ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಕೆಲವೊಂದು ಸಾರಿ ಪೋಲಿಸ್’ರ ಬಗ್ಗೆ ಅದರಲ್ಲೂ ಪೋಲಿಸ್ ಪೇದೆಗಳ ಬಗ್ಗೆ ಅವಹೇಳನವಾಗಿ ಮಾತನಾಡುವುದುಂಟು.
ಆದರೆ ಕೆಲವೊಂದು ಸಮಯಗಳಲ್ಲಿ ಅದೇ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಪ್ರಾಣವನ್ನೇ ಪಣಕ್ಕಿಟ್ಟು ಜನರನ್ನು ರಕ್ಷಿಸುತ್ತಾರೆ. ಹೌದು, ಇದೇ ತರ ಘಟನೆಯೊಂದು ಮಧ್ಯಪ್ರದೇಶದ ಚಿತೋರ ಎಂಬ ಹಳ್ಳಿಯಲ್ಲಿ ನಡೆದಿದೆ.
ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಅಭಿಷೇಕ್ ಪಟೇಲ್ ಬಾಂಬ್ ಹೊತ್ತುಕೊಂಡು ಓಡಿದ ಪೊಲೀಸ್ ಪೇದೆ.ಶುಕ್ರವಾರ ಮಧ್ಯಪ್ರದೇಶದ, ಚಿತೋರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ನಡೆದ ಘಟನೆಯಾದರೂ ಏನು ಗೊತ್ತಾ..!
ಮಧ್ಯಪ್ರದೇಶದ ಚಿತೋರಾದಲ್ಲಿರುವ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿತ್ತು. ಶಾಲಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದು ಪೊಲೀಸರ ಜೊತೆ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್ ಪಟೇಲ್ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ನಿಜವಾದ ಸಿಂಗಂ ಅಂದ್ರೆ ಈ ಅಭಿಷೇಕ್ ಪಟೇಲ್..!
ಬಾಂಬ್ ನೋಡಿದ ಕೂಡಲೇ ಪೊಲೀಸರು ಶಾಲೆಯನ್ನು ಮುಚ್ಚುವಂತೆ ಹೇಳಿದರು. ಈ ವೇಳೆ ಬಾಂಬ್ ನಿಷ್ಕ್ರಿಯ ದಳ ಸಹ ಸ್ಥಳಕ್ಕೆ ಆಗಮಿಸಿರಲಿಲ್ಲ. ವಿಚಾರ ತಿಳಿದು ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದವು. ಈ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದಂತೆ 40 ವರ್ಷದ ಅಭಿಷೇಕ್ ಪಟೇಲ್ 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬನ್ನು ಹೊತ್ತುಕೊಂಡು ಓಡಲು ಆರಂಭಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದ ಪ್ರತಿನಿಧಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ಈಗ 12 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಕ್ಕಳ ಪ್ರಾಣ ಉಳಿಸಲು ಒಂದು ಕಿಲೋ ಮೀಟರ್ ಓಡಿದ ರಿಯಲ್ ಸಿಗಂ!
100 ಸಂಖ್ಯೆಗೆ ಕರೆ ಬಂದ ಹಿನ್ನೆಲೆಯಲ್ಲಿ ನಾವು ಶಾಲೆಗೆ ಬಂದೆವು. ಕೆಲ ತಿಂಗಳ ಹಿಂದೆ ನಡೆದ ಪೊಲೀಸ್ ಆಪರೇಷನ್ ತರಬೇತಿ ಸಮಯದಲ್ಲಿ ಬಾಂಬ್ ಸಿಡಿದರೆ ಸುಮಾರು 500 ಮೀಟರ್ ವ್ಯಾಪ್ತಿಯ ಪ್ರದೇಶಗಳಿಗೆ ಹಾನಿ ಆಗುತ್ತದೆ ಎಂದು ತಿಳಿಸಿದ್ದರು.
