ಹಣ ಕಾಸು

1595ನೇ ಇಸವಿಯಲ್ಲಿ ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ

By admin

February 14, 2018

ನಾವು ದಿನ ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಈಗ ಗಗನಕ್ಕೇರಿದೆ.ಆದರೆ,1595 ರಲ್ಲಿ ಅವುಗಳ ಬೆಲೆ ಎಷ್ಟಿತ್ತೆಂದು ಹೇಳಿದರೆ ನಿಮಗೆ ಅಚ್ಚರಿಯಾಗುತ್ತದೆ.ಈಗ 50 ರೂಪಾಯಿ ಕೊಟ್ಟರೂ ಸಿಗದ ಅಕ್ಕಿಯ ಬೆಲೆ 1595 ನೇ ಇಸವಿಯಲ್ಲಿ ಒಂದು ಪೈಸೆ ಮಾತ್ರ.

ಅಕ್ಕಿಯಲ್ಲದೆ ಗೋದಿ,ಹಾಲು ಇವುಗಳ ಬೆಲೆಯೂ ಬಹಳ ಕಡಿಮೆಯಿತ್ತು.ಅವುಗಳ ವಿವರಗಳನ್ನು ಒಮ್ಮೆ ನೋಡೋಣ…

ಆ ಕಾಲದಲ್ಲಿ ರೂಪಾಯಿ ಚಲಾವಣೆಯಲ್ಲಿ ಇಲ್ಲದಿದ್ದರೂ,ಈಗಿನ ರೂಪಾಯಿಗೆ ಆಗ ಚಲಾವಣೆಯಲ್ಲಿದ್ದ ‘ಆಣೆ’ ಗಳಿಗೆ ಹೋಲಿಸಿ ಮಾಡಿದ ಲೆಕ್ಕವಿದು!

15 ಕೆಜಿ ಬೇಳೆ ಕಾಳುಗಳು-30 ಪೈಸೆಗಳಿಂದ 50 ಪೈಸೆಗಳವರೆಗೂ ಇತ್ತಂತೆ !25 ಕೆಜಿ ಗೋದಿ-30ಪೈಸೆಗಳು ಮಾತ್ರ.

25 ಕೆಜಿ ಬಾರ್ಲಿ-20 ಪೈಸೆಗಳು ಮಾತ್ರ.

25 ಲೀಟರ್ ಹಾಲು-60 ಪೈಸೆ ಮಾತ್ರ.

ಮೇಕೆ/ಕುರಿ-1 ಇಲ್ಲವೇ 2 ರೂಪಾಯಿಗಳು ಮಾತ್ರ

ಹಸು/ದನ-10 ರೂಪಾಯಿಗಳು.

ಕುದುರೆ-120 ರೂಪಾಯಿಗಳು(ಈಗ ಐಷಾರಮಿ ಕಾರು ಹೊಂದಿದ್ದರೆ ಇರುವ ಮರ್ಯಾದೆ ಆಗ ಕುದುರೆಯನ್ನು ಹೊಂದಿದ್ದರೆ ಇರುತ್ತಿತ್ತು)

25 ಕೆಜಿ ಚಿನ್ನ-19 ಸಾವಿರ ರೂಪಾಯಿಗಳಂತೆ( ಚಿನ್ನದ ಬೆಲೆ ಆಕಾಲದಲ್ಲೂ ಹೆಚ್ಚಾಗಿಯೇ ಇತ್ತಂತೆ)