2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.
ಭಾರತ ಜನಸಂಖ್ಯೆ ಉತ್ಪತ್ತಿಯಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂಬುದನ್ನು ಹೊಸ ವರ್ಷದ ಮೊದಲ ದಿನದ ಜನನ ಪ್ರಮಾಣ ಮತ್ತೊಮ್ಮೆ ಸಾಬೀತುಪಡಿಸಿದೆ.
ಇನ್ನೊಂದು ವಿಶೇಷವೆಂದ್ರೆ ಹಿಂದುಳಿದ ದೇಶಗಳಲ್ಲೇ ಜನನ ಪ್ರಮಾಣ ಹೆಚ್ಚಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ಮಾಹಿತಿ ನೀಡಿದೆ.
ವರ್ಷದ ಮೊದಲ ದಿನ ಜನಿಸಿದ ಮಕ್ಕಳ ಸಂಖ್ಯೆಯಲ್ಲಿ ಅರ್ಧದಷ್ಟು ಈ 9 ದೇಶಗಳ ಕೊಡುಗೆ ಇದೆ:-
ಭಾರತ(69,070), ಚೀನಾ(44,760), ನೈಜೀರಿಯಾ(20,210), ಪಾಕಿಸ್ತಾನ(14,910), ಇಂಡೋನೇಶಿಯಾ(13,370), ಅಮೆರಿಕಾ(11,280), ಕಾಂಗೋ(9,400), ಇಥಿಯೋಪಿಯಾ(9,020) ಹಾಗೂ ಬಾಂಗ್ಲಾದೇಶ(8,370).