ಏಡಿಗಳು ಹೆಚ್ಚು ಕಾಲ ಬಾಳುವುದು ತೀರ ಅಪರೂಪ ವಿಚಾರ. ಆದರೆ ನ್ಯೂಯಾರ್ಕ್ ನಲ್ಲಿ ಏಡಿಯೊಂದು ಬರೋಬ್ಬರಿ 132 ವರ್ಷ ಬದುಕಿದೆ.
ಕ್ಲಾಮ್ ಬಾರ್ ವೊಂದರಲ್ಲಿ ಕಳೆದ 20 ವರ್ಷಗಳಿಂದ ಆಕ್ವೇರಿಯಂನಲ್ಲಿದ್ದ ಈ ಏಡಿಯನ್ನು ಈಗ ಬಿಡುಗಡೆಗೊಳಿಸಲಾಗಿದೆ. ಆ್ಯಂಥೋನಿ ಎಂಬುವವರು 20 ವರ್ಷಗಳ ಹಿಂದೆ ಕ್ಲಾಮ್ ಬಾರ್ ಆರಂಭಿಸಿದ್ದರು.
ಈ ವೇಳೆ ಹಣ ನೀಡಿ ಲೂಯಿ ಹೆಸರಿನ ಏಡಿ ತಂದಿದ್ದರು. ಬಾರ್ ನಲ್ಲಿಯೇ ಆಕ್ವೇರಿಯಂ ಸಿದ್ದಪಡಿಸಿ, ಅದರಲ್ಲಿ ಏಡಿ ಸಾಕಿದ್ದರು. ಏಡಿಗೆ ಈಗ 132 ವರ್ಷಆಗಿರಬಹುದು ಎಂದು ಅಂದಾಜಿಸಲಾಗಿದೆ. ಲೂಯಿ ತೂಕ ಬರೋಬ್ಬರಿ 10 ಕೆ.ಜಿ. ಇದೆ ಎನ್ನುತ್ತಾರೆ ಆ್ಯಂಥೋನಿ.
ಕಳೆದ ವಾರ ಇಲ್ಲಿಗೆ ಆಗಮಿಸಿದ ಕೆಲವರು ಇದನ್ನು ತಮಗೆ ಮಾರುವಂತೆ ಕೋರಿದ್ದರು. ಈ ಮೊದಲು ಕೂಡ ಹಲವಾರು ಇದೇ ಬೇಡಿಕೆ ಇಟ್ಟಿದ್ದರು. ಆದರೆ ನನಗೆ ಆತನನ್ನು ಮಾರುವ ಇಚ್ಛೆ ಇರಲಿಲ್ಲ. ಈತ ನಮ್ಮ ಮನೆಯ ಸದಸ್ಯರಲ್ಲೊಬ್ಬನಾಗಿದ್ದ. ಆತನಿಗೆ ಸ್ವಾತಂತ್ರ್ಯ ನೀಡಲು ನಾವು ಇಚ್ಛಿಸಿದ್ದೆವು. ಹೀಗಾಗಿ ಲುಯಿಯನ್ನು ಸಮುದ್ರದಲ್ಲಿ ಬಿಟ್ಟು ಬಂದಿದ್ದೇವೆ ಎಂದು ಆ್ಯಂಥೋನಿ ತಿಳಿಸಿದ್ದಾರೆ.