ಸುದ್ದಿ

62 ಅಡಿ ಆಂಜನೇಯನ ವಿಗ್ರಹವನ್ನು, ದೇವಸ್ಥಾನದ ಆವರಣದೊಳಗೆ ಪ್ರವೇಶಿಸದಂತೆ ತಡೆ.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

By admin

April 10, 2018

ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸ್ಥಳಕ್ಕೆ ಈಗಾಗಲೇ ಸಾಗಿಸಲಾಗಿದೆ.

ಆದರೆ ವಿಪರ್ಯಾಸ ಎಂದರೆ, ಅಂದು ಪರ್ವತವನ್ನೇ ಹೊತ್ತು ತಂದು  ಲಕ್ಷ್ಮಣನನ ಜೀವ ಉಳಿಸಿದ, ರಾಮ ಭಕ್ತ ಹನುಮಂತನ ಪ್ರತಿಷ್ಟಾಪನೆಗೆ ವಿಘ್ನದ ಮೇಲೆ ವಿಘ್ನ ಶುರುವಾಗಿದೆ. ಕೋಲಾರದಿಂದ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಗೆ ಹೊರಟಿದ್ದ ಬೃಹತ್ ಆಂಜನೇಯನ ವಿಗ್ರಹಕ್ಕೆ ಮಾರ್ಗ ಮಧ್ಯದಲ್ಲೇ ತೊಂದರೆ ಎದುರಾಗಿತ್ತು.

ಇಲ್ಲಿ ಓದಿ :- ಈ ಊರಿನ ಜನ ಕೊಟ್ರು, ಬ್ರಹತ್ ಆಂಜನೇಯನ ವಿಗ್ರಹಕ್ಕೆ ಹೇಗಿತ್ತು  ಅದ್ದೂರಿ ಸ್ವಾಗತ.!ಈ ವಿಡಿಯೋ ನೋಡಿ..

ಟ್ರಕ್ ಮೂಲಕ ತರುತ್ತಿದ್ದ 750 ಟನ್ ತೂಕದ ವೀರಾಂಜನೇಯ ಮೂರ್ತಿಗೆ ಹೊಸಕೋಟೆಯ ದಂಡುಪಾಳ್ಯದಲ್ಲಿ, ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಪೊಲೀಸರು ದಿಗ್ಬಂಧನ ಹೇರಿದ್ದರು.ನಂತರ ಈ ವಿಘ್ನಗಳನ್ನು ದೂರ ಮಾಡಿಕೊಂಡು ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಹತ್ತಿರಕ್ಕೆ ಸಾಗಿಸಲಾಗಿದೆ.ಆದರೆ ಅಲ್ಲಿಯೂ ಮತ್ತೊಂದು ವಿವಾದ ಶುರುವಾಗಿದೆ.

ಇಲ್ಲಿ ಓದಿ :-62 ಅಡಿಯ ವಿಗ್ರಹ ಬಂದದ್ದು ಎಲ್ಲಿಂದ.?ಶಿಲ್ಪಿ ಯಾರು.?ಶಿಲೆ ಸಿಕ್ಕಿದ್ದು ಹೇಗೆ.?ಇಲ್ಲಿದೆ ಸಂಪೂರ್ಣ ಮಾಹಿತಿ..

ಹನುಮಂತನನ್ನು ಇದೆ ಬಿಡದ, ಏನಿದು ಈ ವಿವಾದ…?

ಈಗಾಗಲೇ ಬೆಂಗಳೂರಿನ ಎಚ್‍ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ 62 ಅಡಿ ಎತ್ತರದ ಬೃಹತ್ ಆಂಜನೇಯ ವಿಗೃಹವನ್ನು ಪ್ರತಿಷ್ಠಾಪನೆ ಮಾಡಲು ಶ್ರೀರಾಮ ದೇಗುಲದ ಟ್ರಸ್ಟಿಗಳ ನಿರ್ಧರಿಸಿದ್ದಾರೆ.

62 ಅಡಿ ಹನುಮಾನ್ ವಿಗ್ರಹ, 300 ಚಕ್ರದ ಟ್ರಕ್ ಹೇಗಿದೆ ಈ ವಿಡಿಯೋ ನೋಡಿ…

ಆದರೆ ಕೋದಂಡ ರಾಮ ದೇಗುಲಕ್ಕೆ ಸಂಭಂದಪಟ್ಟಂತೆ ಕೇಸ್ ನ್ಯಾಯಾಲಯದಲ್ಲಿ ಇರುವುದರಿಂದ ಬೃಹತ್ ಆಂಜನೇಯನ ವಿಗ್ರಹವನ್ನು, ದೇವಸ್ಥಾನದ ಆವರಣದ ಒಳಗಡೆ ಆಂಜನೇಯನ ಮೂರ್ತಿಯನ್ನು ತರದಂತೆ ತಹಶೀಲ್ದಾರ್ ತಡೆಯೊಡ್ಡಿದ್ದಾರೆ.

ಇದರಿಂದ ಕೋಪಗೊಂಡಿರುವ ಭಕ್ತರು ಮತ್ತು ಅಧಿಕಾರಿಳ ನಡುವೆ ವಾಗ್ವಾದ ಏರ್ಪಟ್ಟಿದೆ.ಇದು ರಾಜಕೀಯ ಪ್ರೇರಿತವಾಗಿದ್ದು, ಇದಕ್ಕೆ ಯಾರೋ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಭಕ್ತರು ಪ್ರತಿಭಟನೆಯೊಂದಿಗೆ ರಸ್ತೆ ತಡೆ ಕೂಡ ನಡೆಸಿದ್ದಾರೆ.

ಹನುಮಂತನ ವಿಗ್ರಹವನ್ನು ಸಾಗಿಸುವಾಗ ಅಡ್ಡ ಬಂದ ರಸ್ತೆಯ ಡಿವೈಡರ್’ಗಳನ್ನೂ ಕೆಡವಿದ್ದಾರೆ.ಎಷ್ಟೇ ಗಲಾಟೆ ಆದರೂ ನಾವು ದೇವಸ್ಥಾನದ ಒಳಗಡೆ ವಿಗ್ರಹ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಡಿಸಿಯವರು ಹೇಳಿದ್ದಾರೆ.