ಹೀಗಾಗಿ ಮಕ್ಕಳ ಪ್ರಾಣವನ್ನು ಉಳಿಸಲು ನಾನು ಬಾಂಬ್ ಅನ್ನು ಹಿಡಿದುಕೊಂಡು ಒಂದು ಕಿ.ಮೀ ದೂರದವರೆಗೆ ಓಡಿ ಎಸೆದು ಬಂದೆ ಎಂದು ಅಭಿಷೇಕ್ ಪಟೇಲ್ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಈ ಪ್ರದೇಶದ ಸಮೀಪವೇ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಈ ಸ್ಥಳಕ್ಕೆ ಹೇಗೆ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಶಾಲೆ ಇರುವ ಗ್ರಾಮದಲ್ಲೇ ಸೇನೆ ಶೂಟಿಂಗ್ ನಡೆಸುವ ಸ್ಥಳವಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು: ನಮ್ಮ ಆರೋಗ್ಯ ಉತ್ತಮ ವಾಗಿರಲು ಇವು ಮುಖ್ಯ 1. ಬಿಪಿ: 120/80 2. ನಾಡಿ: 70 – 100 3. ತಾಪಮಾನ: 36.8 – 37 4. ಉಸಿರು: 12-16 5. ಹಿಮೋಗ್ಲೋಬಿನ್: ಪುರುಷ -13.50-18 ಹೆಣ್ಣು – 11.50 – 16 6. ಕೊಲೆಸ್ಟ್ರಾಲ್: 130 – 200 7. ಪೊಟ್ಯಾಸಿಯಮ್: 3.50 – 5 8. ಸೋಡಿಯಂ: 135 – 145 9. ಟ್ರೈಗ್ಲಿಸರೈಡ್‌ಗಳು: 220 10. ದೇಹದಲ್ಲಿನ ರಕ್ತದ…
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿದೆ. ಕೊಲೆ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ನೀಡುವಂತೆ ಕೋರಿ ಇತ್ತೀಚೆಗೆ ಬಿ.ಕೆ.ಸಿಂಗ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದರು.ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆ ಬಂಧಿಸಿತ್ತು. ತಂಡದ ಒಟ್ಟು 91 ಮಂದಿ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದಲ್ಲ ಒಂದು ದಿನ ಇದು ಕಾಡುತ್ತದೆ. ಕಿವಿನೋವು ಬರಲು ಹಲವು ಕಾರಣಗಳಿದ್ದು, ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಕಿವಿ ನೋವಿಗೆ…
ಸಾಮಾನ್ಯವಾಗಿ ನೀವು ಯಾವುದೇ ದೇಶದಲ್ಲಿ ಗಣ್ಯ ವ್ಯಕ್ತಿಗಳಿಗೆ, ಹಾಗು ಐತಿಹಾಸಿಕ ಸ್ಥಳಗಳಿಗೆ ಭದ್ರತೆ ಹಾಗು ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದನ್ನು ನೀವು ನೋಡಿರುತ್ತೀರಿ, ಆದರೆ ಭಾರತದಲ್ಲಿ ಇರುವ ಈ ಒಂದು ಮರಕ್ಕೆ ದಿನದ 24 ಗಂಟೆ ಮತ್ತು ವಾರದಲೂ ದಿನವೂ ಕೂಡ ವಿಶೇಷ ಭದ್ರತೆ ಒದಗಿಸಲಾಗುತ್ತದೆ ಎಂದರೆ ನೀವು ನಂಬುತ್ತೀರಾ, ನಿಜಕ್ಕೂ ಇದು ಸತ್ಯ. ಹೌದು ಭಾರತದ ಈ ಮರಕ್ಕೆ ವಿಶೇಷ ಕಾಳಜಿ ನೀಡಿ ಏಕೆ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಈ ವಿಶೇಷ ವರದಿ ನೋಡಲೇಬೇಕು….
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು.
ಮಳೆ ಬಂದಿಲ್ಲ ಅಂದ್ರೆ ಹಳ್ಳಿಗಳ ಕಡೆ ಮಳೆರಾಯನ ಪೂಜೆ ಮತ್ತು ಕಪ್ಪೆಗಳಗೆ ಮದುವೆ ಮಾಡಿಸುವುದು ವಾಡಿಕೆ. ಹಾಗೂ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನ ಮೊರೆಹೊದರೆ ಖಂಡಿತ ಮಳೆ ಬರುತ್ತದೆ ಎಂಬ ನಂಬಿಕೆ ಇದೆ… ಹೌದು, ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮಸ್ಥರು ಹೀಗೆ ಕಪ್ಪೆಗಳಗೆ ಮದುವೆ ಮಾಡಿಸಿ ಮೂರೇ ದಿನದಲ್ಲಿ ಮಳೆ ಬರಿಸಿದ್ದಾರೆ. ಕಪ್ಪೆ ಮದುವೆ ಮಾಡಿಸುವುದು ಹೇಗೆ? ಊರಿನ ಜನರು ಮಳೆರಾಯನಿಗೆ ಪ್ರಾರ್ಥಿಸಿ ಹೆಣ್ಣು ಮತ್ತು ಗಂಡು ಕಪ್ಪೆಗಳಿಗೆ ಸಿಂಗಾರ ಮಾಡಿ ಗ್ರಾಮದ ಮುಖ್ಯಬೀದಿಗಳಲ್ಲಿ ತಮಟೆವಾದ್ಯಗಳೊಂದಿಗೆ ಕಪ್ಪೆ ಜೊಡಿಯ ಮೆರವಣಿಗೆ…