ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು ಕರೆಯಲಾಗುತ್ತದೆ. ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.
ಫುಡ್ ಪಾಯಿಸನ್ ಉಂಟು ಮಾಡುವ ತೊಂದರೆಗಳು:-
ವಾಂತಿ, ಭೇದಿ, ಹೊಟ್ಟೆ ನೋವು ಉಂಟಾಗಿ, ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ.
ಕಾರಣಗಳು:-
- ನಮ್ಮ ಜೀವನ ಶೈಲಿಯೇ, ನಮ್ಮ ಈ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ.
- ಅನಿಯಮಿತವಾಗಿ ಆಹಾರ ಸೇವಿಸುವುದು.
- ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದು.
- ಕುರುಕಲು ಪದಾರ್ಥಗಳನ್ನು ಮಿತಿಮೀರಿ ಸೇವಿಸುವುದು.
ಫುಡ್ ಪಾಯಿಸನ್ ಆಗದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ…
- ಅಡುಗೆ ಮಾಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ.
- ಮಾಂಸದ ಅಡುಗೆಯನ್ನು ಮಾಡುವಾಗ ಶುಚಿತ್ವದ ಕಡೆ ಗಮನ ಕೊಡಿ.
- ಅಡುಗೆ ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳಿ. ಅಡುಗೆ ಮನೆಯಲ್ಲಿ ಕಿಟಾಣುಗಳು ಇರದಂತೆ ನೋಡಿಕೊಳ್ಳಿ.
- ತರಕಾರಿ ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ.
- ಅಡುಗೆಗೆ ಬಳಸುವ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿರಿ.
- ಭೇದಿ, ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ ಆಹಾರವನ್ನು ತಿನ್ನುವಾಗ ಸ್ಪೂನನ್ನು ಬಳಸಿ .
- ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸೋಪು ಹಾಕಿ ತೊಳೆಯಿರಿ.
- ಆಹಾರವನ್ನು ಸಂಗ್ರಹಿಸಿಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ.
- ಅಡುಗೆ ಉಳಿದಿದ್ದರೆ ಕೂಡಲೇ ಅದನ್ನು ಫ್ರಿಜ್ನಲ್ಲಿಡಿ, ಇಲ್ಲದಿದ್ದರೆ ಚೆನ್ನಾಗಿ ಬಿಸಿ ಮಾಡಿ.
- ಕಾಲಾವಧಿ ಮುಗಿದಿರುವ ಆಹಾರ ಪದಾರ್ಥಗಳ ಪ್ಯಾಕೆಟ್ಗಳನ್ನು ಬಳಸಬೇಡಿ.
- ಹಳಸಿದ ಆಹಾರವನ್ನು ತಿನ್ನಲೇಬೇಡಿ.
ಫುಡ್ ಪಾಯಿಸನ್’ಗೆ ಪರಿಹಾರಗಳು:-
- ಅತಿ ಹೆಚ್ಚು ನೀರನ್ನು ಸೇವಿಸಿ.
- ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
- ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ, ಸ್ವಲ್ಪ ಉಪ್ಪನ್ನು ಹಾಕಿ ಕುಡಿಯಿರಿ.
- ಘನ ಆಹಾರವನ್ನು ಸೇವಿಸಬೇಡಿ.
- ಆದಷ್ಟೂ ಗಂಜಿ ಮತ್ತು ಹಣ್ಣಿನ ರಸವನ್ನು ಸೇವಿಸಿ.ಇದರಿಂದ ನಿಮ್ಮ ದೇಹದಲ್ಲಿ ನೀರಿನಾಂಶ ಜಾಸ್ತಿಯಾಗುತ್ತದೆ.
- ಬ್ಲಾಕ್ ಟೀ ಕುಡಿಯಿರಿ.
- ಒಂದು ಚಮಚ ಮೆಂತೆ ಪುಡಿಯನ್ನು ಒಂದು ಲೋಟ ನೀರು ಅಥವಾ ಮೊಸರಲ್ಲಿ ಮಿಕ್ಸ್ ಮಾಡಿ ಕುಡಿಯಿರಿ.
- ದಾಳಿಂಬೆ ಸಿಪ್ಪೆಯ ಕಷಾಯ ಕುಡಿಯಿರಿ.
- ದೇಹಕ್ಕೆ ನಿಶ್ಯಕ್ತಿ ಬರದಂತೆ ನೋಡಿಕೊಳ್ಳಿ. ಬೇಗನೆ ಕಡಿಮೆಯಾಗದಿದ್ದರೆ, ಡಾಕ್ಟರ್ ಅನ್ನು ಕಾಣವುದೇ ಉತ್ತಮ.