ಸುದ್ದಿ

2018 ರಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವಜನತೆಗೆ ಅರಿವು ಮೂಡಿಸಲು 5K ಓಟದಲ್ಲಿ ಸ್ಪರ್ಧಿಗಳೊಂದಿಗೆ ಸ್ವತಃ ತಾವೂ ಕೂಡ ಪಾಲ್ಗೊಂಡ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

By admin

February 25, 2018

ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ.. ಅದರಲ್ಲೂ 2000 ಸಾಲಿನ ವರ್ಷದಲ್ಲಿ ಹುಟ್ಟಿದವರಿಗೆ 2018 ರಲ್ಲಿ ನಡೆಯುವ ಚುನಾವಣೆಯಲ್ಲಿ ಮೊದಲ ವೋಟ್ ಮಾಡುವ ಅವಕಾಶವಾಗಿದೆ..

ಹೌದು 2018 ರಲ್ಲಿ ಮೊದಲ ಬಾರಿಗೆ ವೋಟ್ ಮಾಡುತ್ತಿರುವ ಯುವ ಜನತೆಯ ಜೊತೆಗೆ ಎಲ್ಲಾ ವರ್ಗದವರಿಗೂ ಮತದಾನದ ಮಹತ್ವವನ್ನು ತಿಳಿಸಿ ಅರಿವು ಮೂಡಿಸಲೆಂದೇ ಮಲ್ಲೇಶ್ವರಂ ನ “ನಮ್ಮ ವೋಟ್ ಫೌಂಡೇಷನ್” ನವರು 5K ಓಟವನ್ನು ಫೆಬ್ರವರಿ 25ರಂದು ಆಯೋಜಿಸಿದ್ದರು..

ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು ಚಾಲನೆ ನೀಡಿದ ಈ ಅಭಿಯಾನದಲ್ಲಿ 2000 ಸ್ಪರ್ಧಿಗಳು ಭಾಗವಹಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು..

ಚಾಲನೆ ನೀಡಿದ್ದಷ್ಟೇ ಅಲ್ಲದೇ ಸ್ವತಃ ತಾವೂ ಕೂಡ ಸ್ಪರ್ಧಿಗಳೊಂದಿಗೆ ಪಾಲ್ಗೊಂಡು ಎಲ್ಲೂ ನಿಲ್ಲದೇ ಓಟವನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.. ಕಾರ್ಯಕ್ರಮವನ್ನು ಉದ್ಘಾಟಿಸಿ ಕೇವಲ ಸ್ಪೂರ್ತಿಯ ಮಾತುಗಳನ್ನಾಡಿ ಮನೆಗೆ ಹೋಗುವ ಬದಲು ಸ್ಪರ್ಧಿಗಳೊಂದಿಗೆ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ..

ಮಲ್ಲೇಶ್ವರಂ ಪ್ಲೇ ಗ್ರೌಂಡ್ ನಲ್ಲಿ ಶುರುವಾದ ಓಟ 5 ಕಿ ಮೀ ಸಾಗಿ ಮತ್ತದೇ ಆಟದ ಮೈದಾನದಲ್ಲಿ ಮುಕ್ತಾಯಗೊಂಡಿತು.. ಸಂಪೂರ್ಣ 5 ಕಿ ಮೀ ಅನ್ನು ಶಾಸಕರು ನಿರಾಯಾಸವಾಗಿ ಪೂರ್ಣಗೊಳಿಸಿದ್ದು ಓಟದಲ್ಲಿ ಭಾಗವಹಿಸಿದ ಎಷ್ಟೋ ಯುವಕರಿಗೆ ಹುಬ್ಬೇರುವಂತೆ ಮಾಡಿತು..

ಕ್ಷೇತ್ರದ ಜನತೆಗೆ ಶಾಸಕರುಗಳು ನೋಡಲು ಸಿಗುವುದೇ ಅಪರೂಪ ಆದರೆ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರ ವಿಚಾರದಲ್ಲಿ ಈ ಅಭಿಪ್ರಾಯ ಬದಲಾಗುತ್ತದೆ.. ಸದಾ ಜನರ ನಡುವೆಯ ಜನಸಾಮಾನ್ಯರಂತೆ ಕಾಣುವ ಇವರು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಅವರಿಗೆ ಅವಕಾಶಗಳನ್ನು ಮಾಡಿಕೊಡುವುದರಲ್ಲಿ ಮೊದಲಿಗರೆಂದೇ ಹೇಳಬಹುದು..

ಡೌನ್ ಟು ಅರ್ಥ್ ಪರ್ಸನಾಲಿಟಿ ಇಂದಲೇ ಎಲ್ಲರಿಗೂ ಇಷ್ಟವಾಗುವ ಡಾ.ಅಶ್ವತ್ಥ್ ನಾರಾಯಣ್ ರವರು ಎಂದಿಗೂ ಹೀಗೆ ಇರಲಿ ಎಂಬುದೇ ನಮ್ಮ ಆಶಯ..

ಏನೇ ಆಗಲಿ ಮತದಾನ ನಮ್ಮ ನಿಮ್ಮೆಲ್ಲರ ಹಕ್ಕು.. ವೋಟ್ ಮಾಡಲು ಮರೆಯದಿರಿ.. ಮರೆತವರನ್ನು ಕರೆತಂದು ಮತದಾನ ಮಾಡಿ..