ನಮಗೆ ಕೆಲವು ಸಮಯದಲ್ಲಿ ಧಿಡೀರನೆ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಕೆಲವೊಮ್ಮೆ ನಮ್ಮ ಜೀವನವನ್ನ ಬದಲಾಯಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ. ಹೌದು ಕೆಲವೊಮ್ಮೆ ನಮ್ಮ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಬೇರೆಯವರಿಗೆ ತಮಾಷೆ ಅನಿಸಿದರೂ ಅದೂ ಕೆಲವೊಮ್ಮೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸಬಹುದು. ಹೌದು ಕೇರಳಕ್ಕೆ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ್ದ ಈ ಹುಡುಗನ ಹೆಸರು ಮುಸ್ತಫಾ, ಮುಸ್ತಫಾ ಅವರು ವಾಸವಿದ್ದ ಊರಿನಲ್ಲಿ ಸರಿಯಾದ ರಸ್ತೆ ಮತ್ತು ನೀರು ಇರಲಿಲ್ಲ ಮತ್ತು ಅವರ ಊರಿನಲ್ಲಿ ಕೇವಲ ಐದನೇ ತರಗತಿಯ ತನಕ ಮಾತ್ರ ಶಾಲೆಗಳು ಇದ್ದ ಕಾರಣ ಹೈ ಸ್ಕೂಲ್ ಓದಲು ದಿನಾಲೂ ಆರು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು. ಇನ್ನು ಮುಸ್ತಫಾ ಅವರ ತಂದೆ ಮತ್ತು ತಾಯಿ ಕಾಫಿ ತೋಟದಲ್ಲಿ ಕೂಲಿ ಕೆಲಸವನ್ನ ಮಾಡುತ್ತಿದ್ದರು, ಇನ್ನು ತಂದೆ ತಾಯಿಯ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಮುಸ್ತಫಾ ಆರನೇ ತರಗತಿಯಲ್ಲಿ ಫೇಲ್ ಆಗಿ ಮನೆಯಲ್ಲಿ ಇದ್ದ.
ಕೆಲವು ಸಮಯದ ನಂತರ ಒಬ್ಬ ಒಳ್ಳೆಯ ಶಿಕ್ಷಕರ ಕಣ್ಣು ಈ ಮುಸ್ತಫಾನ ಮೇಲೆ ಬೀಳುತ್ತದೆ ಮತ್ತು ಆ ಶಿಕ್ಷಕ ಮುಸ್ತಫಾನನ್ನ ಮನೆಗೆ ಕರೆದುಕೊಂಡು ಹೋಗಿ ಪಾಠವನ್ನ ಹೇಳಿಕೊಡುತ್ತಿದ್ದರು ಮತ್ತು ಇದರಿಂದ ಮುಸ್ತಫಾ ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಪಾಸ್ ಆದನು. ನಂತರ ಹೇಗೋ ಕಷ್ಟಪಟ್ಟು ಉನ್ನತ ಶಿಕ್ಷಣವನ್ನ ಮಾಡಿದ ಮುಸ್ತಫಾ ಇಂಜಿನಿಯರಿಂಗ್ ಓದುತ್ತಾನೆ ಮತ್ತು ಮತ್ತು ಒಳ್ಳೆಯ ಪ್ರತಿಭೆ ಇವರಲ್ಲಿ ಇದ್ದ ಕಾರಣ ಮುಸ್ತಫಾಗೆ ಅಮೇರಿಕಾದಲ್ಲಿ ಉದ್ಯೋಗ ಸಿಕ್ಕಿತು. ಸುಮಾರು ಐದು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿದ ಮುಸ್ತಫಾ ತಂದೆ ತಾಯಿಯನ್ನ ಬಿಟ್ಟಿರಲು ಮನಸ್ಸಿಲ್ಲದೆ ಊರಿಗೆ ವಾಪಾಸ್ ಬಂದು ಕೆಲಸಕ್ಕಾಗಿ ಹುಡುಕಾಡುತ್ತಾನೆ, ಆದರೆ ಎಲ್ಲಿಯೂ ಕೆಲಸ ಸಿಗಲಿಲ್ಲ.
