ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ.
ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು ಹೊಟ್ಟೆ ಪಾಡಿಗಾಗಿ ಏನಾದರು ಮಾಡಲೇಬೇಕಲ್ವಾ ಸರ್ ಎಂದ.. ಈ ಮಾತನ್ನು ಕೇಳಿ ಬೇಸರಗೊಂಡ ಸಾಫ್ಟವೇರ್ ಉದ್ಯಮಿ, ಒಂದು ಸಮೋಸ ಮಾರಿದರೆ ನಿನಗೆ ಎಷ್ಟು ಸಿಗುತ್ತದೆ? ದಿನಕ್ಕೆ ಎಷ್ಟು ಸಮೋಸ ಮಾರ್ತ್ಯಪ್ಪ? ಎಂದು ಕೇಳಿದ. ಇದಕ್ಕೆ ಸಮೋಸ ಮಾರುವವನು, ಸಾರ್ ಒಂದು ಸಮೋಸ ಮಾರಿದರೆ 75 ಪೈಸೆ ಸಿಗುತ್ತದೆ. ಸೀಸನ್ ಸಮಯದಲ್ಲಿ ದಿನಕ್ಕೆ ಮೂರರಿಂದ ಮೂರು ವರೆ ಸಾವಿರ ಮಾರುತ್ತೇನೆ, ಸೀಸನ್ ಇಲ್ಲದಿದ್ದಾಗ ದಿನಕ್ಕೆ ಎರಡು ಸಾವಿರ ಸೇಲ್ ಮಾಡುತ್ತೇನೆ ಎಂದು ಹೇಳಿದ !
ಮನಸಲ್ಲೇ ಯೋಚಿಸದ ಆ ಉಧ್ಯಮಿ ದಿನಕ್ಕೆ ಎರಡು ಸಾವಿರ ಸಮೋಸ ಮಾರಿದರೆ, ಒಂದು ಸಾವಿರದ ಐನೂರು ರೂ ಆದಾಯ, ಅದೇ ತಿಂಗಳಿಗೆ 45 ಸಾವಿರ ! ನನ್ನ ಸಂಬಳ ತಿಂಗಳಿಗೆ ಕೇವಲ 25 ಸಾವಿರ, ನನ್ನ ಕೆಲಸದ ಒತ್ತಡದಲ್ಲಿ ನನ್ನ ನಗುವನ್ನೇ ಮರೆತು ಹೋಗಿದ್ದೇನೆ, ಆದರೆ ಈ ಹುಡುಗ ಹಾಗಲ್ಲ, ಎಂದುಕೊಂಡು ಮತ್ತೇ ಸಮೋಸ ಹುಡುಗನಿಗೆ, ನೀವೆ ಸಮೋಸವನ್ನು ತಯಾರು ಮಾಡುತ್ತೀರ ಎಂದು ಪ್ರಶ್ನಿಸಿದ? ಇದಕ್ಕೆ ಸಮೋಸ ಮಾರುವವನು, ಇಲ್ಲಾ ಸಾರ್ ನಮ್ಮ ಯಜಮಾನ ಬೇರೆಯವರ ಬಳಿ ಕೊಂಡುಕೊಂಡು ನಮಗೆ ಕೊಡುತ್ತಾನೆ ಎಂದು ಹೇಳಿದ. ಈ ಕೆಲಸ ಬಿಟ್ಟು ಬೇರೆ ಏನು ಮಾಡುತ್ತೀಯಾ? ಎಂದು ಉಧ್ಯಮಿ ಕೇಳಿದ.. ಕಳೆದ ವರ್ಷ ನನ್ನ ಅಕ್ಕನಿಗೆ ಮದುವೆ ಮಾಡಿದೆ, ನಂತರ ನಮ್ಮ ಊರಿನಲ್ಲಿ ಒಂದು ಜಮೀನು ಕೂಡ ಖರೀದಿ ಮಾಡಿದ್ದೇನೆ. ಅದರ ಬೆಲೆ ಈಗ ಸುಮಾರು 15 ಲಕ್ಷವಿದೆ. ಈ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಇಂಜಿನಿಯರ್ ನೀನು ಎಲ್ಲಿಯ ತನಕ ವ್ಯಾಸಾಂಗ ಮಾಡಿದ್ದೀಯಾ ಎಂದು ಕೇಳಿದ.
ಇದಕ್ಕೆ ಉತ್ತರಿಸಿದ ಹುಡುಗ, ಸರ್ ನಾನು ಮೂರನೇ ತರಗತಿವರೆಗೂ ಓದಿದ್ದೇನೆ, ಇದಾದ ಮೇಲೆ ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದ, ಇದಕ್ಕೆ ಉಧ್ಯಮಿ ಯಾಕೆ ಮುಂದೆ ಓದಬೇಕು ಅನಿಸಲಿಲ್ಲವಾ? ಸಾರ್ ನನ್ನ ವ್ಯಾಪಾರವನ್ನು ನನ್ನ ಮಕ್ಕಳಿಗೆ ಕೊಡಬಹುದು, ಆದರೆ ನಿಮ್ಮ ಉದ್ಯೋಗ ನಿಮ್ಮ ಮಕ್ಕಳಿಗೆ ಕೊಡಲು ಸಾಧ್ಯವಾಗುವುದಿಲ್ಲ ಅಲ್ಲವಾ? ಇದೇ ನನಗೆ ಜನ್ಮ ಕೊಟ್ಟ ತಂದೆ ಕಲಿಸಿದ ನೀತಿ, ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದು ನನಗೆ ಗೊತ್ತಾಗಿದೆ, ಹಾಗಾಗಿ ಓದು ನನಗೆ ಅವಶ್ಯಕತೆ ಇಲ್ಲ. ಸರ್ ನನ್ನ ಸ್ಟೇಷನ್ ಬಂತು ನಾನು ಹೊರಡುತ್ತೇನೆ ಎಂದು ಹೇಳಿ ಹೊರಟು ಬಿಟ್ಟ ಸಮೋಸ ಮಾಡುವ ಹುಡುಗ..
ನೋಡಿದ್ರಲ್ಲ ವಿದ್ಯೆ ಎಂಬುದು ಬರೀ ಜ್ಞಾನಾರ್ಜನೆಗೆ ಮತ್ತು ಒಳ್ಳೆಯ ನಾಗರೀಕನಾಗಿ ಬದುಕಲು, ದಯವಿಟ್ಟು ಓದನ್ನು ವ್ಯವಹಾರಕ್ಕೆ ಉಪಯೋಗಿಸಬೇಡಿ. ವಿದ್ಯೆ ಇಲ್ಲದವರನ್ನು ಕೀಳು ಮಟ್ಟದಲ್ಲಿ ನೋಡಬೇಡಿ, ಓದಿದವನಿಗೆ ಒಂದೇ ಕೆಲಸ, ಓದಾದೇ ಇಲ್ಲದವನಿಗೆ ಮಾಡಿದ್ದೆಲ್ಲಾ ಕೆಲಸಾನೇ..