ರಾಜಕೀಯ

5ಸಾವಿರ ಜನ ಸೇರಿಸಿ ಸಮಾವೇಶ ಮಾಡಿ-ರಮೇಶ್‌ಕುಮಾರ್‌ಗೆ ವರ್ತೂರು ಪ್ರಕಾಶ್ ಸವಾಲ್

By KOLAR NEWS CHANDRU

December 27, 2022

ಘಟಬಂಧನ್ ನಾಯಕರು ಅವರ ಕ್ಷೇತ್ರದಲ್ಲಿ ಈ ಬಾರಿ ಅಡ್ರೆಸ್‌ಗೆ ರ‍್ತಾರಾ-ಚಿಂತನೆ ಮಾಡಲಿ

ಕೋಲಾರ:- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕರೆತರುವ ಮುನ್ನ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್‌ರ ಘಟಬಂಧನ್ ತಂಡ ಕೋಲಾರದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡಿ ತೋರಿಸಲಿ, ಅವರ ಕ್ಷೇತ್ರಗಳಲ್ಲಿ ಅವರು ಅಡ್ರೆಸ್‌ಗೆ ರ‍್ತಾರ ಆಲೋಚಿಸಲಿ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಸವಾಲು ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕ ರಮೇಶ್‌ಕುಮಾರ್ ಹೇಳಿಕೆ ನೀಡಿ, ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ವರ್ತೂರು ಪ್ರಕಾಶ್ ಅಡ್ರೆಸ್‌ಗೆ ಇರಲ್ಲ ಎಂದು ಹೇಳಿದ್ದರ ವಿರುದ್ದ ಮಾತನಾಡಿ, ಶ್ರೀನಿವಾಸಪುರ,ಬಂಗಾರಪೇಟೆಯವರನ್ನಲ್ಲ, ಕೋಲಾರಕ್ಷೇತ್ರದ 5 ಸಾವಿರ ಜನಸೇರಿಸಿ ಸಮಾವೇಶ ಮಾಡಿ ತೋರಿಸಿ, ಎಂದು ಸವಾಲೆಸೆದರು.

ಕೋಲಾರ ಕ್ಷೇತ್ರದ ಚಿಂತೆಯನ್ನು ಘಟಬಂಧನ್ ನಾಯಕರು ಬಿಟ್ಟು ಅವರವರ ಕ್ಷೇತ್ರಗಳಲ್ಲಿ ಅವರುಗಳು ಮೊದಲು ಗೆಲ್ಲುತ್ತಾರಾ ಎಂಬುದರ ಬಗ್ಗೆ ಚಿಂತನೆ ಮಾಡಲಿ ಎಂದು ಛೇಡಿಸಿ, ಈಗಾಗಲೇ ಕೆ.ವೈ.ನಂಜೇಗೌಡ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ, ಬಂಗಾರಪೇಟೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ, ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದರು. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುವವರೇ ಇಲ್ಲ,ಹಳ್ಳಿಗಳಿಗೆ ಪ್ರವಾಸ ಮಾಡಲು ಘಟಬಂಧನ್ ನಾಯಕರಿಗೆ ಸಮಯ ಇಲ್ಲದಿರುವಾಗ ಸಿದ್ದರಾಮಯ್ಯ ಪರ ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದರು. ಶಾಸಕ ರಮೇಶ್‌ಕುಮಾರ್‌ಗೆ ಬಾಯಿ ಹಿಡಿತವಿಲ್ಲ, ಸಿದ್ದರಾಮಯ್ಯ ರವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನಾನು ಅಡ್ರೆಸ್ ಗೆ ಇರುವುದಿಲ್ಲ ಎಂದಿದ್ದಾರೆ ಅದು ಅವರ ಘನತೆಗೆ ತಕ್ಕ ಮಾತಲ್ಲ ವಾಸ್ತವವಾಗಿ ಸಿದ್ದರಾಮಯ್ಯ ನವರನ್ನು ಕೋಲಾರಕ್ಕೆ ಕರೆತರುವುದರಿಂದ ಅದು ನನ್ನ ಗೆಲುವಿನ ಮೊದಲ ಮೆಟ್ಟಿಲಾಗಲಿದೆ, ಅದಕ್ಕೆ ರಮೇಶ್‌ಕುಮಾರ್‌ಗೆ ಮಾಧ್ಯಮದ ಮೂಲಕ ಧನ್ಯವಾದ ತಿಳಿಸುವೆ ಎಂದರು.

ರಾಜಕೀಯ ಲೆಕ್ಕಾಚಾರದ ಪ್ರಕಾರ ಕ್ಷೇತ್ರದ ಮತದಾರರ ಸಂಖ್ಯೆ 2 ಲಕ್ಷ 30 ಸಾವಿರ ಇದ್ದು, ಅಲ್ಪಸಂಖ್ಯಾತರ ಮತಗಳು 50 ಸಾವಿರ, ,ಹಿಂದೂಗಳ ಮತ 1 ಲಕ್ಷ 80 ಸಾವಿರ ಇದರಲ್ಲಿ ಕನಿಷ್ಟ ಐದು ಸಾವಿರ ಜನರನ್ನು ಕಾಸು ನೀಡದೆ, ಬೇರೆ ಕ್ಷೇತ್ರದ ಜನರನ್ನು ಸೇರಿಸದೆ ಕೇವಲ ಕೋಲಾರ ವಿಧಾನ ಸಭಾಕ್ಷೇತ್ರದ ಜನರನ್ನು ಮಾತ್ರ ಸೇರಿಸಿ ಸಮಾವೇಶ ನಡೆಸಿದರೆ ಆಗ ಘಟಬಂಧನ್ ನಾಯಕರುನ್ನು ಒಪುö್ಪತ್ತೇನೆ ಎಂದರು.

ಬಿ.ಜೆ.ಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು,ಸ್ಥಳೀಯ ಶಾಸಕರ ವಿಫಲತೆ,ಸದಾ ಸಂಘಟನೆಯಲ್ಲಿ ತೊಡಗಿರುವ ತಮಗೆ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲವು ಶತಸಿದ್ಧವೆಂದರು. ಒಂದು ವೇಳೆ ಜನವರಿ 9 ರಂದು ಸಿದ್ದರಾಮಯ್ಯ ನವರು ಕೋಲಾರಕ್ಕೆ ಬರುವುದು ನಿಶ್ಚಿತವಾದರೆ ಅಂದೇ ತಾವು ನನ್ನ ಬಲ ಪ್ರದರ್ಶನ ಮಾಡುವುದಾಗಿ ಘೋಷಿಸಿದರು.