ಗರಾಜನ್ ಗ್ರಾಮದಲ್ಲಿ ಸರ್ಪಂಚ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ರೆ, ಅಭ್ಯರ್ಥಿಯಾಗಿದ್ದ ಶಹನಾಜ್ ಖಾನ್, ಎಂಬಿಬಿಎಸ್ ನಾಲ್ಕನೇ ವರ್ಷದ ಪರೀಕ್ಷೆ ಬರೆಯುತ್ತಿದ್ಲು. ಮಾರ್ಚ್ 5ರಂದೇ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದೆ.
24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶಹನಾಜ್ ಖಾನ್ ಳನ್ನು ಗ್ರಾಮಸ್ಥರು ತಮ್ಮ ಸರ್ಪಂಚ್ ಆಗಿ ಆಯ್ಕೆ ಮಾಡಿದ್ದಾರೆ. ಶಹನಾಜ್ ಮೊರಾದಾಬಾದ್ ನ ತೀರ್ಥಂಕರ ಮಹಾವೀರ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ಗ್ರಾಮದ ಅತ್ಯಂತ ಕಿರಿಯ ಸರ್ಪಂಚ್ ಎನಿಸಿಕೊಂಡಿದ್ದಾಳೆ ಶಹನಾಜ್.
ಸದ್ಯದಲ್ಲೇ ಗುರ್ಗಾಂವ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಶುರು ಮಾಡಲಿದ್ದಾಳೆ. ಅದರ ಜೊತೆಜೊತೆಗೆ ರಾಜಕೀಯಕ್ಕೂ ಕಾಲಿಟ್ಟಿರೋದು ವಿಶೇಷ. 2015ರಲ್ಲಿ ಶಹನಾಜ್ ಳ ಅಜ್ಜ ಕೂಡ ಸರ್ಪಂಚ್ ಆಗಿ ಆಯ್ಕೆಯಾಗಿದ್ದರು. ಆದ್ರೆ ಶಿಕ್ಷಣ ಪ್ರಮಾಣಪತ್ರ ತಿದ್ದಿದ ಆರೋಪದ ಮೇಲೆ ಹುದ್ದೆ ಕಳೆದುಕೊಂಡಿದ್ದರು. ಇದೀಗ ಶಹನಾಜ್ ಮೇಲೆ ಗ್ರಾಮಸ್ಥರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.