ವಿಚಿತ್ರ ಆದರೂ ಸತ್ಯ

21 ವರ್ಷದ ತಂಗಿಯ ಮದುವೆ 10 ವರ್ಷದ ಬಾಲಕನೊಂದಿಗೆ ಮಾಡಿಸಿದ ಅಣ್ಣ..!ತಿಳಿಯಲು ಈ ಲೇಖನ ಓದಿ..

By admin

December 23, 2017

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಆಸ್ತಿಗಾಗಿ 21ವರ್ಷದ ಯುವತಿಗೆ 10 ವರ್ಷದ ಬಾಲಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಇಲ್ಲಿನ ಪಿಂದಿ ಭಟಿಯಾನ್‌ ನಗರದ ಭಾಂಗ್‌ಸಿಕ್‌ ಗ್ರಾಮದಲ್ಲಿ ಇಂತಹದ್ದೊಂದು ಮದುವೆ ನಡೆದಿದೆ.

 

18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿಸುವಂತಿಲ್ಲ. ಕುಟುಂಬದ ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಹೋದರ ಸಂಬಂಧಿ ಅಪ್ರಾಪ್ತ ಬಾಲಕನೊಂದಿಗೆ ಯುವತಿಗೆ ಮದುವೆ ಮಾಡಲಾಗಿದೆ.

ಯುವತಿಯ ಅಣ್ಣ ಮೇಹ್‌ವಿಷ್‌ ಎಂಬಾತ ತಾನೇ ಮುಂದೆ ನಿಂತು ತಂಗಿಗೆ ಸಹೋದರ ಸಂಬಂಧಿ ಬಾಲಕನೊಂದಿಗೆ ಮದುವೆ ಮಾಡಿಸಿದ್ದಾನೆ.

ಈ ಮದುವೆ ಕುರಿತು ಸ್ಥಳೀಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿವಾಹ ಕಾನೂನು ಬಾಹಿರವಾಗಿದ್ದು, ಇದನ್ನು ತಡೆಯವಲ್ಲಿ ಮಕ್ಕಳ ರಕ್ಷಣಾ ಬ್ಯೂರೋ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ.

ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.  ಇನ್ನು, ಪಾಕಿಸ್ತಾನ ಕಾನೂನು ಪ್ರಕಾರ ಇದೊಂದು ಬಾಲ್ಯವಿವಾಹವಾಗಿದ್ದು,18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿಸುವಂತಿಲ್ಲ.