4 ಬಾಲ್‍ಗಳಿಗೆ 92 ರನ್‍ಗಳನ್ನು ನೀಡಿದ ಬೌಲರ್ ಸುಜೊನ್ ಮಹಮ್ಮದ್ ಅವರ ಮೇಲೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ 10 ವರ್ಷಗಳ ಕಾಲ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಅಂದು ನಡೆದ ಮ್ಯಾಚ್‍ನ ಕ್ಯಾಪ್ಟನ್, ತಂಡದ ನಾಯಕ ಮತ್ತು ಮ್ಯಾನೇಜರ್ ಅವರನ್ನು 5 ವರ್ಷಗಳ ಕಾಲ ಢಾಕಾ ಡಿವಿಜನ್ ಲೀಗ್ ನಿಂದ ನಿಷೇಧಿಸಲಾಗಿದೆ.
ಅಂದು ನಡೆದಿದ್ದೇನು?
ಢಾಕಾ ಸೆಕೆಂಡ್ ಡಿವಿಶನ್ ಲೀಗ್ ನಲ್ಲಿ ನಡೆದ 50 ಓವರ್ ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಲ್ಮಾಟಿಯಾ ಕ್ಲಬ್ 14 ಓವರ್ ಗಳಲ್ಲಿ ಕೇವಲ 88 ರನ್ ಗಳಿಸಿ ಆಲೌಟಾಯ್ತು. 89 ರನ್ ಗಳ ಗೆಲುವಿನ ಗುರಿ ಪಡೆದ ಎದುರಾಳಿ ತಂಡ ಅಕ್ಸಿಯೋಮ್ ಕ್ರಿಕೆಟರ್ಸ್ ಕೇವಲ 4 ಬಾಲ್ ಗಳಲ್ಲಿ 92 ರನ್ ಬಾರಿಸಿತ್ತು. ಲಾಲ್ಮಾಟಿಯಾ ತಂಡದ ಬೌಲರ್ ಸುಜೊನ್ ಮಹಮ್ಮದ್ 13 ವೈಡ್ ಮತ್ತು 3 ನೋಬಾಲ್ ಎಸೆಯುವ ಮೂಲಕ ವಿರೋಧಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಮೊದಲ ಓವರ್ ನಲ್ಲಿ ಬೌಲರ್ ಎಸೆದ 13 ವೈಡ್ ಗಳನ್ನು ಕೀಪರ್ ಹಿಡಿಯುವ ಪ್ರಯತ್ನವನ್ನೇ ಮಾಡದೇ ಅವೆಲ್ಲವೂ ಬೌಂಡರಿ ಗೆರೆ ದಾಟಿತ್ತು. ಪರಿಣಾಮ ವೈಡ್ ಗಳಿಂದ 65 ರನ್‍ಗಳು ಹರಿದು ಬಂದರೆ, ಅದೇ ಓವರ್ ನಲ್ಲಿ ಬಂದ 3 ನೋಬಾಲ್ ಕೂಡ ಬೌಂಡರಿ ಗೆರೆ ದಾಟಿತ್ತು. ಇದರಿಂದಲೂ 15 ರನ್ ಗಳು ಖಾತೆಗೆ ಸೇರಿತ್ತು. ಈ ರನ್ ಗಳ ತಂಡ ಆರಂಭಿಕ ಬ್ಯಾಟ್ಸ್‍ಮನ್ ಮೂರು ಎಸೆತಗಳಲ್ಲಿ ಸತತ ಮೂರು ಬೌಂಡರಿ ಹೊಡೆದ್ದರು. ಇದರಿಂದ ತಂಡಕ್ಕೆ 12 ರನ್ ಬಂದಿತ್ತು. ಅಂತಿಮವಾಗಿ ಆಕ್ಸಿಯಮ್ ಕ್ರಿಕೆಟರ್ಸ್ ತಂಡ ಕೇವಲ 4 ಎಸೆತಗಳಲ್ಲಿ 92 ಪೇರಿಸಿ 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು.
ಲಾಲ್ಮಾಟಿಯಾ ತಂಡದ ಆರೋಪ ಏನು?
ಎಂಥ ಬೌಲರ್’ನೇ ಆದರೂ ಇಷ್ಟೊಂದು ಪ್ರಮಾಣದಲ್ಲಿ ವೈಡ್ ಮತ್ತು ನೋಬಾಲ್’ಗಳನ್ನು ಎಸೆಯಲು ಸಾಧ್ಯವಿಲ್ಲ. ಆಕ್ಸಿಯಾಮ್ ಮತ್ತು ಲಾಲ್ಮಾಟಿಯಾ ನಡುವಿನ ಈ ಪಂದ್ಯ ಹಲವು ವಿವಾದಗಳಿಂದ ಕೂಡಿತ್ತು. ಪಂದ್ಯ ಅಂಪೈರ್’ಗಳು ಆರಂಭದಿಂದಲೂ ಪಕ್ಷಪಾತಿ ಧೋರಣೆ ಹೊಂದಿದ್ದರು ಎಂಬುದು ಲಾಲ್ಮಾಟಿಯಾ ತಂಡದ ಆರೋಪಿಸಿತ್ತು.
ಟಾಸ್ ವೇಳೆ ತಮ್ಮ ತಂಡದ ಕ್ಯಾಪ್ಟನ್’ಗೆ ಕಾಯಿನ್ ನೋಡಲೂ ಅವಕಾಶ ಕೊಡದೇ ಮೊದಲು ಬ್ಯಾಟಿಂಗ್ ಕಳುಹಿಸಲಾಯಿತು. 14 ಓವರ್’ಗಳ ಇನ್ನಿಂಗ್ಸಲ್ಲಿ ಅಂಪೈರ್’ಗಳು ತಮ್ಮ ತಂಡದ ವಿರುದ್ಧ ಅನೇಕ ತೀರ್ಪುಗಳನ್ನು ಕೊಟ್ಟು ಎಂದು ಲಾಲ್ಮಾಟಿಯಾ ಆಟಗಾರರ ಆರೋಪ ಮಾಡಿದ್ದರು.
ಇಡೀ ಸರಣಿಯಲ್ಲಿ ಲಾಲ್ಮಾಟಿಯಾ ತಂಡದ ವಿರುದ್ಧ ಅಂಪೈರ್ ಗಳು ತಪ್ಪು ನಿರ್ಣಯ ನೀಡಿದ್ದಾರೆ ಎಂದು ಆರೋಪಗಳು ಎಲ್ಲಡೆಯಿಂದ ಕೇಳಿ ಬಂದಿದ್ದವು. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನಿಖೆಗೆ ಮುಂದಾಗಿತ್ತು.