿಬೆಲೆ ಗ್ರಾಮದ ಜನರು ಅಭೂತಪೂರ್ವ ಸ್ವಾಗತ ಕೋರಿದರು.

ಎಲ್ಲೋ ಪ್ರತಿಸ್ಟಾಪಾನೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಗೆ ರಾಮನವಮಿ ಹಬ್ಬ

ಎಲ್ಲೋ ಪ್ರತಿಸ್ಟಾಪಾನೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಗೆ ತಮಟೆ ನಗಾರಿಗಳೊಂದಿಗೆ, ಪಟಾಕಿಗಳನ್ನು ಸಿಡಿಸುತ್ತ, ರಸ್ತೆಗೆ ನೀರನ್ನು ಹಾಕುವ ಮುಖಾಂತರ ಭರ್ಜರಿಯಾಗಿ ರಾಮ ಭಕ್ತನನ್ನು ಸ್ವಾಗತಿಸಿದರು.

ಊರಿನ ಗ್ರಾಮಸ್ತರು ಹನುಮಂತನ ವಿಗ್ರಹವನ್ನು ಸ್ವಾಗತಿಸಿದ್ದು ಹೇಗೆ ಗೊತ್ತಾ ಈ ವಿಡಿಯೋ ನೋಡಿ…

ಜಾತ್ರೆಯಾಗಿ ರೂಪಗೊಂಡ ಸೂಲಿಬೆಲೆ ಗ್ರಾಮದಲ್ಲಿ, ಮತ್ತೊಮ್ಮೆ ರಾಮನವಮಿಯನ್ನು ಆಚರಿಸುತ್ತಾ, ಪ್ರಸಾದ ಪಾನಕಗಳನ್ನು ಸಹ ನೀಡಿದರು.ಭಕ್ತಿಯ ಪರಾಕಾಸ್ಟತೆ ಹೇಗಿತ್ತೆಂದರೆ ಆಂಜನೇಯನ ನಮ್ಮೂರಿನಲ್ಲೇ ಪ್ರತಿಸ್ಟಾಪಾನೆ ಆಗುತ್ತಿದೆ ಏನೋ, ಅನ್ನುವಷ್ಟರಮಟ್ಟಿಗೆ ಸಂಭ್ರಮಿಸಿ, ಕುಣಿದು ಕುಪ್ಪಳಿಸಿ  ಹನುಮಂತನನ್ನು ಬೀಳ್ಕೊಟ್ಟರು.

ಪ್ರತಿಸ್ಟಾಪಾನೆ ಎಲ್ಲಿ..?

62 ಅಡಿ ಎತ್ತರದ  ಈ ವೀರಾಂಜನೇಯನ ಮೂರ್ತಿ ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಮುಂದಿನ ವರ್ಷ ರಾಮನವಮಿಯಂದು ಪ್ರತಿಷ್ಠಾಪನೆಗೊಳ್ಳಲಿದೆ.

ಶಿಲ್ಪಿ ಯಾರು..?

ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಬೆಳತೂರು ಗ್ರಾ.ಪಂ.ವ್ಯಾಪ್ತಿಯ ಭೈರಸಂದ್ರ ಗ್ರಾಮದಲ್ಲಿ ಖ್ಯಾತ ಶಿಲ್ಪಿ ಶಿವಾರಪಟ್ಟಣದ ಪಿ. ರಾಜಶೇಖರಾಚಾರ‍್ಯ ನೇತೃತ್ವದಲ್ಲಿ ಕೆತ್ತನೆ ಕಾರ‍್ಯ ಕಳೆದ 3 ವರ್ಷದಿಂದ ನಡೆಯುತ್ತಿದ್ದು, ಈಗಾಗಲೇ ಶೇ.60ರಷ್ಟು ಕೆತ್ತನೆ ಪೂರ್ಣಗೊಂಡಿದೆ.

ಈ ಏಕಶಿಲೆ ಸಿಕ್ಕಿದ್ದು ಹೇಗೆ ಮತ್ತು ಎಲ್ಲಿ..?

ಇಂತಹ ಒಂದು ಏಕಾಶಿಲಾ ಹನುಮನ ಮೂರ್ತಿಯನ್ನು ಪ್ರತಿಸ್ಟಾಪಾನೆ ಮಾಡಬೇಕೆಂದು ನಿರ್ಧರಿಸಿದ ಶ್ರೀ ರಾಮಚೈತನ್ಯ ವರ್ಧಿನಿ ಟ್ರಸ್ಟ್‌ ಖ್ಯಾತ ಶಿಲ್ಪಿ ಶಿವಾರಪಟ್ಟಣದ ಪಿ. ರಾಜಶೇಖರಾಚಾರ‍್ಯ ನೇತೃತ್ವದಲ್ಲಿ ಶಿಲೆ ಹುಡುಕಲು ಆರಂಭಿಸಿದರು.ಸತತ ಮೂರು ತಿಂಗಳ ಸುತ್ತಾಟದ ನಂತರ, ಭೈರಸಂದ್ರ ಗ್ರಾಮದ ರೈತ ಬಿ.ಎಂ.ಮುನಿರಾಜು ಅವರ ತೋಟದಲ್ಲಿ ಇದ್ದಂತಹ ಬೃಹತ್‌ ಬಂಡೆ ಆಯ್ಕೆ ಮಾಡಿ, 2015ನೇ ಇಸವಿಯಲ್ಲಿ ಕೆತ್ತನೆ ಮಾಡಲು ಪ್ರಾರಂಬಿಸಿದರು.

62 ಅಡಿ ಉದ್ದದ ಹನುಮನನ್ನು ಸಾಗಿಸಿದ ಟ್ರಕ್ ಹೇಗಿತ್ತು ಗೊತ್ತಾ..?ಈ ವಿಡಿಯೋ ನೋಡಿ…

ಮೂರ್ತಿ ಸಾಗಿಸಲು ವಿಶೇಷ ವಾಹನ

62 ಅಡಿ ಉದ್ದ, 25 ಅಡಿ ಅಗಲ, 750 ಟನ್‌ ತೂಕದ ಆಂಜನೇಯ ವಿಗ್ರಹ ಸಾಗಾಟಕ್ಕೆ ಮೂರು ಎಂಜಿನ್‌ಗಳ ಬೃಹತ್‌ ಟ್ರಕ್‌ ಅನ್ನು ತಂತ್ರಜ್ಞರ ನೆರವಿನಿಂದ ಸ್ಥಳದಲ್ಲೇ ಜೋಡಿಸಲಾಯಿತು.ಆದರೆ ಈ ಟ್ರಕ್ ಚಲಿಸುವುದು ಘಂಟೆಗೆ 3 ಕಿ.ಮೀ. ಮಾತ್ರ.