ಉಪಯುಕ್ತ ಮಾಹಿತಿ

50ರುಪಾಯಿ ರಿಯಾಯಿತಿಯನ್ನು, ಪ್ರತಿ ತಿಂಗಳು ನಿಮ್ಮ ಕರೆಂಟ್ ಬಿಲ್’ನಲ್ಲಿ ತಪ್ಪದೇ ಕೇಳಿ ಪಡೆಯಿರಿ..ಹೇಗೆಂದು ತಿಳಿಯಲು ಈ ಲೇಖನ ಓದಿ,ಶೇರ್ ಮಾಡಿ…

By admin

March 14, 2018

ಈಗಂತೂ ಮನೆ ಖರ್ಚುಗಳನ್ನು ಸರಿದೂಗಿಸಲು ಏನೇನೋ ಪ್ಲಾನ್’ಗಳನ್ನೂ ಮಾಡ್ತಾರೆ.  ತಿಂಗಳು ಮುಗಿಯಿತು ಎಂದರೆ ಬಿಲ್’ಗಳ ಕಾಟ ಹೆಚ್ಚಾಗುತ್ತದೆ.ಕೇಬಲ್ ಬಿಲ್,ಕರೆಂಟ್ ಬಿಲ್.ವಾಟರ್ ಬಿಲ್ ಹೀಗೆ ಹಲವಾರು ಬಿಲ್’ಗಳು ಸಾಲಾಗಿ ಬಂದು ನಿಮ್ಮ ನಿಮ್ಮ ಮನೆಯ ಬಾಗಿಲಿನಲ್ಲಿ ಬೀಳುತ್ತವೆ.

ಸ್ಯಾಲರಿ ಪಡೆದು ಬಡ್ಜೆಟ್ ಮೂಲಕ ಸಂಸಾರ ನೀಗಿಸುವವರಿಗೆ ಇದರ ಪ್ರಾಮುಖ್ಯತೆ ಏನೆಂಬುದು ತಿಳಿದಿರುತ್ತದೆ..ಬರುವ ಬಿಲ್ ನಲ್ಲಿ ನಾವು ಕಡಿಮೆ ಮಾಡಬಹುದಾದದ್ದು ಎಂದರೆ ಅದು ಕರೆಂಟ್ ಬಿಲ್‌.. ಹೌದು ಕರೆಂಟ್ ಬಿಲ್ ಕಡಿಮೆ ಬರಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ..

1.ಮನೆಯಲ್ಲಿ ಸೋಲಾರ್ ಬಳಸಿ ಕರೆಂಟ್ ಬಿಲ್ ನಲ್ಲಿ 50 ರೂಪಾಯಿ ರಿಯಾಯಿತಿ ಪಡೆಯಿರಿ..

ಇದು ಸಾಮಾನ್ಯವಾಗಿ ಬಹುತೇಕರಿಗೆ ತಿಳಿದಿಲ್ಲ..‌ ಹೌದು ಮನೆಯಲ್ಲಿ ಸೋಲಾರ್ ಅಳವಡಿಸಿಕೊಂಡಿದ್ದರೆ ನಮ್ಮ ಕರೆಂಟ್ ಬಿಲ್ ಗಳಲ್ಲಿ ಪ್ರತಿ ತಿಂಗಳು 50 ರೂಪಾಯಿ ರಿಯಾಯಿತಿಯನ್ನು ನೀಡಲಾಗುತ್ತದೆ.. ನೀವು ಪಡೆಯುತ್ತಿಲ್ಲವಾದರೆ ಈ ತಿಂಗಳಿನಿಂದಲೇ ಕೇಳಿ ಪಡೆಯಿರಿ..

2.ಅನಾವಶ್ಯಕ ಲೈಟ್ಸ್ ಗಳನ್ನು ಆಫ್ ಮಾಡಿ..

ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಎಂದರೆ ಇದೇ.. ಮರೆವಿನ ಪ್ರಭಾವವೋ ಏನೋ ಹಾಕಿದ ಲೈಟ್ ಗಳನ್ನು ಆಫ್ ಮಾಡುವುದನ್ನು ಮರೆತುಬಿಟ್ಟಿರುತ್ತೇವೆ.. ಈ ಅಭ್ಯಾಸವನ್ನು ಮೊದಲು ಬದಲಾಯಿಸಿಕೊಳ್ಳಿ..

3.ನಿಮ್ಮ ಮನೆಯ ಫ್ರಿಡ್ಜ್

ನಿಮ್ಮ ಮನೆಯ ಫ್ರಿಡ್ಜ್ ಬಾಗಿಲನ್ನು ಪದೇ ಅದೇ ತೆರೆಯುತ್ತಲೇ ಇರಬೇಡಿ.. ಅನಾವಶ್ಯಕವಾಗಿ ತೆಗೆದಷ್ಟು ಕೂಲಿಂಗ್ ಕಡಿಮೆಯಾಗಿ ಮತ್ತೆ ಕೂಲ್ ಆಗಲು ಹೆಚ್ಚು ಕರೆಂಟ್ ತೆಗೆದುಕೊಳ್ಳುತ್ತದೆ.. ಇನ್ನು ಫ್ರಿಡ್ಜ್ ನ ಮೋಡ್ ಅನ್ನು ಮಿನಿಮಮ್ ನಲ್ಲಿ ಇಡಿ..

4.LED ಬಲ್ಬ್ ಗಳನ್ನು ಬಳಸಿ..

ಸಾಮಾನ್ಯವಾಗಿ ಕರೆಂಟ್ ಬಿಲ್‌ಹೆಚ್ಚು ಬರುವುದೇ ಇದರಿಂದ ಬಳಸುವ ಬಲ್ಬ್ ಗಳನ್ನು ಈ ಕೂಡಲೇ ಎಲ್ ಇ ಡಿ ಗಳಿಗೆ ಬದಲಾಯಿಸಿ.. ಸರ್ಕಾರದ ಒಂದು ಯೋಜನೆಯ ಪ್ರಕಾರ ರಿಯಾಯಿತಿ ದರದಲ್ಲಿ ಎಲ್ ಇ ಡಿ ಬಲ್ಬ್ ಅನ್ನು ವಿತರಿಸಲಾಗುತ್ತದೆ.. ನಿಮ್ಮ ಹತ್ತಿರದ ಕೆ ಇ ಬಿ ಗಳಲ್ಲಿ ಹೋಗಿ ವಿಚಾರಿಸಿ ಕೊಂಡುಕೊಳ್ಳಿ..