ರಾಜಕೀಯ, ರಾಜಕಾರಣಿಗಳು ಎಂದರೆ ಸಾಕು, ಎಲ್ಲರೂ ಹೇಳುವುದು ಒಂದೇ…ಇವರೆಲ್ಲಾ ಎಷ್ಟು ಸಾಚಾ ಅಂತ ಯಾರಿಗೆ ತಾನೇ ಗೊತ್ತಿಲ್ಲಾ ಅಂತಲೇ ಹೇಳುತ್ತಾರೆ.ಯಾಕಂದ್ರೆ ಸ್ವತಹ ರಾಜಕಾರಣಿಗಳೇ ಒಬ್ಬರ ಮೇಲೆ ಒಬ್ಬರು, ಅವರು ಅಷ್ಟು ಆಸ್ತಿ ಮಾಡಿದ್ದಾರೆ, ಇವರು ಇಷ್ಟು ಕೋಟಿ ಹೊಡೆದಿದ್ದಾರೆ ಅಂತ ಅಪಾದನೆ ಮಾಡುವವರು ತುಂಬಿ ಹೋಗಿದ್ದಾರೆ.
ಇದೆರೆಲ್ಲದರ ನಡುವೆ ಇಂತಹ ಕಾಲದಲ್ಲಿಯೂ ಪ್ರಾಮಾಣಿಕ ರಾಜಕಾರಣಿಗಳು ಇದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.ಆದರೆ ಅಂತಹ ವ್ಯಕ್ತಿಗಳು ಇದ್ದಾರೆ. ಅವ್ರು ಬೇರೆ ಯಾರೂ ಅಲ್ಲ 20 ವರ್ಷಗಳಿಂದ ಯಾವ ಪಕ್ಷವೂ ಸೋಲಿಸಲಾಗದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್.
ಇವ್ರು ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.ಆದರೆ ಇತ್ತೀಚಿಗೆ ತಾನೇ ನಡೆದ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಮಾಣಿಕ್ ಸರ್ಕಾರ್ ಸೋತು, ಈಗ ಪಕ್ಷದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬರೋಬ್ಬರಿ 20 ವರ್ಷ ತ್ರಿಪುರಾ ರಾಜ್ಯದ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ ಮಾಣಿಕ್ ಸರ್ಕಾರ್.ಅಂದ ಹಾಗೆ ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರೂ ಇವರ ಹತ್ತಿರ ವಾಸಿಸಲು ಒಂದು ಸ್ವಂತ ಮನೆ ಕೂಡ ಇಲ್ಲ.ಹಾಗಾಗಿ ಇವರು ತಾವು ಮುಖ್ಯಮಂತ್ರಿಯಾಗಿದ್ದಾಗ ಇದ್ದ ಮನೆಯನ್ನು ಖಾಲಿ ಮಾಡಿ,ಈಗ ತಮ್ಮ ಪಕ್ಷದ ಅತಿಥಿ ಗೃಹದಲ್ಲಿ ವಾಸ್ತವ್ಯಹೂಡಿದ್ದಾರೆ.
ಸಿಪಿಎಂ ಪಕ್ಷದ ನಾಯಕ ಬಿಜನ್ ಧಾರ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮತ್ತು ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯರೊಂದಿಗೆ ಪಕ್ಷದ ಕಚೇರಿ ಅತಿಥಿ ಗೃಹದಲ್ಲಿ ವಾಸಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಮಾಣಿಕ್ ಸರ್ಕಾರ್ ಆಸ್ತಿ ಎಷ್ಟು ಗೊತ್ತಾ..?
ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಮ್ಮ ಇಡೀ ಜೀವನದಲ್ಲಿ ಕೇವಲ 900 ಚದರ ಅಡಿ ಆಸ್ತಿಯನ್ನ ಮಾತ್ರ ಸಂಪಾದನೆ ಮಾಡಿದ್ದು, ಅದನ್ನೂ ಕೂಡ ತಮಗೆ ಮಕ್ಕಳಿಲ್ಲದ ಕಾರಣ ತಮ್ಮ ಬಂದುಗಳಿಗೆ ಕೊಟ್ಟುಬಿಟ್ಟಿದ್ದಾರೆ.
ಯಾವುದೇ ಕಾರ್ ಮತ್ತು ಮೊಬೈಲ್ ಕೂಡ ಹೊಂದಿಲ್ಲದ ಇವರು ತನಗೆ ಸರ್ಕಾರದಿಂದ ಬರುತ್ತಿದ್ದ ಸಂಬಳವನ್ನು ಪಕ್ಷಕ್ಕೆ ನೀಡಿ ಪಕ್ಷದಿಂದ ಕೊಡುವ ಸುಮಾರು 10 ಸಾವಿರ ರೂಪಾಯಿಗಳಿಂದ ಜೀವನ ನಡೆಸುತ್ತಿದ್ದರು.
ಇಲ್ಲಿ ಓದಿ:-20 ವರ್ಷಗಳಿಂದ ಯಾವ ಪಕ್ಷವೂ ಸೋಲಿಸಲಾಗದ ಮುಖ್ಯಮಂತ್ರಿ…
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದ ಪ್ರಕಾರ ಇವರು ಯಾವುದೇ ಬಂಗಲೆ,ಕಾರು,ಆಸ್ತಿ,ಮನೆಯನ್ನು ಹೊಂದಿಲ್ಲದ ಇವರ ಬಳಿ 1,520 ರೂ. ಹಣವಿದ್ದು ಮತ್ತು 2,410 ರೂ. ಎಸ್‍ಬಿಐ ಬ್ಯಾಂಕ್ ಖಾತೆಯಲ್ಲಿ ಇದೆ ಎಂದು ಚುನಾವಣಾ ಸಮಯದಲ್ಲಿ ಅಫಿಡೆವಿಟ್ ಸಲ್ಲಿಸಿದ್ದರು. 2013 ರಲ್ಲಿ ಬ್ಯಾಂಕ್ ಖಾತೆಯಲ್ಲಿ 9,720 ರೂ. ಇತ್ತು ಎಂದು ಉಲ್ಲೇಖಿಸಿದ್ದರು.
ಏನೇ ಆದರೂ ಒಂದು ಅಂತೂ ಸತ್ಯ ಆಗಿದೆ.ಪ್ರಾಮಾಣಿಕರಿಗೆ ಇದು ಕಾಲ ಅಲ್ಲ….