ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ಸಂಚರಿಸಿ ರಕ್ತದ ಮಾದರಿಯನ್ನು ನೀಡಿದ ಘಟನೆ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ನಡೆದಿದೆ.ನಂದಗೋನ್‍ನ ಜಿಲ್ಲಾಸ್ಪತ್ರೆಯಿಂದ ರಕ್ತದ ಮಾದರಿಯನ್ನು ಡ್ರೋನ್ ಮೂಲಕ ತೇರಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೊದಲ ಪ್ರಯತ್ನದಲ್ಲೇ ಇದು ಸಫಲವಾಗಿದ್ದು, ಇದು ಭಾರತದ ಆರೋಗ್ಯದ ಸೇವೆಯಲ್ಲಿ ಇದೊಂದು ದೊಡ್ಡ ಹೆಜ್ಜೆ ಆಗಲಿದೆ.
ಡ್ರೋನ್ ನಂದಗೋನದಿಂದ ತೇರಿ ನಡುವಿನ 30 ಕಿ.ಮೀ ದೂರವನ್ನು 18 ನಿಮಿಷದಲ್ಲಿ ಡ್ರೋನ್ ಕ್ರಮಿಸಿದೆ. ಡ್ರೋನ್ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮಥ್ರ್ಯ ಹೊಂದಿದೆ. ಈ ಪ್ರಯತ್ನ ಯಶಸ್ವಿ ಆಗಿದೆ. ಆಸ್ಪತ್ರೆ 30 ಕಿ.ಮೀ ದೂರವಿದ್ದು ಕೇವಲ 18 ನಿಮಿಷದಲ್ಲಿ ರಕ್ತದ ಮಾದರಿಯನ್ನು ಕಳುಹಿಸಲಾಗಿದೆ. ಇದು ದೂರದ ಪ್ರದೇಶದಲ್ಲಿ ಇರುವ ರೋಗಿಗಳಿಗೆ ಸಹಾಯವಾಗುತ್ತದೆ ಎಂದು ತೇರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.
ರಸ್ತೆ ಮೂಲಕ ರಕ್ತದ ಮಾದರಿ ಬರಬೇಕಾದರೆ 60 ರಿಂದ 80 ನಿಮಿಷ ಬೇಕಾಗುತಿತ್ತು. ಸರಿಯಾದ ರಸ್ತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಉಪಯೋಗವಾಗಲಿದೆ.
ಬಿಸಿಲಿನಿಂದ ರಕ್ತ ಹಾಳಾಗಬಾರದು ಎಂದು ಅದರ ಜೊತೆ ಕೂಲ್ ಕಿಟ್ ಕೂಡ ಇಡಲಾಗಿತ್ತು ಎಂದು ತೇರಿ ಗ್ರಾಮದ ಬುರಾರಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.ಐಐಟಿಯ ಹಳೆಯ ವಿದ್ಯಾರ್ಥಿ ನಿಖಿಲ್ ಉಪಾದ್ಯಾಯ ಮಾಲೀಕತ್ವ ಸಿಡಿ ಸ್ಪೇಸ್ ರೋಬೋಟಿಕ್ಸ್ ಲಿಮಿಟೆಡ್ ಕಂಪನಿ ಈ ಡ್ರೋನ್ ನಿರ್ಮಾಣ ಮಾಡಿದೆ. 500 ಗ್ರಾಂ ತೂಕದ ವಸ್ತುಗಳನ್ನು ಹೊರುವ ಸಾಮಥ್ರ್ಯವನ್ನು ಈ ಡ್ರೋನ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 50 ಕಿ.ಮೀ ಸಂಚರಿಸುತ್ತದೆ.