ಕೆಲಸ ಇಲ್ಲದೆ ಮನೆಯಲ್ಲಿ ಇದ್ದ ಮುಸ್ತಫಾ ಒಂದು ದಿನ ತನ್ನ ಮಾವನ ಮನೆಗೆ ಹೋಗುತ್ತಾನೆ, ಇನ್ನು ಮಾವನ ಮನೆಗೆ ಹೋದಾಗ ಮಾವ ಪಕ್ಕದಲ್ಲಿ ಇದ್ದ ಅಂಗಡಿಯಿಂದ ದೋಸೆ ಹಿಟ್ಟಿನ ಪ್ಯಾಕೆಟ್ ತಂದು ಮುಸ್ತಫಾಗೆ ದೋಸೆ ಮಾಡಿಕೊಟ್ಟರು. ಇನ್ನು ದೋಸೆ ತಿನ್ನುವಾಗ ಮುಸ್ತಫಾಗೆ ಒಂದು ಒಳ್ಳೆಯ ಉಪಾಯ ಹೊಳೆಯುತ್ತದೆ, ಹಾಗಾದರೆ ಆ ಉಪಾಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ದೋಸೆ ತಿನ್ನುವಾಗ ಮುಸ್ತಫಾಗೆ ನಾನು ಏಕೆ ದೋಸೆ ಮತ್ತು ಇಡ್ಲಿ ಹಿಟ್ಟುಗಳನ್ನ ತಯಾರಿಸಿ ಮಾರಾಟ ಮಾಡಬಾರದು ಎಂದು ಮುಸ್ತಫಾಗೆ ಅನಿಸಿತು.
ಈ ಆಲೋಚನೆ ಬಂದಿದ್ದೆ ತಡ ಮುಸ್ತಫಾ ಅವರು ತನ್ನ ಸಂಬಂಧಿಕರನ್ನ ತನ್ನ ಜೊತೆ ಸೇರಿಸಿಕೊಂಡು 25 ಸಾವಿರ ರೂಪಾಯಿಯನ್ನ ಹೂಡಿಕೆ ಮಾಡಿ ID ಅನ್ನುವ ಕಂಪನಿಯ ಹೆಸರಿನಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟನ್ನ ತಯಾರು ಮಾಡಲು ಶುರು ಮಾಡಿದರು. ಸ್ನೇಹಿತರೆ ID ಅಂದರೆ ಇಡ್ಲಿ ಮತ್ತು ದೋಸೆ ಎಂದು ಅರ್ಥ, ನಿರ್ದಿಷ್ಟ ಗುರಿಯನ್ನ ಇಟ್ಟುಕೊಂಡು ಅದನ್ನ ಸಾಧಿಸಲು ಕಷ್ಟಪಟ್ಟ ಮುಸ್ತಫಾ ಈಗ 10 ಸಾವಿರ ಶಾಪ್ ಗಳಿಗೆ ಇಡ್ಲಿ ಮತ್ತು ದೋಸೆ ಹಿಟ್ಟನ್ನ ಸಪ್ಲೈ ಮಾಡುತ್ತಿದ್ದು ಸುಮಾರು ಒಂದು ಸಾವಿರ ಜನರಿಗೆ ಕೆಲಸವನ್ನ ಕೊಟ್ಟಿದ್ದಾರೆ. ಮೊದಲ ವರ್ಷ ಸುಮಾರು ನೂರು ಕೋಟಿ ರೂಪಾಯಿ ವ್ಯವಹಾರ ಮಾಡಿದ ಮುಸ್ತಫಾ 2019 ರಲ್ಲಿ 400 ಕೋಟಿ ರೂಪಾಯಿ ವ್ಯವಹಾರ ಮಾಡಿ ಈಗ ಕೋಟಿ ಕೋಟಿ ಸಂಪಾದನೆಯನ್ನ ಮಾಡುತ್ತಿದ್ದಾರೆ.